ಪೋಲೀಸ್ ಇನ್ಸಪೆಕ್ಟರ್ ಮಾರುತಿ ನಾಯಕ್ ಜೊತೆ ಸಂಸದ ನಳಿನ್ ಕುಮಾರ್ ರುದ್ರನರ್ತನ
✍ ಹಾರಿಸ್ ಬೈಕಂಪಾಡಿ
ಪೋಲೀಸ್ ಅಧಿಕಾರಿ ಎನ್ನುವುದನ್ನು ಲೆಕ್ಕಿಸದೆ ಅವರ ಎದುರಿನಲ್ಲೇ ಟೇಬಲ್ ಗೆ ಬಡಿದು ಏಕವಚನ ಪ್ರಯೋಗಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಪೊಲೀಸ್ ಅಧಿಕಾರಿಯ ಕಯ್ಯಿಂದ ಮೊಬೈಲ್ ಕಸಿದುಕೊಳ್ಳಲು ವಿಪಲ ಯತ್ನ ನಡೆಸುವುದನ್ನು ನೋಡಿದರೆ ರಕ್ಷಣೆ ನೀಡುವ ಆರಕ್ಷಕನಿಗೇ ಗೌರವ ಇಲ್ಲದಂತೆ ತೋರುತ್ತಿದೆ.

ಮಂಗಳೂರು ಕಮೀಷನರ್ ವ್ಯಾಪ್ತಿಯ ಅತ್ಯಂತ ಕಡಕ್ ಆಫೀಸರ್ ಎOದೇ ಗುರುತಿಸಲ್ಪಡುವ ಎOತಹ ಸಂಧಿಗ್ಧ ಪರಿಸ್ತಿತಿಯಲ್ಲೂ ಪರಿಸ್ತಿತಿಯನ್ನು ಅತ್ಯಂತ ಯಶಸ್ವಿಯಾಗಿ ನಿಬಾಯಿಸ ಬಲ್ಲ ಒಬ್ಚ ಚಾಣಾಕ್ಷ ಆಧಿಕಾರಿಯಾದಂತಹ ಕದ್ರಿ ಠಾಣಾ ಪೋಲೀಸ್ ಇನ್ಸಪೆಕ್ಟರ್ ಮಾರುತಿ ನಾಯಕ್ ರವರ ಕರ್ತವ್ಯ ನಿಷ್ಟೆ ಮಂಗಳೂರಿನ ಪ್ರತಿಯೋಂದು ಸಾಮಾನ್ಯ ನಾಗರಿಕನಿಗೂ ಗೊತ್ತಿರುವ ಸಂಗತಿ,ಅಂತಹ ಒಬ್ಬ ಪ್ರಾಮಾಣಿಕ ಆಧಿಕಾರಿಯನ್ನು ಜಿಲ್ಲೆಯ ಸಂಸದರೊಬ್ಬರು ಸಾರ್ವಜನಿಕರ ಎದುರಿನಲ್ಲೇ ಹಿಗ್ಗಾ ಮುಗ್ಗಾ ಜಾಡಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿ ಮೊಬೈಲ್ ಕಸಿದುಕೊಳ್ಳಲು ಯತ್ನಿಸುವುದನ್ನು ನೋಡಿದರೆ ರಾಜಕಾರಣಿಗಳು ತಮ್ಮ ಮಾತುಕೇಳದ ಪೋಲೀಸ್ ಅಥವ ಇಲಾಖೆಯ ಮೇಲೆ ಎಷ್ಟು ಕೀಳುಮಟ್ಟದ ತಮ್ಮ ಪ್ರಬಾವ ವನ್ನು ಉತ್ತರ ಪ್ರದೇಶ,ಬಿಹಾರದ ರಾಜಕಾರಣಿಗಳಿಗಿಂತ ನಾವೇನು ಕಮ್ಮಿ ಇಲ್ಲ ಅಂದು ತೋರ್ಪಡಿಸಿದ್ದಾರೆ,
ಇತ್ತೀಚೆಗೆ ಕೇರಳ ಮುಖ್ಯಮಂತ್ರಿ ಪಿನರಾಯ್ ವಿಜಯನ್ ಕರ್ನಾಟಕದ ಗಡಿಬಾಗದ ಪ್ರದೇಶ ಮಂಜೇಶ್ವರಕ್ಕೆ ಕರ್ಣಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಆಗಮಿಸುವ ಕಾರ್ಯಕ್ರಮಕ್ಕೆ ಆಗಮಿಸಿ ಹಿOತುರುಗಿ ಹೋಗುವಾಗ ಬಿ.ಜೆ.