ಫೆ.17ರಂದು ಎಂಪಿಎಲ್‍ ಆಟಗಾರರ ಹರಾಜು ಪ್ರಕ್ರಿಯೆ

Spread the love

 ಫೆ.17ರಂದು ಎಂಪಿಎಲ್‍ಆಟಗಾರರ ಹರಾಜು ಪ್ರಕ್ರಿಯೆ

ಸರಕಾರ ಭೂಮಿ ಕೊಟ್ಟ ಕ್ಷಣ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಕಾರ್ಯಾರಂಭ– ಮನೋಹರ ಅಮೀನ್

ಮಂಗಳೂರು: ಮಂಗಳೂರು ಪ್ರೀಮಿಯರ್ ಲೀಗ್‍ಕ್ರಿಕೆಟ್ ಪಂದ್ಯಾಟದ ನಾಲ್ಕನೆಯ ಆವೃತ್ತಿ ಪಂದ್ಯಾಟಗಳು ಮಾರ್ಚ್ ತಿಂಗಳ ದಿನಾಂಕ 20ರಿಂದ ಎಪ್ರಿಲ್ 1ರವರೆಗೆ ನವಮಂಗಳೂರು ಬಂದರಿನ ಬಿ.ಆರ್. ಅಂಬೇಡ್ಕರ್ ಕ್ರಿಕೆಟ್ ಕ್ರೀಡಾಂಗಣದ ಅಸ್ಟ್ರೋಟರ್ಫ್ ಪಿಚ್‍ನಲ್ಲಿ ಹೊನಲು ಬೆಳಕಿನಲ್ಲಿ ಜರಗಲಿದ್ದು ಪಂದ್ಯಾಟದಲ್ಲಿ ಭಾಗವಹಿಸುವ ವಿವಿಧ ತಂಡಗಳ ಘೋಷಣೆಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಂಗಳೂರು ವಲಯದ ಸಂಚಾಲಕ ಮನೋಹರ್ ಅಮೀನ್‍ರವರು ನೆರವೇರಿಸಿದರು.

ಇಲ್ಲಿನ ಗೋಲ್ಡ್ ಫಿಂಚ್ ಹೊಟೇಲಿನಲ್ಲಿ ಜರಗಿದ, ಎಂಪಿಎಲ್‍ನಲ್ಲಿ ಭಾಗವಹಿಸುವ ತಂಡಗಳ ಮಾಲಕರು, ಪ್ರಾಯೋಜಕರುಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಸಮಾರಂಭದಲ್ಲಿ ಅವರು ತಂಡಗಳ ಮಾಲಕರುಗಳಿಗೆ ತಂಡ ಮಾಲಕತ್ವ ಪ್ರಮಾಣ ಪತ್ರವನ್ನು ವಿತರಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾÀಡಿದ ಅವರು ಕ್ರಿಕೆಟಿನ ಅಂದಿನ ಆಟದ ಮಟ್ಟಕ್ಕೂ ಇಂದಿನ ಮಟ್ಟಕ್ಕೂ ಅಜಗಜಾಂತರÀ ವ್ಯತ್ಯಾಸವಿದೆ. ಇಂದು ಕ್ರಿಕೆಟ್ ಆಟದ ರಂಗದಲ್ಲಿ ಎಲ್ಲ ಸೌಲಭ್ಯಗಳು ಆಧುನಿತೆ ಮೆರುಗನ್ನು ಹೊಂದಿದೆ. ಆದರೆ ಮಂಗಳೂರು ವಲಯದಲ್ಲಿ ಕ್ರಿಕೆಟ್ ಆಟದ ಮೂಲಭೂತ ಅವಶ್ಯಕತೆಯಾದ ಕ್ರೀಡಾಂಗಣವೆಂಬುದೇ ಇಲ್ಲ. ಕಳೆದ ಹದಿನೈದು ವರುಷಗಳಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಈ ಬಗ್ಗೆ ಪ್ರಯತ್ನ ಮಾಡುತ್ತಾ ಬಂದರೂ ಅವಶ್ಯವಿರುವ 15 ರಿಂದ 20 ಎಕರೆಯಷ್ಟು ಭೂಮಿ ದೊರೆಯದೆ ಮೈದಾನದ ಕನಸು ನನಸಾಗಿಲ್ಲ. ಸರಕಾರವು ಈ ಬಗ್ಗೆ ಗಮನ ಹರಿಸಿ ಭೂಮಿ ಒದಗಿಸಿದರೆ ರಾಜ್ಯ ಕ್ರಿಕೆಟ್ ಸಂಸ್ಥೆಯು ತನ್ನದೇ ವೆಚ್ಚದಲ್ಲಿ ಮರು ಕ್ಷಣದಿಂದಲೇ ಕ್ರೀಡಾಂಗಣ ನಿರ್ಮಾಣ ಕಾರ್ಯವನ್ನು ಎಂದರು.

