ಪ್ರಾಪರ್ಟಿ ಕಾರ್ಡ್ ಅವ್ಯವಸ್ಥೆ –  ವೇದವ್ಯಾಸ್ ಕಾಮತ್

ಪ್ರಾಪರ್ಟಿ ಕಾರ್ಡ್ ಅವ್ಯವಸ್ಥೆ –  ವೇದವ್ಯಾಸ್ ಕಾಮತ್

ದಿನಾಂಕ 25.10.2018 ರಂದು ಕರ್ನಾಟಕ ಸರಕಾರವು ನಂ RD 187 MUNOSA 2018 ರಂತೆ ಒಂದು ನೋಟಿಫಿಕೇಷನ್ ಮಾಡಿದ್ದು ಯಾವುದೇ ಸ್ಥಳ/ಅಪಾರ್ಟ್ಮೆಂಟ್,ಅಂಗಡಿ ಮುಂತಾದವುಗಳನ್ನು ಯಾವುದೇ ರೀತಿಯಲ್ಲಿ ಪರಭಾರೆ,ಆಡವು ಮತ್ತು ಕುಟುಂಬದೊಳಗೆ ಆಗುವ ವಿಭಾಗಪತ್ರ,ದಾನ,ಹಕ್ಕು ಖುಲಾಸೆ,ವ್ಯವಸ್ಥಾ ಪತ್ರ ಮಾಡುವ ಸಂಧರ್ಭದಲ್ಲಿ ಹಲವು ಮುಂದೂಡಿಕೆಗಳ ನಂತರ ದಿನಾಂಕ 10.06.2019 ರಿಂದ ಅನ್ವಯವಾಗುವಂತೆ ಯಾವುದೇ ಪರಭಾರೆಗೆ ಪ್ರಾಪರ್ಟಿ ಕಾರ್ಡನ್ನು ಕಡ್ಡಾಯಗೊಳಿಸಲಾಗಿದೆ.ಮಂಗಳೂರು ಸಬ್ ರಿಜಿಸ್ಟ್ರಾರ್ ತಾಲೂಕು ಮತ್ತು ನಗರದಲ್ಲಿ ಒಟ್ಟು 1,70,000ಕ್ಕೂ ಅಧಿಕ ಆಸ್ತಿಗಳಿದ್ದು ಈಗ ದೊರಕಿರುವ ಮಾಹಿತಿ ಪ್ರಕಾರ ಕೇವಲ 30 ರಿಂದ 25 ಸಾವಿರ ಆಸ್ತಿಗಳಿಗೆ ಮಾತ್ರ ಪ್ರಾಪರ್ಟಿ ಕಾರ್ಡ್ ನೀಡಲಾಗಿದೆ (ಅಂದರೆ ಸುಮಾರು 20%)

ಶಿವಮೊಗ್ಗ ಜಿಲ್ಲೆಯಲ್ಲಿ ಆಸ್ತಿ ಪರಭಾರೆಗೆ ಪ್ರಾಪರ್ಟಿ ಕಾರ್ಡೇ ಕಡ್ಡಾಯಗೊಳಿಸುವಾಗ ಹೆಚ್ಚು ಕಡಿಮೆ 80% ಪ್ರಾಪರ್ಟಿ ಕಾರ್ಡನ್ನು ಜನರಿಗೆ ವಿತರಿಸಲಾಗಿತ್ತು ಆದರೆ ಮಂಗಳೂರಿನ ಜನತೆಯ ತಾಳ್ಮೆಯನ್ನು ಪರಿಶೀಲಿಸುವುದಕ್ಕಾಗಿಯೇ ಅಥವ ಮಂಗಳೂರಿನ ಜನರಿಗೆ ತೊಂದರೆ ನೀಡುವ ಏಕಮೇವ ಉದ್ಧೇಶದಿಂದ ಸರಕಾರವು ಇದನ್ನು ಹೇರಿರುವುದನ್ನು ಮಂಗಳೂರಿನ ಜನತೆ ಖಂಡಿಸುತ್ತಾರೆ.