ಪಿ ಯ ಸಾವಿರಾರು ಕಾರ್ಯಕರ್ತರು ರಹಸ್ಯವಾಗಿ ಹಠಾತ್ತಾಗಿ ಪಂಪ್ ವೆಲ್ ಮತ್ತು ಕಂಕನಾಡಿ ರೈಲು ನಿಲ್ದಾಣದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆಗಿಳಿದಾಗ ನೆರೆ ರಾಜ್ಯದ ಮುಖ್ಯಮಂತ್ರಿ ಯೊಬ್ಬರಿಗೆ ರಕ್ಷಣೆಕೊಟ್ಟು ಈ ರಾಜ್ಯದ ಗೌರವದ ವಿಷಯವಾಗಿದ್ದ ನೆರೆ ರಾಜ್ಯದ ಮುಖ್ಯಮಂತ್ರಿಯ ಭದ್ರತೆ ಉಸ್ತುವಾರಿಯನ್ನು ಮೇಲಾಧಿಕಾರಿಗಳ ಆದೇಶದಂತೆ ಅತ್ಯಂತ ಚಾಣಕ್ಷತನೆಯಿಂದ ಪರಿಸ್ತಿತಿಯನ್ನು ಇತರ ಅಧಿಕಾರಿಗಳೊOದಿಗೆ ನಿಬಾಯಿಸಿದ ಖ್ಯಾತಿ ಸಿಂಘO ಖ್ಯಾತಿಯ ಕದ್ರಿ ಇನ್ಸಪೆಕ್ಟರ್ ಮಾರುತಿ ನಾಯಕ್ ಗೆ ಸಲ್ಲಬೇಕು,
ಅದೇ ರೀತಿ ಇತ್ತೇಚೆಗೆ ದುಷ್ಕರ್ಮಿಗಳಿOದ ಹತ್ಯೆಗೀಡಾದ ಅಮಾಯಕ ಅಶ್ರಫ್ ಕಲಾಯಿ ಶವ ಯಾತ್ರೆ ಸಂದರ್ಭದಲ್ಲಿ ಬೆಳಗ್ಗೆ ಹತ್ಯೆಯಾದ ಸಮಯದಿOದ ಹಿಡಿದು ಏ.ಜೆ ಆಸ್ಪತ್ರೆಯಿಂದ ಸಂಜೆಯ ಹೊತ್ತಿನಲ್ಲಿ ಹೊರಟ ಅಶ್ರಫ್ ಕಲಾಯಿ ಯವರ ಪ್ರಾರ್ಥಿವ ಶರೀರ ಭದ್ರತಾ ಉಸ್ತುವಾರಿಯನ್ನು ಕಮೀಷನರೇಟ್ ವ್ಯಾಪ್ತಿಯಿಂದ ಜಿಲ್ಲಾ ವ್ಯಾಪ್ತಿಯ ಪರಿದಿಗೆ ಸೇರುವವರೆಗೂ ವೆರೆಗೂ 10,000 ದಷ್ಟು ಕಾರ್ಯಕರ್ತರ ಉದ್ವೇಗ,ಆವೇಶದ ನಡುವೆಯು ಯಾವುದೇ ರೀತಿಯ ಅಭದ್ರತೆಗೆ ಎಡೆಮಾಡಿಕೊಡದೆ ಬಹಳ ಸೂಕ್ಷ್ಮವಾಗಿ ಪರಿಸ್ಥಿತಿ ನಿಬಾಯಿಸಿದ್ದು ಈ ನಿಷ್ಟಾವಂತ ಪೋಲಿಸ್ ಅಧಿಕಾರಿ ಮಾತ್ರವಲ್ಲದೆ ದಾರಿ ಮಧ್ಯೆ ಉದ್ವಿಗ್ನ ವಾತಾವರಣವಿದ್ದಾಗ ಅದನ್ನು ಬಹಳ ಜಾಣ್ಮೆಯಿಂದ ನಿಭಾಯಿಸಿ ಅಲ್ಲಿದ್ದ ಜನರಿಗೆ ರಕ್ಷಣೆಕೊಡುವಲ್ಲಿ ಮುಖ್ಯಪಾತ್ರವಹಿಸಿದ್ದಾರೆ.
ಮತ್ತು RSS ಕಾರ್ಯಕರ್ತ ಶರತ್ ಶವಯಾತ್ರೆ ಸಂದರ್ಭದಲ್ಲೂ ಕಮೀಷನರೇಟ್ ವ್ಯಾಪ್ತಿಯಲ್ಲಿ ಉದ್ರಿಕ್ತ ಕಾರ್ಯಕರ್ತರು ಸOಯಮ ಕಳೆದು ಕೊOಡರೂ ತಾಳ್ಮೆ ವಹಿಸಿ ಬಲಪ್ರಯೋಗೀಸದೆ ಅತ್ಯಂತ ಯಶಸ್ವಿಯಾಗಿ ಕಮೀಷನರೇಟ್ ವ್ಯಾಪ್ತಿಯಲ್ಲಿ ಗಲಭೆಗೆ ಆಸ್ಪದ ನೀಡದೇ ಸಾರ್ವಜನಿಕರಿಗೆ ಯಾವುದೇ ತೋಂದರೆ ಹಾಗದಂತೆ ಪರಿಸ್ತಿತಿ ನಿಬಾಯಿಸಿದ ಗೌರವ ಈ ಅಧಿಕಾರಿಗೆ ಸಲ್ಲಬೇಕು,
ಜನರನ್ನು ಮೂರ್ಖರನ್ನಾಗಿಸುವ ಬಿಜೆಪಿಯ ಸಂಸದ ನಳಿನ್ ಕುಮಾರ್ ಕಟೀಲ್ ಹತಾಶ ಪ್ರಯತ್ನ ಇದೂ ಅಂತ ಜನರಿಗೆ ಗೊತ್ತಾಗ್ತಾ ಇದೆ ಅನ್ನೋ ಸತ್ಯ ಇನ್ನೂ ಬಿಜೆಪಿಯ ಅರಿವಿಗೆ ಬರದೇ ಇದ್ದದ್ದು ವಿಪರ್ಯಾಸ