ಶಾಸಕ ಮೊಹಿದಿನ್ ಬಾವಾರವರು ಮಾತನಾಡಿ ಎಂಪಿಎಲ್ ಪಂದ್ಯಾಟಗಳಿಂದಾಗಿ ಇಲ್ಲಿನ ಕ್ರಿಕೆಟ್ ಆಟದ ರೂಪ ಬದಲಾಗಿದೆ, ಹೆಚ್ಚೆಚ್ಚು ಅವಕಾಶಗಳು ಯುವ ಕ್ರಿಕೆಟ್ ಪಟುಗಳಿಗೆ ಒದಗಿ ಬರುತ್ತಿದೆ, ಮಂಗಳೂರಿಗೆ ಕ್ರಿಕೆಟ್ ಕ್ರೀಡಾಂಗಣ ಒದಗಿಸುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.

ಎಂಪಿಎಲ್‍ನ ಸರಣಿ ಶ್ರೇಷ್ಠನಿಗೆ ಅಮೆರಿಕನ್ ಬೈಕ್ ಪ್ರಾಯೋಜಿಸಿರುವ ಯು.ಎಂ ಕಂಪನಿಯ ನಿಹಾಲ್‍ರವರು ಎಂ.ಪಿ.ಎಲ್ ಪಂದ್ಯಾಟವು ಶಿಸ್ತು- ಸಹನೆಯ ಸಮ್ಮಿಲನದೊಂದಿಗೆ ಯಶಸ್ವಿಯಾಗಿ ಜರಗಲಿ ಎಂದರು.

ಸಮಾರಂಭದ ಮುಖ್ಯ ಅತಿಥಿಯಾದ ಕನ್ನಡಚಿತ್ರ ನಟಿ ಭಾವನಾರವರು ಮಾತನಾಡಿ ಎಂಪಿಎಲ್ ಆಯೋಜಕರು ಕ್ರಿಕೆಟ್ ಆಟದ ಮೂಲಕ ಇಲ್ಲಿನ ಎಲ್ಲ ವರ್ಗದ ಜನರನ್ನು ಬೆಸೆಯಲು ಹೊರಟಿರುವುದು ಸಂತಸ ತಂದಿದೆ, ಕ್ರಿಕೆಟಿನ ಮೂಲಕ ಜನರ ನಡುವೆ ಏರ್ಪಡುವ ಬೆಸುಗೆಯು ಚಿರಂತನವಾಗಿ ಕರಾವಳಿ ಭಾUದಲ್ಲಿ ನಿತ್ಯವೂ ಶಾಂತಿಯು ನೆಲಸುವಂತಾಗಲಿ ಎಂದರು.