ಸುಮಾರು ಎರಡು ತಿಂಗಳ ಹಿಂದೆ ಕಡ್ಡಾಯವಾಗಿ ಪ್ರಾಪರ್ಟಿ ಕಾರ್ಡ್ ನೀಡಬೇಕಾದುದನ್ನು ಮುಂದೂಡುವ ಸಮಯದಲ್ಲಿ UPOR ಕಚೇರಿಯಲ್ಲಿ ಸಾರ್ವಜನಿಕರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಪೂರೈಕೆ ಮಾಡಿದ ನಂತರವೇ ಪ್ರಾಪರ್ಟಿ ಕಾರ್ಡನ್ನು ಕಡ್ಡಾಯಗೊಳಿಸುವುದಾಗಿ ಭೂ ದಾಖಲೆಗಳ ಆಯುಕ್ತರು ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

UPOR ಕಚೇರಿಯ ಎಲ್ಲಾ ವ್ಯವಸ್ಥೆಗಳು ಸದ್ಯಕ್ಕೆ ಸಂಪೂರ್ಣ ಅವ್ಯವಸ್ಥೆಯಲ್ಲಿದೆ.ಇಲ್ಲಿ ಯಾರಿಗೂ ಸರಿಯಾದ ಮಾಹಿತಿ ಸಿಗುತ್ತಿಲ್ಲ.ಅಲ್ಲದೆ ಬೇಕಾದ Computers,scanners,CAD ವ್ಯವಸ್ಥೆ ಇನ್ನು ಕೂಡ ಸರಿಯಾಗಿರುವುದಿಲ್ಲ.ಬಂದ ನಾಗರಿಕರಿಗೆ ಕುಳಿತುಕೊಳ್ಳಲು ಬೇಕಾದ ಸ್ಥಳಾವಕಾಶ ಹಾಗೂ ಆಸನಗಳಿಲ್ಲ ಮತ್ತು ಶೌಚಾಲಯಗಳಿಲ್ಲ.ಆದುದರಿಂದ ಮಂಗಳೂರು ಶಹರದಲ್ಲಿರುವ ಎಲ್ಲಾ 32 ಗ್ರಾಮಗಳಲ್ಲಿರುವ ಆಸ್ತಿಗಳ ಪೈಕಿ 75 ಶೇಕಡಕ್ಕಿಂತಲೂ ಅಧಿಕ ಆಸ್ತಿಗಳಿಗೆ ಪ್ರಾಪರ್ಟಿ ಕಾರ್ಡ್ ನೀಡಿದ ನಂತರ ಪ್ರಾಪರ್ಟಿ ಕಾರ್ಡುಗಳು ಕಡ್ಡಾಯಗೊಳಿಸುವುದು ಕಾನೂನು ಪ್ರಕಾರ ಸಮಂಜಸವಾಗಿದೆ ಹಾಗೂ 10.06.2019ರಿಂದ ಸ್ಥಿರಾಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಮಾಡುವುದನ್ನು ಮುಂದೂಡುವಂತೆ ಈಗಾಗಲೇ ಮಾನ್ಯ ಕಂದಾಯ ಸಚಿವರಿಗೆ ಬೆಂಗಳೂರಿನಲ್ಲಿ ಎರಡು ಮೂರು ಬಾರಿ ಮನವಿ ಮಾಡಿರುತ್ತೇವೆ.ಸ್ತಿರಾಸ್ತಿ ನೊಂದಾವಣೆಗೆ ಪ್ರಾರ್ಪಟಿ ಕಾರ್ಡ್ ಕಡ್ಡಾಯ ಮಾಡುವುದನ್ನು ಮುಂದೂಡುವಂತೆ ಈಗಾಗಲೇ ಮಾನ್ಯ ಕಂದಾಯ ಮಂತ್ರಿಗಳಾದ ಆರ್ ವಿ ದೇಶಪಾಂಡೆ ಅವರಿಗೆ, ಅದೇ ರೀತಿಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಬೆಂಗಳೂರಿನಲ್ಲಿ ಮೂರು ಬಾರಿ ಮನವಿಯನ್ನು ಸಲ್ಲಿಸಿದ್ದೇನೆ. ಅದರ ಫೋಟೋ ಸಮೇತ ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುತ್ತದೆ. ಈಗಾಗಲೇ ಪ್ರಾರ್ಪಟಿ ಕಾರ್ಡ್ ನ ಅವ್ಯವಸ್ಥೆಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕೊಡಲಾಗಿದೆ. ಪ್ರಾರ್ಪಟಿ ಕಾರ್ಡ್ ಪ್ರಾರಂಭ ಮಾಡುವಾಗ ಅದರಲ್ಲಿ ಈ ಹಿಂದೆ ಸರಕಾರದ ಆರ್ ಟಿಸಿಯಲ್ಲಿ ಸರ್ವೆ ನಂಬರ್ ಮೂಲಕವಾಗಿ ಆರ್ ಟಿಸಿಯನ್ನು ಎಲ್ಲಾ ಜನರು ಉಪಯೋಗಿಸುತ್ತಿದ್ದರು. ಈಗ ಹೊಸದಾಗಿ ಪ್ರಾರ್ಪಟಿ ಕಾರ್ಡ್ ಮಾಡಿಸುವಾಗ ಅದರಲ್ಲಿ ಸರ್ವೆ ನಂಬರ್ ಇರುವುದಿಲ್ಲ. ಹಾಗಿರುವಾಗ ಅದೇ ಆರ್ ಟಿಸಿಗೆ ಸರ್ವೆ ನಂಬರ್ ಗೆ ಒಳಪಟ್ಟಂತಹ ಪ್ರಾರ್ಪಟಿ ಕಾರ್ಡ್ ನ ಮಾಹಿತಿಗಳು ಸಿಗುವುದಿಲ್ಲ. ಇನ್ನು ಪ್ರಾರ್ಪಟಿ ಕಾರ್ಡ್ ನಲ್ಲಿ ಪ್ರಾಪರ್ಟಿ ಕಾರ್ಡ್ ನಂಬ್ರ ಇದ್ದರೆ ಆರ್ಟಿಸಿಯಲ್ಲಿ ಸರ್ವೆ ನಂಬ್ರ ಇರುತ್ತದೆ. ಹಾಗಾಗಿ ಪ್ರಾರ್ಪಟಿ ಕಾರ್ಡ್ ಸರ್ವೆ ನಂಬ್ರ ನಮೂದಿಸಬೇಕು ಎನ್ನುವುದು ನಮ್ಮ ಒತ್ತಾಯ ಎಂದು ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದರು.

ನಾಲ್ಕು ಗೋಡೆ ಕಟ್ಟಿದ ತಕ್ಷಣ ಗೃಹ ಪ್ರವೇಶ ಮಾಡಲಾಗುವುದಿಲ್ಲ. ಮನೆ ಸಂಪೂರ್ಣ ಆದ ನಂತರ ಗೃಹ ಪ್ರವೇಶ ಮಾಡಲಾಗುವುದು. ಅದೇ ರೀತಿಯಲ್ಲಿ ಪ್ರಾರ್ಪಟಿ ಕಾರ್ಡ್ ನಲ್ಲಿ ಎಲ್ಲಾ ಅವ್ಯವಸ್ಥೆ ಇರುವಾಗ ಪ್ರಾರ್ಪಟಿ ಕಾರ್ಡ್ ಜನರ ಮೇಲೆ ಹೇರುವುದು ಸರಿಯಲ್ಲ. ಇನ್ನು ಅಧಿಕಾರಿಗಳ ಬಳಿ ಕೇಳಿದರೆ ಪ್ರಾರ್ಪಟಿ ಕಾರ್ಡ್ ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಅನುಷ್ಟಾನ ಆದಾಗ ಆರ್ಟಿಸಿ ಅವಶ್ಯಕತೆ ಇರುವುದಿಲ್ಲ, ಖಾತಾದ ಅವಶ್ಯಕತೆ ಇರುವುದಿಲ್ಲ, ಹತ್ತು ಹಲವಾರು ದಾಖಲೆಗಳ ಅವಶ್ಯಕತೆ ಇರುವುದಿಲ್ಲ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಆದರೆ ಆರ್ಟಿಸಿ ಕಂದಾಯ ಇಲಾಖೆ ಅಂದರೆ ರೆವೆನ್ಯೂ ಇಲಾಖೆಗೆ ಸಂಬಂಧಪಟ್ಟ ದಾಖಲೆ. ಖಾತಾ ಅರ್ಬನ್ ಡೆವೆಲಪಮೆಂಟ್ ಗೆ ಸಂಬಂಧಪಟ್ಟ ದಾಖಲೆ ಮತ್ತು ಇದನ್ನು ಮಂಗಳೂರು ಮಹಾನಗರ ಪಾಲಿಕೆ ಕೊಡುವ ದಾಖಲೆಯಾಗಿರುತ್ತದೆ. ಹಾಗಿರುವಾಗ ಅರ್ಬನ್ ಡೆವೆಲಪಮೆಂಟಿನಿಂದ ಹಾಗೂ ಪಾಲಿಕೆಯಿಂದ ಮುಂದಿನ ದಿನಗಳಲ್ಲಿ ಪ್ರಾರ್ಪಟಿ ಕಾರ್ಡ್ ಸಂಪೂರ್ಣ ಅನುಷ್ಟಾನಗೊಂಡಾಗ ಖಾತಾ ಅವಶ್ಯಕತೆ ಇರುವುದಿಲ್ಲ ಎಂದು ಯಾವುದೇ ಒಂದು ಆದೇಶವನ್ನು ಹೊರಡಿಸಿರುವುದು ಎಲ್ಲಿಯಾದರೂ ಇದ್ದರೆ ಅಧಿಕಾರಿಗಳು ತೋರಿಸಬೇಕು. ಒಮ್ಮೆ ಪ್ರಾರ್ಪಟಿ ಕಾರ್ಡ್ ಅನುಷ್ಟಾನಕ್ಕೆ ಬಂದರೆ ಖಾತಾ ಅವಶ್ಯಕತೆ ಇರುವುದಿಲ್ಲ ಎಂದು ನಗರಾಭಿವೃದ್ಧಿ ಸಚಿವರು ಅಥವಾ ಮಂಗಳೂರು ಮಹಾನಗರ ಪಾಲಿಕೆ ಹೇಳಬೇಕಿದೆ. ಇದು ಹೇಳದೆ ಜನರನ್ನು ಮರಳು ಮಾಡಲಾಗುತ್ತಿದೆ. ಇನ್ನೊಂದು ಎಲ್ಲಿಯಾದರೂ ಪಾಪದವರು ಹಕ್ಕುಪತ್ರದ ಮುಖಾಂತರ ಸಿಕ್ಕಿಂದಂತಹ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರೆ ಇಲ್ಲಿ ಆ ಜಾಗದಲ್ಲಿ ಹಕ್ಕುಪತ್ರ ಪಡೆದುಕೊಂಡು ಮನೆ ಕಟ್ಟಿ ಮನೆಯಲ್ಲಿ ಇದ್ದವರು ಆ ದಾಖಲೆಗಳನ್ನು ನೋಡಿದಾಗ ಈ ಎಲ್ಲಾ ದಾಖಲೆಗಳನ್ನು ಪ್ರಾಪರ್ಟಿ ಕಾರ್ಡ್ ನಲ್ಲಿ ಹಕ್ಕುಪತ್ರದಿಂದ ಪಡೆದುಕೊಂಡ ಜಾಗ ಎಂದು ಅಲ್ಲಿ ಕೂಡ ತೋರಿಸಲಾಗುವುದಿಲ್ಲ. ಅದು ಕರ್ನಾಟಕ ಸರಕಾರದ ಜಾಗ ಅಂತ ಎಂದು ತೋರಿಸಲ್ಪಡುತ್ತದೆ. ಆದರೆ ಪ್ರಾರ್ಪಟಿ ಕಾರ್ಡ್ ನಲ್ಲಿ ಹಕ್ಕುಪತ್ರದಿಂದ ಪಡೆದುಕೊಂಡ ಮನೆ ನಿವೇಶನ ಎಂದು ತೋರಿಸಿಕೊಳ್ಳಲು ಯಾವುದೇ ಕಾಲಂಗಳು ಇರುವುದಿಲ್ಲ. ಹೀಗಿರುವಾಗ ಹಕ್ಕುಪತ್ರ ಪಡೆದುಕೊಂಡಿರುವ ಪಾಪದವರು ಸರಕಾರದ ಜಾಗದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿ ಆ ದಾಖಲೆ ಹೇಳುತ್ತದೆ. ಇದನ್ನು ಸರಿಪಡಿಸುವುದು ಯಾರು? ಎಂದು ಶಾಸಕ ಕಾಮತ್ ಪ್ರಶ್ನಿಸಿದ್ದಾರೆ.

