ಫಿಶ್ಕೋ ಫೆಸ್ಟಿವಲ್ ಸಮಾರೋಪ

Spread the love

ಫಿಶ್ಕೋ ಫೆಸ್ಟಿವಲ್ ಸಮಾರೋಪ 

ಮಂಗಳೂರು:  ಮೀನುಗಾರಿಕಾ ಕಾಲೇಜಿನಲ್ಲಿ ಅಕ್ಟೋಬರ್ 22 ರಿಂದ 24 ರವರೆಗೆ ನಡೆದ ಗೋಲ್ಡನ್ ಜೂಬಿಲಿ ಫಿಶ್ಕೋ ಫೆಸ್ಟಿವಲ್‍ನ ಸಮಾರೋಪ ಸಮಾರಂಭವನ್ನು ಕಾಲೇಜಿನ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾಲೇಜಿನ ಡೀನ್ ಡಾ. ಎಚ್. ಶಿವಾನಂದ ಮೂರ್ತಿ ಅದ್ಯಕ್ಷತೆ ವಹಿಸಿ ಗೋಲ್ಡನ್ ಜೂಬಿಲಿ ಫಿಶ್ಕೋ ಫೆಸ್ಟಿವಲ್ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅದ್ದೂರಿಯಾಗಿ ಆಚರಿಸಲಾಗುವ ಯುವಜನೋತ್ಸವ ಕಾಲೇಜಿನ ವಿದ್ಯಾರ್ಥಿಗಳಿಂದ ಕರಾವಳಿಯ ಎರಡೂ ಜಿಲ್ಲೆಯ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನಡೆಸಲಾಗುವ ಕಾರ್ಯಕ್ರಮ ಎಂದು ಹೇಳಿದರು.
ಕೆನರಾ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ರಾಮ್‍ದಾಸ ಮತ್ತು ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯ್ಕ ಸಮಾರಂಭದಲ್ಲಿ ಮಾತನಾಡಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ಥಿ ವಿತರಣೆ ಮಾಡಿದರು.

ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳೂ ಸಹಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗೆ ಪೈಪೆÇೀಟಿ ನಡೆಸಿದರು. ಹಳೆಯ ವಿದ್ಯಾರ್ಥಿಗಳ ಪೆÇ್ರೀತ್ಸಾಹ ಮತ್ತು ಸಹಕಾರದಿಂದ ಈ ಫಿಶ್ಕೋ ಫೆಸ್ಟಿವಲ್‍ನ್ನು ವಿಜೃಂಭಣೆಯಿಂದ ಆಚರಿಸಲು ಸಹಕಾರಿಯಾಗಿದೆಯೆಂದು ಕಾಲೇಜಿನ ಆವರಣದಲ್ಲಿರುವ ಕೃ.ವಿ.ವಿ.ಯ ಮುಖ್ಯಸ್ಥ ಮತ್ತು ಫಿಶ್ಕೋ ಫೆಸ್ಟಿವಲ್‍ನ ಪ್ರಚಾರ ಸಮಿತಿಯ ಚೇರ್ಮನ್ ಡಾ| ಎ.ಟಿ. ರಾಮಚಂದ್ರ ನಾಯ್ಕ ತಿಳಿಸಿದರು.

ಅಂತರ್ ಕಾಲೇಜುಗಳ ಸಾಂಸ್ಕೃತಿಕ, ಸಾಹಿತ್ಯ ಮತ್ತು ಲಲಿತಕಲೆಗಳ ಸ್ಪರ್ಧೆಗಳಲ್ಲಿ ಸಮಗ್ರ ಪ್ರಶಸ್ಥಿಯನ್ನು ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟಾರೆ 35 ಕಾಲೇಜುಗಳ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿದ್ದರು.

ಮೈಮ್, ಸಮೂಹ ನೃತ್ಯ ಪ್ರದರ್ಶನ, ಮ್ಯಾಡ್ ಆಡ್ಸ್, ಚಹರೆಯ ವರ್ಣಕಲೆ, ಕನ್ನಡ ಚರ್ಚಾಸ್ಪರ್ಧೆ, ಸಮೂಹ ನೃತ್ಯ ಮತ್ತು ಸಮೂಹ ಗಾಯನ ಸ್ಪರ್ಧೆಗಳಲ್ಲಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳು ಪ್ರಥವi ಸ್ಥಾನಗಳಿಸಿದ್ದಾರೆ.

