ಪ್ರತಿಪಕ್ಷದ ಮುಖಂಡರು, ಪ್ರಗತಿಪರರ ವಿರೋಧಿ ಅಮಿತ್ ಶಾ ಮಂಗಳೂರು ಸಮಾವೇಶ ಹುಬ್ಬಳ್ಳಿಗೆ ಸ್ಥಳಾಂತರ

Spread the love

ಪ್ರತಿಪಕ್ಷದ ಮುಖಂಡರು, ಪ್ರಗತಿಪರರ ವಿರೋಧಿ ಅಮಿತ್ ಶಾ ಮಂಗಳೂರು ಸಮಾವೇಶ ಹುಬ್ಬಳ್ಳಿಗೆ ಸ್ಥಳಾಂತರ

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನಜಾಗೃತಿ ಮೂಡಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ರ್ಯಾಲಿಯನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಹಿನ್ನೆಲೆಯನ್ನು ಪ್ರಧಾನಿ ಅವರನ್ನು ಅಭಿನಂದಿಸಲು ರಾಜ್ಯದ ನಾನಾ ಕಡೆ ಬಿಜೆಪಿ ಸಮಾವೇಶ ನಡೆಸಲಿದ್ದು, ಈ ಸಂಬಂಧ ಮಂಗಳೂರಿನಲ್ಲಿ ಅಮಿತ್ ಶಾ ರ್ಯಾಲಿ ನಡೆಸಬೇಕಿತ್ತು. ಆದರೆ ಅಮಿತ್ ಶಾ ಮಂಗಳೂರಿಗೆ ಆಗಮಿಸುವುದನ್ನು ಪ್ರತಿಪಕ್ಷದ ಮುಖಂಡರು ಹಾಗು ಪ್ರಗತಿಪರ ಚಿಂತಕರು ವಿರೋಧಿಸಿದ್ದು, ಈ ಕಾರಣದಿಂದ ಹುಬ್ಬಳ್ಳಿಯಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.

ಜ.18ರಂದು ಹುಬ್ಬಳ್ಳಿಯಲ್ಲಿ ಗೃಹ ಸಚಿವ ಅಮಿತ್ ಶಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ತಿಳಿಸಿದ್ದಾರೆ.


Spread the love