ಪ್ರೇಮಿಯಿಂದ ಇರಿತಕ್ಕೊಳಗಾದ ಯುವತಿ  ಚಿಕಿತ್ಸೆಗೆ ಸ್ಪಂದನೆ

Spread the love

ಪ್ರೇಮಿಯಿಂದ ಇರಿತಕ್ಕೊಳಗಾದ ಯುವತಿ  ಚಿಕಿತ್ಸೆಗೆ ಸ್ಪಂದನೆ

ಮಂಗಳೂರು: ತನ್ನದೇ ಪ್ರಿಯಕರನಿಂದ ಚೂರಿ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ದೀಕ್ಷಾ ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ತಿಳಿದು ಬಂದಿದೆ.

ದೀಕ್ಷಾ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ಗಾಳಿ ಸುದ್ದಿ ಬೆಳಗ್ಗಿನಿಂದ ಹರಡುತ್ತಿದ್ದು ಇದು ಸತ್ಯಕ್ಕೆ ದೂರವಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ ಎನ್ನಲಾಗಿದೆ.

ಶುಕ್ರವಾರ ಸಂಜೆ ಬಗಂಬಿಲ ಶಾಂತಿಧಾಮದ ರಸ್ತೆಯಾಗಿ ಕಾಲೇಜಿನಿಂದ ಮನೆಗೆ ತೆರಳುತ್ತಿದ್ದ ದೀಕ್ಷಾ ಕೋಟ್ಯಾನ್(21)ರನ್ನು ಶಕ್ತಿನಗರ ರಾಮಶಕ್ತಿ ಮಿಷನ್ ಬಳಿ ನಿವಾಸಿ ಸುಶಾಂತ್ (27)ಎಂಬ ಯುವಕನು ಸ್ಕೂಟರಲ್ಲಿ ಬಂದು ಅಡ್ಡಕಟ್ಟಿ ದೀಕ್ಷಾಳ ಎದೆ,ಕೈ,ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು ಅದೇ ಚಾಕುವಿನಿಂದ ತನ್ನದೇ ಕತ್ತನ್ನು ಕುಯ್ದು ಆತ್ಮ ಹತ್ಯೆಗೆ ಯತ್ನಿಸಿದ್ದ. ಘಟನೆಯನ್ನು ಸ್ಥಳೀಯರು ನೋಡುತ್ತಿದ್ದರೂ ಅವರಿಗೆ ಚಾಕು ತೋರಿಸಿ ಹತ್ತಿರ ಬಾರದಂತೆ ಸುಶಾಂತ್ ಬೆದರಿಸಿದ್ದ. ರಕ್ತ ಸ್ರಾವದಿಂದ ಸುಶಾಂತ್ ಕೂಡಾ ಕುಸಿದು ಬಿದ್ದಿದ್ದು ಕೂಡಲೇ ಇಬ್ನರೂ ಗಾಯಾಳುಗಳನ್ನು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.


Spread the love