ಪ್ರಾಧ್ಯಾಪಕರಿಂದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಎಬಿವಿಪಿ ಪ್ರತಿಭಟನೆ

Spread the love

ಪ್ರಾಧ್ಯಾಪಕರಿಂದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಎಬಿವಿಪಿ ಪ್ರತಿಭಟನೆ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರಿಂದ ಸಂಶೋಧನಾ ವಿದ್ಯಾರ್ಥಿನಿಯ ಮೇಲೆ ವಿಶ್ವವಿದ್ಯಾಲಯದ ಕೊಠಡಿಯಲ್ಲಿ ಈ ಹಿಂದೆ ದೌರ್ಜನ್ಯ ನಡೆಸಿರುವುದನ್ನು ಮತ್ತು ಸದರಿ ಪ್ರಕರಣದ ವಿಚಾರಣೆ ನಡೆದು ವರದಿ ನೀಡಿ 2 ವರ್ಷಗಳು ಸಾಗುತ್ತಾ ಬಂದಿದ್ದರೂ ಈವರಗೆ ಯಾವುದೇ ಕ್ರಮಕೈಗೊಳ್ಳದೆ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಿದ್ದನ್ನು ಖಂಡಿಸಿ ಅಭಾವಿಪ ಮಂಗಳೂರು ಶಾಖೆ ವತಿಯಿಂದ ಮಂಗಳೂರು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಎದುರು ಬೃಹತ್ ಪ್ರತಿಭಟನೆಯನ್ನು ಮಾಡಲಾಯಿತು.

ಪ್ರತಿಭಟನೆಯು ವಿಶ್ವವಿದ್ಯಾಲಯದ ಮಂಗಳ ಸಭಾಭವನದ ಮುಖಾಂತರ ಮೆರವಣಿಗೆಯ ಮೂಲಕ ಆಡಳಿತ ಸೌಧದವರೆಗೆ ನಡೆಯಿತು. ಈ ಸಂದರ್ಭದಲ್ಲಿ ದೌರ್ಜನ್ಯ ಎಸಗಿದ ಪ್ರೊ. ಅರಬಿ ಹಾಗೂ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ಮಾಡಿದ ಪ್ರೊ. ಎ ಎಂ ಖಾನ್ ಅವರ ವಿರುದ್ಧ ಘೋಷಣೆಗಳನ್ನು ವಿದ್ಯಾರ್ಥಿಗಳು ಕೂಗಿದರು. ಅಲ್ಲದೇ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಸಂದೇಶ್ ಅವರು, ಇಬ್ಬರು ಆರೋಪಿಗಳನ್ನು ತಕ್ಷಣವೇ ಅಮಾನತುಗೊಳಿಸಬೇಕು ಮತ್ತು ಅವರ ಇಬ್ಬರ ವಿರುದ್ಧ ದೂರನ್ನು ದಾಖಲಿಸಿ ಸೂಕ್ತ ಶಿಕ್ಷೆ ಆಗುವ ಹಾಗೇ ವಿಶ್ವವಿದ್ಯಾಲಯ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಶ್ವವಿದ್ಯಾಲಯವನ್ನು ಒತ್ತಾಯಿಸಿದರು.

ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಕು. ದೀಪ್ತಿ ಮಡಿವಾಳ ಅವರು ಮಾತನಾಡಿ ಇಬ್ಬರು ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಮತ್ತು ಇನ್ನೂ ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಒಸಬೇಕೆಂದು ಆಗ್ರಹಿಸದಳು.

ಪ್ರತಿಭಟನೆಯ ಕೊನೆಯಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಪಿ. ಎಸ್ ಯಡಪಡಿತ್ತಾಯ ಅವರು ವಿದ್ಯಾರ್ಥಿ ಪರಿಷತ್ತಿನ ಮನವಿಯನ್ನು ಸ್ವೀಕರಿಸಿ ನಂತರ ಮಾತನಾಡಿದ ಕುಲಪತಿಗಳು, ನನ್ನ ಆಡಳಿತದಲ್ಲಿ ಯಾವುದೇ ಕಾರಣಕ್ಕೂ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಕಾನೂನಿನ ಪ್ರಕಾರ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುತ್ತದೆ.

ಅಲ್ಲದೇ ಪ್ರತಿಭಟನೆಯಲ್ಲಿ ವಿದ್ಯಾರ್ಥಿ ನಾಯಕರಾದ ಆಶೀಶ್ ಅಜ್ಜಿಬೆಟ್ಟು, ನಿಶಾನ್ ಆಳ್ವ, ಶ್ರೇಯಸ್ ಶೆಟ್ಟಿ, ಆದಿತ್ಯ, ಹರ್ಷಿತ್, ಕು. ಸುಶಾನ ಹಾಗೂ ಕು. ಆತ್ಮೀಕಾ ಅವರು ಉಪಸ್ಥಿತರಿದ್ದರು.


Spread the love