ಭಾಗವಹಿಸುವ ತಂಡಗಳು:
ಕಳೆದ ಬಾರಿಯ ವಿಜೇತ ಕೋಸ್ಟಲ್‍ಡೈಜೆಸ್ಟ್ (ಒಡೆತನ: ಮಹಮ್ಮದ್ ದಾವೂದ್, ಮಹಮ್ಮದ್ ಆಝರುದ್ದೀನ್ ಮತ್ತು ಅಸೀಫ್), ಕಾರ್ಕಳ ಗ್ಲೇಡಿಯೇಟರ್ಸ್ (ಅವಿನಾಶ್ ರಾವ್), ಬೆದ್ರ ಬುಲ್ಸ್ ಮೂಡಬಿದರೆ (ಮಿಥುನ್‍ರೈ), ಎ.ಕೆ.ಸ್ಪೋಟ್ರ್ಸ್, ಉಡುಪಿ (ಶೀಷ್ ಮಹಮ್ಮದ್), ವೈಸ್ ವಾರಿಯರ್ಸ್ ಸೂರಲ್ಪಾಡಿ (ಅಬ್ದುಲ್ ಮಜೀದ್), ಮಂಗಳೂರು ಯುನೈಟೆಡ್ (ಮೊಯ್ದಿನ್ ಭಾವ), ಯುನೈಟೆಡ್ ಉಲ್ಲಾಳ (ಯು.ಟಿ.ಖಾದರ್ ಮತ್ತು ಇಸ್ಮಾಯಿಲ್), ಕ್ಲಾಸಿಕ್ ಬಂಟ್ವಾಳ್ (ಹಂಝಾದೆಂಜಿಪಾಡಿ), ಅಲಿ ವಾರಿಯರ್ಸ್ (ಅಶ್ಫಕ್ ತಾರಾ), ಟಿ4 ಸೂಪರ್‍ಕಿಂಗ್ಸ್ (ಮ್ಯಾಕನಿಲ್ ನೋರೊನ್ನಾ) ಮತ್ತು ಮ್ಯಾಸ್ಟ್ರೋಟೈಟಾನ್ಸ್ .

ಎಂ.ಪಿ.ಎಲ್‍ನಲ್ಲಿÀ ºರಾಜಿಗಿಟ್ಟಿರುವ ಆಟಗಾರರ ಪಟ್ಟಿಯನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ಆಟಗಾರರ ಪಟ್ಟಿಯನ್ನುಎಲ್ಲ ತಂಡಗಳ ಮಾಲಕರಿಗೆ ಒದಗಿಸಲಾಗಿದ್ದು ಆಟಗಾರರ ಹರಾಜು ನಡೆಯುವ ದಿನದವರೆಗೆ ಆ ಆಟಗಾರರುಗಳ ಇತ್ತೀಚಿನ ನಿರ್ವಹಣೆಯ ಬಗ್ಗೆ ಪರಾಮರ್ಷಿಸಿ ತಮಗೆ ಬೇಕಾದ ಆಟಗಾರರನ್ನು ಗುರುತಿಸಿಕೊಂಡು, ಹರಾಜಿನಲ್ಲಿ ಆ ಆಟಗಾರರನ್ನು ತಮ್ಮ ತಂಡದ ಬುಟ್ಟಿಗೆ ಬೀಳಿಸುವ ಯತ್ನ ತಂಡಗಳದ್ದಾಗಿವೆ. ಹರಾಜು ಪ್ರಕ್ರಿಯೆಯು ಪಾಂಡೇಶ್ವರದ ಫೋರಂ ಫಿಝಾ ಮಾಲಿನಲ್ಲಿ ದಿನಾಂಕ17.02.2018ರ ಶನಿವಾರದಂದು ಅಪರಾಹ್ನ ಗಂಟೆ2.00 ರಿಂದ ಜರಗಲಿದ್ದು ವಿ4 ಚಾನಲ್‍ನಲ್ಲಿ ಮತ್ತು ಚಾನಲ್ -1ಕರ್ನಾಟಕ ವೆಬ್‍ನಲ್ಲಿ ನೇರ ಪ್ರಸಾರ ಕಾಣಲಿದೆ.

ಈ ಭಾರಿ ಸುಮಾರು 30 ಮಂದಿ ರಾಷ್ಟ್ರ/ರಾಜ್ಯ ಮಟ್ಟದ ಆಟಗಾರರನ್ನು ಆಟಗಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದು, ಇವರಲ್ಲಿ ಹಲವಾರು ಮಂದಿ ಆಟಗಾರರು ಐ ಪಿ ಎಲ್ ಹರಾಜು ಪಟ್ಟಿಯಲ್ಲಿದ್ದ ಉತ್ತಮ ದರ್ಜೆಯ ಆಟಗಾರರಾಗಿದ್ದು, ಇವರ ಭಾಗವಹಿಸುವಿಕೆಯಿಂದ ಈ ಭಾರಿಯ ಎಂಪಿಎಲ್‍ಗೆ ಹೊಸ ಕಳೆ ಬರಲಿದೆಯಲ್ಲದೆ, ಇಲ್ಲಿನ ಆಟಗಾರರು ಆ ಆಟಗಾರರೊಂದಿಗೆ ಆಡುತ್ತಾ ಅವರಲ್ಲಿನ ಅನುಭವದ ಸಹಾಯದಿಂದ ತಮ್ಮ ಆಟಗಾರಿಕೆಯನ್ನು ಮೊನಚನ್ನು ಹೆಚ್ಚಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಆ ಕೆಲವೊಂದು ಆಟಗಾರರುಗಳೆಂದರೆ:

ಸಾದಿಕ್ ಕಿರ್ಮಾನಿ, ಕ್ರಾಂತಿ ಕುಮಾರ್, ಪ್ರವೀಣ್‍ದುಬೆ, ಕೆ.ಬಿ.ಪವನ್, ಅಬ್ದುಲ್ ಮಜೀದ್, ರಕ್ಷಿತ್‍ಎಸ್, ಅಭಿನವ್, ಸುಚಿತ್, ಸಿದ್ದಾರ್ಥ, ಗುಲೇಚ, ಅಮಿತ್ ವರ್ಮ, ರವಿಕುಮಾರ್, ಪಡಿಕ್ಕಲ್, ಝೀಷನ್ ಅಲಿ, ಡೆವಿಡ್, ವಿಶ್ವನಾಥ್, ಸ್ಟಾಲಿನ್ ಹೂವರ್, ದಿಕಾಂಶು ನೇಗಿ, ಅಬ್ರಾರ್ ಖಾಝಿ, ಅಖಿಲ್ ಬಿ., ಮಹಮ್ಮದ್ ತಾಹ, ಶುಭಾಂಗ್ ಹೆಗ್ಡೆ, ಕುನೈನ್‍ಅಬ್ಬಾಸ್, ರಾಜು ಭಟ್ಕಳ್, ರೋಹನ್ ಕದಂ, ರೋನಿತ್ ಮೋರೆ, ನವೀನ್‍ಎಂ.ಜಿ, ವೈಶಾಖ್, ಚೈನಾಮನ್ ಬೌಲರ್ ಶರ್ಫಾರಝ್ ಮುಂತಾದವರು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಂಗಳೂರು ವಲಯದ ಸಂಚಾಲಕ ಮನೋಹರ್ ಅಮೀನ್, ಪಂದ್ಯ ಕೂಟದ ಮುಖ್ಯ ರೂವಾರಿ ಮಹಮ್ಮದ್ ಸಿರಾಜುದ್ದೀನ್,À ಕನ್ವೇನರ್ ಇಮ್ತಿಯಾಝ್, ಸಿ ಬರ್ಡ್‍ಕ್ರಿಕೆಟ್ ಸಂಸ್ಥೆಯ ಶಶಿಧರ್ ಕೋಡಿಕಲ್, ಪ್ರಧಾನ ಸಹಯೋಜಕ ಬಾಲಕೃಷ್ಣ ಪರ್ಕಳ ಮುಂತಾದವರು ಉಪಸ್ಥಿತರಿದ್ದರು.


Spread the love