ಜೇಡಿ ಮಣ್ಣಿನ ಕಲಾಕೃತಿ ರಚನೆ, ವರ್ಣ ಕಲೆ, ಕಾರ್ಟೂನಿಂಗ್, ಭರತನಾಟ್ಯ ಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯ, ಪೆಂಸಿಲ್ ಸ್ಕೆಚ್ಚೆಂಗ್ ಮತ್ತು ಚಹರೆಯ ವರ್ಣಕಲೆಯಲ್ಲಿ ಸೆಂಟ್ ಆಗ್ನೇಸ್ ಕಾಲೇಜು, ಚಿತ್ರ ಗೀತೆ ಮತ್ತು ಆಂಗ್ಲ ಆಶುಭಾಷಣ ಸ್ಪರ್ಧೆಯಲ್ಲಿ ಶ್ರೀಮದ್ವ ವ್ಯದ್ಯರಾಜ ತಾಂತ್ರಿಕ ಮತ್ತು ನಿರ್ವಹಣಾ ಸಂಸ್ಥೆ, ಡಂ-ಛರಡ್ ಮತ್ತು ಶಾಸ್ತ್ರೀಯ ಗಾಯನದಲ್ಲಿ ಎ.ಜೆ. ದಂತ ವಿಜ್ಞಾನ ಕಾಲೇಜು, ರಸಪ್ರಶ್ನೆಯಲ್ಲಿ ಸೆಂಟ್ ಫಿಲೋಮಿನ ಕಾಲೇಜು, ಆಂಗ್ಲ ಚರ್ಚಾ ಚರ್ಚಾಸ್ಪರ್ಧೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯ, ಪಾಶ್ಚಿಮಾತ್ಯ ಸಂಗೀತ ಸ್ಪರ್ಧೆಯಲ್ಲಿ ಸೆಂಟ್ ಅಲೋಸಿಯಸ್ ಕಾಲೇಜು, ಕನ್ನಡ ಆಶುಭಾಷಣ ಸ್ಪರ್ಧೆಯಲ್ಲಿ ಎಸ್.ಡಿ.ಎಂ. ಕಾನೂನು ಕಾಲೇಜು, ಪೈಂಟಿಗ್‍ನಲ್ಲಿ ಸರ್ಕಾರಿ ಕಾಲೇಜು, ರಂಗೋಲಿಯಲ್ಲಿ ನೆಹರು ಮೆಮೋರಿಯಲ್ ಪದವಿಪೂರ್ವ ಕಾಲೇಜು, ಫ್ಯಾಷನ್ ಪೆರಡ್ ನಲ್ಲಿ ಉಡುಪಿಯ ಹೋಟೆಲ್ ಮತ್ತು ಪ್ರವಾಸೋದ್ಯಮ ಸಂಸ್ಥೆಗಳು ಕ್ರಮವಾಗಿ ಪ್ರಥಮ ಬಹುಮಾನಗಳನ್ನು ಗಳಿಸಿವೆ.

ಕಾಲೇಜಿನ ಹಳೇ ವಿದ್ಯಾರ್ಥಿಗಳು ಫಿಶ್ಕೋ ಫೆಸ್ಟಿವಲ್‍ಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಹೊಸ ಅನುಭವವನ್ನು ಇಂದಿನ ಯುವಪೀಳಿಗೆಗಳ ಜೊತೆ ಹಂಚಿಕೊಂಡರು.

ಕಾಲೇಜಿನ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿಗಳು ಫಿಶ್ಕೋ ಫೆಸ್ಟಿವಲ್ ಸುಸೂತ್ರವಾಗಿ ನಡೆಸಲು ಸಹಕರಿಸಿದರು. ಸಿಬ್ಬಂದಿಗಳಾದ ಮನೋಜ್ ಕುಮಾರ್, ಸುರೇಶ್ ಟಿ., ಶಿವಕುಮಾರ್ ಎಂ., ಎ.ಟಿ. ರಾಮಚಂದ್ರ ನಾಯ್ಕ, ಗಿರೀಶ್ ಎಸ್.ಕೆ., ಕುಮಾರ್ ನಾಯ್ಕ ಎ.ಎಸ್., ವಂದನಾ ಕೆ., ಪ್ರದೀಪ್ ಧರೆನ್ ಡಿ’ಮೆಲ್ಲೊ, ಅಜಯ್ ಎಸ್.ಕೆ., ಅಭಿಮಾನ್, ಮಂಜುಳೇಶ್ ಪೈ, ಸ್ವಾತಿ, ರಾಜೇಶ್ ಡಿ.ಪಿ., ಫಿಶ್ಕೋ ಫೆಸ್ಟಿವಲ್‍ನ ಎಲ್ಲಾ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ನಡೆಸಲು ಸಹಕರಿಸಿದರು. ಅಂತಿಮ ಪದವಿ ವಿದ್ಯಾರ್ಥಿ ಧನುಷ್ ಸಿ.ಕೆ. ರವರ ಟೀಂ-ವಿಂಡೀಸಿಸ್ ಗಳ ಪಾತ್ರ ಈ ಫಿಶ್ಕೋ ಫೆಸ್ಟಿವಲ್‍ಗೆ ಹೆಚ್ಚಿನ ಮೆರುಗನ್ನು ಕೊಟ್ಟಿದೆ.

ಸಮಾರೋಪ ಸಮಾರಂಭಕ್ಕೆ ಚತುರ್ಥ ಬಿ.ಎಪ್.ಎಸ್ಸಿ. ವಿದ್ಯಾರ್ಥಿಗಳಾದ ಜೋಯೆಲ್ ರಿಂಸಂ ಪಿಂಟೊ ಮತ್ತು ಅಮೂಲ್ಯ ಎಸ್.ಜಿ. ನಿರೂಪಿಸಿದರು. ಮನೋಜ್ ಕುಮಾರ್ ವಂದಿಸಿದರು.


Spread the love