ನೀವು ನಾಲ್ಕರಿಂದ ಐದು ಬಾರಿ ಈ ಪ್ರಾರ್ಪಟಿ ಕಾರ್ಡ್ ಅನುಷ್ಟಾನ ಮಾಡುವುದು ಮುಂದೂಡುತ್ತಾ ಬಂದಿದ್ದೀರಿ. ಸರಿಯಾಗಿ ಇದ್ದಲ್ಲಿ ಯಾಕೆ ಮುಂದೂಡುತ್ತಾ ಬಂದಿದ್ದೀರಿ. ಈ ವಿಷಯ ಕೂಡ ನೋಡಬೇಕಾಗಿದೆ. ಹಾಗಾಗಿ ಈ ಎಲ್ಲವನ್ನು ಸರಿಪಡಿಸಬೇಕು ಎನ್ನುವುದು ನನ್ನ ಆಗ್ರಹ ಎಂದು ಕಾಮತ್ ಒತ್ತಾಯಿಸಿದರು. ಇದರೊಂದಿಗೆ 2102-2013 ರಲ್ಲಿ ಹಲವು ಸಾರ್ವಜನಿಕರು ಪ್ರಾರ್ಪಟಿ ಕಾರ್ಡ್ ಗೆ ಪ್ರಾರ್ಪಟಿ ಕಾರ್ಡ್ ಇಲಾಖೆಗೆ ತಮ್ಮ ಮನವಿಯನ್ನು ಸಲ್ಲಿಸಿ ಪ್ರಾರ್ಪಟಿ ಕಾರ್ಡ್ ಮಾಡಿಸಿಕೊಡಲು ಮನವಿ ಮಾಡಿದ್ದಾರೆ. 2012-2013 ರಲ್ಲಿ ಸಲ್ಲಿಸಿದ ಮನವಿ 2019 ಆದರೂ ಪ್ರಾರ್ಪಟಿ ಕಾರ್ಡ್ ಸಿಗುತ್ತಿಲ್ಲ. ಅದರ ಉದಾಹರಣೆಗಳು ನನ್ನಲ್ಲಿ ನಾಲ್ಕೈದು ಇದೆ. ಅದನ್ನು ಮಾಧ್ಯಮದವರ ಮುಂದೆ ಇಟ್ಟಿದ್ದೇನೆ. ಈ ನಾಲ್ಕೈದು ಮಾತ್ರವಲ್ಲ ಸಾವಿರಾರು ಜನರು ತೊಂದರೆಗೊಳಗಾದ ದಾಖಲೆಗಳಿವೆ. ಪಾಪದವರು ಪ್ರಾರ್ಪಟಿ ಕಾರ್ಡ್ ಗೆ ಅರ್ಜಿ ಹಾಕಿದ್ರೂ ಅಂತವರ ಮನೆಯಲ್ಲಿ ಯಾವುದೇ ಸರ್ವೆ ನಂಬ್ರ ಬರುತ್ತಾ ಇಲ್ಲ. ಬ್ರೋಕರ್ ಗಳು ಪ್ರಾರ್ಪಟಿ ಕಾರ್ಡ್ ಅನ್ನು ಒಂದು ವಾರದಲ್ಲಿ ಮಾಡಿಕೊಡುತ್ತಾರೆ ಎಂದು ಸಾವಿರಾರು ರೂಪಾಯಿಗಳನ್ನು ಸಾರ್ವಜನಿಕರಿಂದ ಲೂಟಿ ಮಾಡುತ್ತಿದ್ದಾರೆ. ಇದೆಲ್ಲವನ್ನು ಪ್ರಾರ್ಪಟಿ ಕಾರ್ಡ್ ಅನುಷ್ಟಾನ ಮಾಡುವ ಸಂದರ್ಭದಲ್ಲಿ ನೋಡಬೇಕಾಗಿರುವ ಜವಾಬ್ದಾರಿ ಯಾರದ್ದು? ನಿಮ್ಮದೇ ಅಲ್ವಾ ಸ್ವಾಮಿ ಎಂದು ಶಾಸಕ ಕಾಮತ್ ರಾಜ್ಯ ಸರಕಾರವನ್ನು ಪ್ರಶ್ನಿಸಿದ್ದಾರೆ.
