ಪ್ರಥಮ ಚಿಕಿತ್ಸೆ ಪ್ರತಿಯೊಬ್ಬ ಗೃಹರಕ್ಷಕರೂ ತಿಳಿದಿರಬೇಕು ಡಾ: ರಾಮಚಂದ್ರ ಭಟ್

Spread the love

ಪ್ರಥಮ ಚಿಕಿತ್ಸೆ ಪ್ರತಿಯೊಬ್ಬ ಗೃಹರಕ್ಷಕರೂ ತಿಳಿದಿರಬೇಕು ಡಾ: ರಾಮಚಂದ್ರ ಭಟ್
ಮಂಗಳೂರು : ಜನವರಿ 7 ರಂದು ಶ್ರೀ ಭಾರತೀ ಕಾಲೇಜು, ನಂತೂರಿನಲ್ಲಿ ಹೊಸದಾಗಿ ನೋಂದಾಯಿತ ಗೃಹರಕ್ಷಕರಿಗೆ ಪೂರ್ವಾಹ್ನ 10 ರಿಂದ 1 ಗಂಟೆಯವರೆಗೆ ಪ್ರಥಮ ಚಿಕಿತ್ಸೆಯ ಬಗ್ಗೆ ಡಾ| ರಾಮಚಂದ್ರ ಭಟ್‍ರವರು ತರಬೇತಿಯನ್ನು ನೀಡಿದರು. ಗಾಯಗೊಂಡು ರಕ್ತಸ್ರಾವವಾದಾಗ ಯಾವ ರೀತಿ ರಕ್ತ ಸೋರಿಹೋಗುವುದನ್ನು ತಡೆಗಟ್ಟಬಹುದು ಮತ್ತು ಎಲುಬು ಮುರಿದಾಗ ಯಾವ ರೀತಿ ಪ್ರಾಥಮಿಕ ಪ್ರಥಮ ಚಿಕಿತ್ಸೆ ನೀಡಬಹುದು ಎಂಬುದರ ಬಗ್ಗೆ ತಿಳಿಸಿದರು. ಅದೇ ರೀತಿ ಹಾವು ಕಚ್ಚಿದಾಗ, ಅಪಸ್ಮಾರ ಉಂಟಾದಾಗ ರೋಗಿಗಳಿಗೆ ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಅಪಘಾತವಾದ ತಕ್ಷಣ ಜೀವ ಉಳಿಯಲು ಯಾವ ರೀತಿ ಪ್ರಥಮ ಚಿಕಿತ್ಸೆ ಕೊಡಬೇಕು ಮತ್ತು ಗಾಯಗೊಂಡ ರೋಗಿಯನ್ನು ಯಾವ ರೀತಿ ಆಸ್ಪತ್ರೆಗೆ ಸಾಗಿಸಬೇಕು  ಎಂಬುದರ ಬಗ್ಗೆ ಮಾಹಿತಿ ನೀಡಿದರು.  ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳಕ್ಕೆ ಪ್ರಥಮ ಚಿಕಿತ್ಸೆ ಕಿಟ್ ಅನ್ನು ಜಿಲ್ಲಾ ಸಮಾದೇಷ್ಟರಾದ ಡಾ: ಮುರಲೀ ಮೋಹನ್ ಚೂಂತಾರುರವರಿಗೆ ಹಸ್ತಾಂತರ ಮಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಮಾದೇಷ್ಟರು ವಹಿಸಿದ್ದರು.  ಹಿರಿಯ ಗೃಹರಕ್ಷಕರಾದ ಸುರೇಶ್ ಶೇಠ್ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತರಬೇತುದಾರ ಶ್ರೀಧರ್ ರವರು ಉಪಸ್ಥಿತರಿದ್ದರು.  ಇದೇ ಸಂದರ್ಭದಲ್ಲಿ ಡಾ: ರಾಮಚಂದ್ರ ಭಟ್ ಅವರು ಬರೆದ ಪ್ರಥಮ ಚಿಕಿತ್ಸೆ ಬಗೆಗಿನ ಕಿರುಹೊತ್ತಿಗೆಯನ್ನು ಎಲ್ಲಾ 100 ಗೃಹರಕ್ಷಕರಿಗೂ ನೀಡಲಾಯಿತು.

Spread the love