ಪ್ರೊ.ಯು ಎಲ್ ಆಚಾರ್ಯರ ಜನ್ಮ ಶತಮಾನೋತ್ಸವಕ್ಕೆ ವಿಶೇಷ ಅಂಚೆ ಲಕೋಟೆ ಬಿಡುಗಡೆ 

Spread the love

ಪ್ರೊ.ಯು ಎಲ್ ಆಚಾರ್ಯರ ಜನ್ಮ ಶತಮಾನೋತ್ಸವಕ್ಕೆ ವಿಶೇಷ ಅಂಚೆ ಲಕೋಟೆ ಬಿಡುಗಡೆ 

ಉಡುಪಿ: ಒಬ್ಬ ವಿಶಿಷ್ಟ ವ್ಯಕ್ತಿಯನ್ನು ನೆನಪಿಸಿಕೊಳ್ಳುವ, ವಿಶೇಷ ಸಂದರ್ಭವನ್ನು ಚಿರಸ್ಮರಣೀಯಗೊಳಿಸುವ, ಒಂದು ಸ್ಥಳದ ವಿಶೇಷತೆಯ ವಿವರ ನೀಡಲು ಭಾರತೀಯ ಅಂಚೆ ಇಲಾಖೆ ಗ್ರಾಹಕರಿಗೆ ನೀಡುವ ಒಂದು ವಿನೂತನ ಕೊಡುಗೆ ವಿಶೇಷ ಅಂಚೆ ಲಕೋಟೆ ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ಹರ್ಷ ಎನ್ ರವರು ಅಭಿಪ್ರಾಯಪಟ್ಟರು.

ಅವರು ಮಂಗಳೂರು ಅಂಚೆ ವಿಭಾಗ ಲೋಕಾರ್ಪಣೆ ಗೊಳಿಸಿದ ಉಡುಪಿಯ ಉಡುಪಿ ಎಮ್ ಜಿ ಎಮ್ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ರಾಗಿ ಸೇವೆ ಸಲ್ಲಿಸಿದ್ದ ಪ್ರಾಧ್ಯಾಪಕ, ದಾರ್ಶನಿಕ, ಚಿಂತಕ ಪ್ರೊ.ಉಡುಪಿ ಲಕ್ಷ್ಮೀನಾರಾಯಣ ಆಚಾರ್ಯ ರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಪಾಂಡೇಶ್ವರ ಅಂಚೆ ಕಚೇರಿಯಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿ ಶತಮಾನೋತ್ಸವ ಚಿರಸ್ಮರಣೀಯ ಗೊಳಿಸಲು ಇಂತಹ ಪರಿಕಲ್ಪನೆಯನ್ನು ಆಯ್ಕೆ ಮಾಡಿಕೊಂಡದ್ದಕ್ಕಾಗಿ ಸಂಬಂಧಪಟ್ಟ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.

ಮಂದಿನ ಪೀಳಿಗೆಗೆ ಹಿಂದಿನ ತಲೆಮಾರಿನ ವ್ಯಕ್ತಿಗಳ ಬಗ್ಗೆ ಅರಿವು ಮಾಡಲು ಇಂದು ನಾವು ಮಾಡುವ ಇಂತಹ ಕಾರ್ಯಗಳು ಮಾರ್ಗದರ್ಶನವಾಗುತ್ತವೆ ಎಂದರು .ಆಚಾರ್ಯರ ಭಾವಚಿತ್ರದ ಮುಂದೆ ದೀಪ ಬೆಳಗಿ ಗೌರವ ಸಲ್ಲಿಸಲಾಯಿತು۔ ಈ ವಿಶೇಷ ಲಕೋಟೆಯ ರೂವಾರಿ ಡಾ.ನಂದಿನಿ ಶಿವಾನಂದ್ ಸ್ವಾಗತಿಸಿದರು. ಹಿರಿಯ ಪುತ್ರ ಯು. ರಾಘವೇಂದ್ರಾಚಾರ್ಯರುವರು ಯು ಎಲ್ ಆಚಾರ್ಯರ ಪರಿಚಯ ನಡೆಸಿಕೊಟ್ಟರು ۔ ಕೋವಿಡ್ ಸಮಸ್ಯೆಯಿಂದಾಗಿ ಅನುಪಸ್ಥಿತರಾದ ಮುಖ್ಯ ಅತಿಥಿ ಪದ್ಮ ಭೂಷಣ ಬಿ ಎಂ. ಹೆಗಡೆಯವರು ವಿಡಿಯೋ ಮೂಲಕ ಅನಿಸಿಕೆಗಳನ್ನು ಹಂಚಿಕೊಂಡರು. ಮಂಗಳೂರು ಪಾಂಡೇಶ್ವರ ಅಂಚೆಕಚೇರಿಯ ಹಿರಿಯ ಅಂಚೆ ಪಾಲಕ ಕೆ ಸುಬ್ರಾಯ ಪೈ ಉಪಸ್ಥಿತರಿದ್ದರು.

ಸ್ಪೆಷಲ್ ಕವರ್ ಡಿಸೈನ್ ಮಾಡಿದ ಡಾ.ಪೂರ್ಣಿಮಾ ನಾಯರ್ ಹಾಗೂ ಎನ್ಐಟಿಕೆ ಸುರತ್ಕಲ್ ನ ಪ್ರಾಧ್ಯಾಪಕ ಶ್ರೀಕೃಷ್ಣ ಭಟ್ ರವರು ನುಡಿನಮನ ಸಲ್ಲಿಸಿದರು .ಪುತ್ರಿ ಜಯಂತಿ ರಾವ್ ರವರು ವಿಡಿಯೋ ಮೂಲಕ ಅನಿಸಿಕೆ ಹಂಚಿಕೊಂಡರು . ಕಿರಿಯ ಪುತ್ರ ಹರಿದಾಸ ಆಚಾರ್ಯ ಧನ್ಯವಾದವಿತ್ತರು. ಮಂಗಳೂರು ಅಂಚೆ ವಿಭಾಗದ ಸಿಬ್ಬಂದಿ ಸೀಮಾ ಮತ್ತು ಜಯಲಕ್ಷ್ಮಿ ಸಹಕರಿಸಿದರು ۔ ಈ ಸಂದರ್ಭದಲ್ಲಿ ಕೋವಿಡ್ ಬಗ್ಗೆ ಜಾಗೃತಿ ಕಾರ್ಯಕ್ರಮ‌ ನಡೆಸಿಕೊಟ್ಟ ಹಿರಿಯ ಫಿಲಾಟಲಿಸ್ಟ್ , ಆರೋಗ್ಯ ತಜ್ಞ ,ರೊ. ಡಾ.ಲಕ್ಷ್ಮಣ್ ಪ್ರಭುರವರನ್ನು ಇಲಾಖೆಯ ಪರವಾಗಿ ಅಭಿನಂದಿಸಲಾಯಿತು. ಉಡುಪಿ ಅಂಚೆ ವಿಭಾಗದ ಮಾರುಕಟ್ಟೆ ಕಾರ್ಯನಿರ್ವಾಹಕಿ ಪೂರ್ಣಿಮ ಜನಾರ್ಧನ್ ನಿರೂಪಿಸಿದರು .


Spread the love

1 Comment

  1. I remember I had worked as a co examiner with Prof ULAcharya. A clear photo of the Prof. should have been displayed to help recollect old meeting.

Comments are closed.