ಫೆ 3: ಬ್ರಹ್ಮಾವರದಲ್ಲಿ ಜಿಲ್ಲಾ ಬಿಲ್ಲವ ಮಹಾ ಸಮಾವೇಶಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ

Spread the love

 ಫೆ 3: ಬ್ರಹ್ಮಾವರದಲ್ಲಿ ಜಿಲ್ಲಾ ಬಿಲ್ಲವ ಮಹಾ ಸಮಾವೇಶಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ

ಉಡುಪಿ: ಜಿಲ್ಲಾ ವ್ಯಾಪ್ತಿಯ ಸಮಸ್ತ ಬಿಲ್ಲವ ಸಂಘ-ಸಂಸ್ಥೆಗಳನ್ನು ಒಂದೇ ಸೂರಿನಡಿ ಸಂಘಟಿಸಿ, ಬಿಲ್ಲವ ಸಮಾಜದ ಶ್ರೇಯೋಭಿವೃದ್ಧಿಗಾಗಿ ಚಿಂತನ ಮಂಥನ ನಡೆಸಿ, ಸರಕಾರದಿಂದ ದೊರೆಯಬಹುದಾದ ಸೌಲಭ್ಯಗಳನ್ನು ಪಡೆಯುವ ಉದ್ದೇಶದಿಂದ ಉಡುಪಿ ಜಿಲ್ಲಾ ಮಟ್ಟದ ‘ಬಿಲ್ಲವ ಮಹಾಸಮಾವೇಶ-2019’ನ್ನು ಫೆ.3ರಂದು ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಏರ್ಪಡಿಸಲಾಗಿದೆ ಎಂದು ಬ್ರಹ್ಮಾವರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಾಹ್ನ 2ರಿಂದ 5.30ರವರೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.

ಅವಿಭಜಿತ ದ.ಕ. ಜಿಲ್ಲೆಯೊಂದರಲ್ಲೇ ಸುಮಾರು ಆರು ಲಕ್ಷಕ್ಕೂ ಮಿಕ್ಕಿರುವ ಬಿಲ್ಲವರು ಬಹು ಸಂಖ್ಯಾಕರೆನಿಸಿಕೊಂಡರೂ ಸರಕಾರದ ಸವಲತ್ತು, ಯೋಜನೆಗಳ ಕೊರತೆಯಿಂದ ಹಿಂದೆ ಉಳಿದಿದ್ದಾರೆ. ಬಿಲ್ಲವರಿಗೆ ಹಲವು ಸವಲತ್ತು, ವಿವಿಧ ಬೇಡಿಕೆಗಳನ್ನು ನೀಡಬೇಕೆಂದು ಸಮಾವೇಶದಲ್ಲಿ ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು ಎಂದವರು ಹೇಳಿದರು.

ಈ ಬಗ್ಗೆ ಈಗಾಗಲೇ ಜಿಲ್ಲೆಯಾದ್ಯಂತ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ. ಸಮಾವೇಶದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಬಿಲ್ಲವ ಸಮಾಜದವರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಪ್ರಧಾನ ಸಂಚಾಲಕ ಅಚ್ಯುತ ಅಮೀನ್ ಕಲ್ಮಾಡಿ, ಕಾರ್ಯಾಧ್ಯಕ್ಷರಾದ ಪ್ರವೀಣ್ ಎಂ. ಪೂಜಾರಿ, ಎಚ್.ಅಶೋಕ್ ಪೂಜಾರಿ ಹಾರಾಡಿ, ಎ. ಶಿವಕುಮಾರ್ ಅಂಬಲಪಾಡಿ, ಎಂ. ಮಹೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಬಿಲ್ಲವ ಮಹಾ ಸಮಾವೇಶ: ಚಪ್ಪರ ಮುಹೂರ್ತ
ಫೆ. 3ರಂದು ಬಿ.ಎನ್. ಶಂಕರ ಪೂಜಾರಿಯವರ ಸಾರಥ್ಯದಲ್ಲಿ ಬಿಲ್ಲವ ಯುವ ವೇದಿಕೆ , ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆಯುವ ಬಿಲ್ಲವ ಮಹಾ ಸಮಾವೇಶದ ಚಪ್ಪರ ಮುಹೂರ್ತವನ್ನು ವಿಧಾನ ಪರಿಷತ್ನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಜ.26ರಂದು ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ನೆರವೇರಿಸಿದರು.

ಸಮಾವೇಶದ ಸಂಚಾಲಕ ಅಚ್ಯುತ ಅಮೀನ್, ಕಾರ್ಯಾಧ್ಯಕ್ಷ ಪ್ರವೀಣ್ ಪೂಜಾರಿ, ಪ್ರಚಾರ ಸಮಿತಿ ಅಧ್ಯಕ್ಷ ಎಚ್. ಅಶೋಕ್ ಪೂಜಾರಿ, ಸಮಾವೇಶದ ಉಪಾಧ್ಯಕ್ಷ ರಾಜು ಪೂಜಾರಿ ಉಪ್ಪೂರು, ಪದಾಧಿಕಾರಿಗಳಾದ ಕಿರಣ್ ಕುಮಾರ್, ರಾಜಶೇಖರ್ ಕೋಟ್ಯಾನ್, ಓಬು ಪೂಜಾರಿ, ಜಗನ್ನಾಥ ಪೂಜಾರಿ, ಶೀನ ಫೂಜಾರಿ, ನರಸಿಂಹ ಪೂಜಾರಿ, ಮೆಣ್ಕ ಪೂಜಾರಿ, ಭಾಸ್ಕರ ಜತ್ತನ್, ಸತೀಶ ಕೊಂಡಾಡಿ, ಪ್ರಶಾಂತ್ ಪೂಜಾರಿ, ಬಾಲಕೃಷ್ಣ ಪೂಜಾರಿ, ರಾಘು ಪ್ರಿಯಾಂಕ ಪೂಜಾರಿ, ಅಶೋಕ ಪೂಜಾರಿ ಹೇರೂರು, ಆನಂದ ಪೂಜಾರಿ, ಸೀತಾರಾಮ ಪೂಜಾರಿ, ವಸಂತ ಪೂಜಾರಿ, ಉಮೇಶ ಪೂಜಾರಿ ಬಿರ್ತಿ, ಸಂತೋಷ ಜತ್ತನ್ , ಮಹಿಳಾ ಸದಸ್ಯರಾದ ವಸಂತಿ ಪೂಜಾರಿ , ಪ್ರೀತಿ ಪೂಜಾರಿ , ಜ್ಯೋತಿ ಪೂಜಾರಿ, ಸುಮತಿ ಪೂಜಾರಿ ಉಪಸ್ಥಿತರಿದ್ದರು.


Spread the love