ಫಾ|ಮಹೇಶ್ ಆತ್ಮಹತ್ಯೆ; ಆರೋಪಿ ಗ್ರಾಪಂ ಅಧ್ಯಕ್ಷ ಡೇವಿಡ್ ಡಿಸೋಜಾ ಗೆ ಹೈಕೋರ್ಟ್ ಜಾಮೀನು

Spread the love

ಫಾ|ಮಹೇಶ್ ಆತ್ಮಹತ್ಯೆ; ಆರೋಪಿ ಗ್ರಾಪಂ ಅಧ್ಯಕ್ಷ ಡೇವಿಡ್ ಡಿಸೋಜಾ ಗೆ ಹೈಕೋರ್ಟ್ ಜಾಮೀನು

ಬೆಂಗಳೂರು : ಶಿರ್ವ ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲ ಫಾ|ಮಹೇಶ್ ಡಿಸೋಜಾ ಅವರ ಆತ್ಯಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಡೇವಿಡ್ ಡಿಸೋಜಾ ಗೆ ಕರ್ನಾಟಕ ಹೈಕೋರ್ಟ್ ಶರತ್ತು ಬದ್ಧ ಜಾಮೀನು ನೀಡಿದೆ.

ಫಾ ಮಹೇಶ್ ಆತ್ಮಹತ್ಯೆ ಮಾಡಿಕೊಳ್ಳಲು ಆರೋಪದ ಮೇಲೆ ಡೇವಿಡ್ ಬೆದರಿಕೆ ಹಾಗೂ ದುಷ್ಟ್ರೇರಣೆ ನೀಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಘಟನೆಯ ಬಳಿಕ ಆರೋಪಿಯು ತನ್ನ ಹೆಂಡತಿಯ ಮೊಬೈಲ್ ನಲ್ಲಿದ್ದ ಪ್ರಕರಣಕ್ಕೆ ಸಂಬಂಧಪಟ್ಟ ಸಂದೇಶಗಳನ್ನು ಡಿಲಿಟ್ ಮಾಡಿ ಸಾಕ್ಷ್ಯ ನಾಶ ಮಾಡಿದ್ದರು ಎನ್ನಲಾಗಿದೆ.

ಮಾರ್ಚ್ 9 ರಂದು ಜಿಲ್ಲಾ ಸತ್ರ ನ್ಯಾಯಾಧೀಶರು ಡೇವಿಡ್ ಡಿಸೋಜಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಹೈಕೋರ್ಟ್ ಮೊರೆ ಹೊಗಿದ್ದು ಹೈಕೋರ್ಟ್ ಗುರುವಾರ ಷರತ್ತು ಬದ್ದ ಜಾಮೀನು ನೀಡಿದೆ.

ಹಿರಿಯ ಹೈಕೋರ್ಟ್ ವಕೀಲರಾದ ಅರುಣ್ ಶ್ಯಾಮ್ ಮತ್ತು ರಕ್ಷಿತ್ ಕುಮಾರ್ ಆರೋಪಿ ಡೇವಿಡ್ ಪರವಾಗಿ ವಾದಿಸಿದರು.


Spread the love