ಫರಂಗಿಪೇಟೆಯಲ್ಲಿ ಅಶ್ರಫ್ ಕಲಾಯಿ ಕೊಲೆ ಆರೋಪಿ ಪವನ್ ಗೆ ಚೂರಿ ಇರಿತ

Spread the love

ಫರಂಗಿಪೇಟೆಯಲ್ಲಿ ಅಶ್ರಫ್ ಕಲಾಯಿ ಕೊಲೆ ಆರೋಪಿ ಪವನ್ ಗೆ ಚೂರಿ ಇರಿತ

ಮಂಗಳೂರು: ಎಸ್ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹತ್ಯೆ ಪ್ರಕರಣದ ಆರೋಪಿಗೆ ಕುಮ್ಡೇಲುವಿನಲ್ಲಿ ಏ.26ರಂದು ಚೂರಿ ಇರಿತ ನಡೆದಿದೆ.

ಎಸ್ಡಿಪಿಐ ಸದಸ್ಯ ಅಶ್ರಫ್ ಕಲಾಯಿ ಹತ್ಯೆ ಪ್ರಕರಣದಲ್ಲಿ ಪವನ್ ಮೂರನೇ ಆರೋಪಿ. ಏಪ್ರಿಲ್ 26 ರಂದು ಕುಮ್ಡೇಲು ಫರಂಗಿಪೇಟೆಯಲ್ಲಿ ಚರಣ್ ಎಂಬಾತ ಪವನ್ ಎದೆಗೆ ಚಾಕುವಿನಿಂದ ಇರಿದಿದ್ದ. ಪವನ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಚರಣ್ ವಿವಿಧ ಅಪರಾಧಗಳಲ್ಲಿ ಭಾಗಿಯಾಗಿದ್ದು, ಆತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.


Spread the love