ಪ್ರಾರ್ಪಟಿ ಕಾರ್ಡ್ ಗೆ ಶಾಸಕರು ವಿರುದ್ಧ ಇಲ್ಲ. ಹೊಸದಾಗಿ ಅನುಷ್ಟಾನಕ್ಕೆ ತರುವಾಗ ಇದನ್ನೆಲ್ಲ ನೋಡಬೇಕಾಗಿರುವ ಜವಾಬ್ದಾರಿ ಸಾಮಾನ್ಯವಾಗಿ ಅಧಿಕಾರಿಗಳದ್ದು. ನೀವು ನೋಡದೇ ಇದ್ದದ್ದು ನಿಮ್ಮದೇ ತಪ್ಪು.ಸರಕಾರ ಮಾಡಿದ ತಪ್ಪಿಗೆ ಇವತ್ತು ಸಾರ್ವಜನಿಕರು ಬಲಿಯಾಗುತ್ತಿದ್ದಾರೆ. ಈ ಹಿಂದೆ ಜಗದೀಶ್ ಪಿ ಎನ್ನುವವರು ಉದ್ದೇಶಿತ ನಗರ ಮಾಪನ ದಾಖಲಾತಿಯ ವಿಷಯದ ಬಗ್ಗೆ ಆಗುತ್ತಿರುವ ಎಲ್ಲಾ ಅವ್ಯವಸ್ಥೆಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಅದನ್ನೂ ಕೂಡ ಮಾಧ್ಯಮದ ದಾಖಲೆಯನ್ನು ಸಲ್ಲಿಸುತ್ತಿದ್ದೇನೆ. ಅದರಲ್ಲಿ ಸೆಂಟ್ಸ್ ಮೆಂಶನ್ ಇಲ್ಲ, ಅನ್ ಡಿವೈಡ್ ರೈಟ್ ಮೆಂಶನ್ ಇಲ್ಲ ಮತ್ತು ಸರ್ವೆ ನಂಬರ್ ಮೆಂಶನ್ ಇಲ್ಲ. ಒಂದು ಫ್ಲಾಟಿನಲ್ಲಿ ಎಲ್ಲರಿಗೂ ಪಾರ್ಕಿಂಗ್ ನಿಗದಿಪಡಿಸಿ ಫ್ಲಾಟ್ ಅನ್ನು ಖರೀದಿಸುವಾಗ ಪಾರ್ಕಿಂಗ್ ಕೊಟ್ಟಿರುತ್ತಾರೆ. ಅಲ್ಲಿ ಪಾರ್ಕಿಂಗ್ ಪಡೆದುಕೊಂಡಿರುವ ದಾಖಲೆ ಸಬ್ ರಿಜಿಸ್ಟಾರ್ ಮೂಲಕ ಅವರು ರಿಜಿಸ್ಟ್ರೀಶನ್ ಮಾಡಿಕೊಂಡಿರುವುದು ಎಲ್ಲಾ ದಾಖಲೆ ಇದೆ. ಆದರೆ ಆ ಪಾರ್ಕಿಂಗ್ ಜಾಗ ಪ್ರಾರ್ಪಟಿ ಕಾರ್ಡ್ ನಲ್ಲಿ ತೋರಿಸಿಕೊಡುವುದು ಆಗುತ್ತಾ ಇಲ್ಲ. ಹಾಗಾದರೆ ಆ ಪಾರ್ಕಿಂಗ್ ಜಾಗವನ್ನು ಅವರು ಬಿಟ್ಟುಕೊಡಬೇಕಾ ಎನ್ನುವುದು ಇದೆ. ತಂದೆಯೊಬ್ಬರು ಮಗಳಿಗೆ ಮದುವೆ ಮಾಡಿಸುವಾಗ ದಾನಪತ್ರದ ಮುಖಾಂತರ ಒಂದು ಜಾಗವನ್ನು ಕೊಡುತ್ತಾರೆ. ಆದರೆ ತಂದೆ ಮಗಳಿಗೆ ಕೊಡುವ ದಾನಪತ್ರದ ಮುಖಾಂತರ ಕೊಡುವಂತದ್ದು ಪ್ರಾರ್ಪಟಿ ಕಾರ್ಡ್ ನಲ್ಲಿ ಎಲ್ಲಿ ಕೂಡ ತೋರಿಸಲು ಆಗುವುದಿಲ್ಲ. ಇದನ್ನೆಲ್ಲಾ ಸರಿಪಡಿಸುವುದು ಯಾರು? ಇದನ್ನೆಲ್ಲಾ ಸರಿಪಡಿಸುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಒಂದು ವೇಳೆ ಕೆಲವು ದಿನಗಳ ಒಳಗೆ ಸರಿಯಾಗದಿದ್ದರೆ ಮುಂದಿನ ದಿನಗಳಲ್ಲಿ ಒಂದು ದಿನದ ಅನ್ನ ಸತ್ಯಾಗ್ರಹ, ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಒಂದು ವೇಳೆ ಆಗಲೂ ಸರಿಯಾಗದಿದ್ದರೆ ಜನರನ್ನೆಲ್ಲಾ ಸೇರಿಸಿಕೊಂಡು ಉಗ್ರ ಪ್ರತಿಭಟನೆಯನ್ನು ಮಾಡಲಾಗುವುದು.