ಪ್ರಮೋದ್ ಮಧ್ವರಾಜ್ ಸದ್ಯ ಜೆಡಿಎಸ್ ಪಕ್ಷದಲ್ಲಿದ್ದಾರೆ, ಕಾಂಗ್ರೆಸ್ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿಲ್ಲ -ವೀರಪ್ಪ ಮೊಯ್ಲಿ 

ಪ್ರಮೋದ್ ಮಧ್ವರಾಜ್ ಸದ್ಯ ಜೆಡಿಎಸ್ ಪಕ್ಷದಲ್ಲಿದ್ದಾರೆ, ಕಾಂಗ್ರೆಸ್ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿಲ್ಲ -ವೀರಪ್ಪ ಮೊಯ್ಲಿ 

ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಲೋಕಸಭಾ ಚುನಾವಣೆ ವೇಳೆ ಜೆಡಿಎಸ್ ಪಕ್ಷದಿಂದ ಟಿಕೇಟ್ ಪಡೆದು ಅಭ್ಯರ್ಥಿಯಾಗಿದ್ದು ಸದ್ಯ ಅವರು ಕಾಂಗ್ರೆಸ್ ಪಕ್ಷದ ಸದಸ್ಯರಲ್ಲ ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹೇಳೀದ್ದಾರೆ.

ಈ ಕುರಿತು ಅವರು ಉಡುಪಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಬಿ ಫಾರ್ಮ್ ಪಡೆದು ಅಭ್ಯರ್ಥಿಯಾಗಿದ್ದು ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿದ್ದಾರೆ ಆದ್ದರಿಂದ  ಅವರು ಈಗ ಕಾಂಗ್ರೆಸ್ ಪಕ್ಷದಲ್ಲಿಲ್ಲ . ಪ್ರಮೋದ್ ಮಧ್ವರಾಜ್ ಮತ್ತೆ ಕಾಂಗ್ರೆಸ್ ಪಕ್ಷದ ಸದಸ್ಯರಾಗಬೇಕಾದರೆ ಅರ್ಜಿ ಸಲ್ಲಿಸಿ ಮತ್ತೆ ಸದಸ್ಯರಾಗಬೇಕು. ಈ ವರೆಗೆ ಅಂತಹ ಅರ್ಜಿಯನ್ನು ಅವರು ಸಲ್ಲಿಸಿಲ್ಲ ಎಂದರು. ಒಮ್ಮೆ ಬೇರೆ ಪಕ್ಷದ ಬಿ ಫಾರ್ಮ್ ಪಡೆದ ಬಳಿಕ ಅವರಿಗೆ ಪಕ್ಷದಿಂದ ಉಚ್ಚಾಟನೆ ಮಾಡಬೇಕಾಗಿಲ್ಲ ಅವರು ಬೇರೆ ಪಕ್ಷದಿಂದ ಬಿ ಫಾರ್ಮ್ ಪಡೆದ ಬಳಿಕ ತನ್ನಿಂದ ತಾನೆ ಅವರ ಸದಸ್ಯತ್ವ ಕಾಂಗ್ರೆಸ್ ಪಕ್ಷದಲ್ಲಿ ರದ್ದಾಗುತ್ತದೆ ಎಂದರು.