ಬಂಟ್ವಾಳದಲ್ಲಿ ಸೀಲ್ ಡೌನ್ ತೆರವುಗೊಳಿಸಲು ಸ್ಥಳೀಯರಿಂದ ಆಗ್ರಹ

Spread the love

ಬಂಟ್ವಾಳದಲ್ಲಿ ಸೀಲ್ ಡೌನ್ ತೆರವುಗೊಳಿಸಲು ಸ್ಥಳೀಯರಿಂದ ಆಗ್ರಹ

ಬಂಟ್ವಾಳ: ಏಪ್ರಿಲ್ 19 ರಂದು ಬಂಟ್ವಾಳ ಮೂಲದ 50 ವರ್ಷದ ಮಹಿಳೆ ಕೋವಿಡ್-19 ರಿಂದ ಮೃತಪಟ್ಟ ಬಳಿಕ ದಕ ಜಿಲ್ಲಾಡಳಿತವು ಬಂಟ್ವಾಳ ಪ್ರದೇಶವನ್ನು ಸೀಲ್ ಡೌನ್ ಮಾಡಿತ್ತು. ಅದರ ಬಳಿಕವೂ ಬಂಟ್ವಾಳ ಪ್ರದೇಶದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿದ್ದು, ಸಾವಿನ ಸಂಖ್ಯೆ ಮೂರಕ್ಕೆ ಏರಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಮಾಡಿದ ಬಗ್ಗೆ ಒಂದು ತಿಂಗಳ ಬಳಿಕವೂ ಕೂಡ ಜಿಲ್ಲಾಡಳಿತ ಸೀಲ್ ಡೌನ್ ಮಾಡದೇ ಇರುವುದು ನಾಗರಿಕರಿಗೆ ಸಮಸ್ಯೆ ಅನುಭವಿಸುವಂತಾಗಿದೆ. ಬಂಟ್ವಾಳದಲ್ಲಿ ಸುಮಾರು 90 ಅಂಗಡಿಗಳು, ಮತ್ತು 450 ಕುಟುಂಬಗಳು ವಾಸ ಮಾಡಿಕೊಂಡಿದ್ದು ಸೀಲ್ ಡೌನ್ ಪ್ರದೇಶದ ಬಳಿ ಗುರುವಾರ ಸ್ಥಳೀಯರು ಜಮಾಯಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೀಲ್ ಡೌನ್ ತೆರವುಗೊಳಿಸುವಂತೆ ಮನವಿ ಮಾಡಿದರು.

ಸೀಲ್ ಡೌನ್ ಬಳಿಕ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿದೆ ಮತ್ತು ಈಗ, ಕಳೆದ ಒಂದು ತಿಂಗಳಿನಿಂದ ಸೀಲ್ ಡೌನ್ ಆಗಿರುವುದರಿಂದ ಯಾವುದೇ ಅಂಗಡಿಗಳನ್ನು ತೆರೆಯಲು ಅನುಮತಿಸಲಾಗುವುದಿಲ್ಲ. ಈಗ ಪ್ರದೇಶದ ನಿವಾಸಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಈ ಬಗ್ಗೆ ಮ್ಯಾಂಗಲೋರಿಯನ್ ಜೊತೆ ಮಾತನಾಡಿದ ಸ್ಥಳೀಯರು ನಮ್ಮ ಪ್ರದೇಶದಲ್ಲಿ, 85 ರಿಂದ 90 ಅಂಗಡಿಗಳು ಮತ್ತು ಸುಮಾರು 450 ಮನೆಗಳಿವೆ. ಈ ಪ್ರದೇಶದ ಕುಟುಂಬಗಳಿಗೆ ಅಗತ್ಯ ಸಾಮಗ್ರಿಗಳನ್ನು ಒದಗಿಸಲು ಕೆಲವು ಜನರಿಗೆ ಪಾಸ್ಗಳಿವೆ. ಆದರೆ ಈಗ ಪ್ರಶ್ನೆಯೆಂದರೆ, ಸೀಲ್ ಡೌನ್ ಯಾವಾಗ ತೆಗೆದುಹಾಕಲಾಗುತ್ತದೆ? ನಮಗೆ ಇದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ, ರಾಜಕೀಯ ನಾಯಕರು ಪರಸ್ಪರ ದೂಷಣೆ ಆಟ ಆಡುತ್ತಿದ್ದಾರೆ, ಮತ್ತು ನಾವು ನಿವಾಸಿಗಳು ಬಳಲುತ್ತಿದ್ದೇವೆ. ಇಂದು ನಾವು ಸೀಲ್ ಡೌನ್ ಮಾಡಿದ ಪ್ರದೇಶದ ಬಳಿ ಒಟ್ಟುಗೂಡಿದಾಗ, ಬಂಟ್ವಾಳದ ಎಸ್ಐ, ಅವಿನಾಶ್ ಸ್ಥಳಕ್ಕೆ ತಲುಪಿದರು ಮತ್ತು ಪೊಲೀಸರನ್ನು ಕಂಟೈನ್ಮೆಂಟ್ ವಲಯದಲ್ಲಿ ಪ್ರವೇಶಿಸಲು ಅನುಮತಿಸಲಿಲ್ಲ. ”

ಸ್ಥಳೀಯ ನಾಯಕ ಗೋವಿಂದ್ ಪ್ರಭು, ಮಾಜಿ ಸಚಿವ ರಾಮನಾಥ್ ರೈ ಮತ್ತು ತಹಶೀಲ್ದಾರ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ಆದರೆ ಅವರಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಕೊರೋನಾ ಪಾಸಿಟಿವ್ ಪ್ರಕರಣಗಳ ನಂತರ, ನಾವು ಒಂದು ತಿಂಗಳಿಗಿಂತ ಹೆಚ್ಚು ಕಾಲ ಪ್ರತ್ಯೇಕಿಸಲ್ಪಟ್ಟಿದ್ದೇವೆ. ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಬಂಟ್ವಾಳ ಪ್ರದೇಶದಲ್ಲಿ ಸೀಲ್ ಡೌನ್ ತೆರವುಗೊಳಿಸುವ ದಿನಾಂಕವನ್ನು ನಿಗದಿಪಡಿಸಬೇಕು ” ಎಂದರು.

ಸಹಾಯಕ ಆಯುಕ್ತ ಮದನ್ ಮೋಹನ್ ಸ್ಥಳಕ್ಕೆ ಭೇಟಿ ನೀಡಿ ಮೇ 22 ರ ಸಂಜೆ ಒಳಗಡೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ನೀಡಿದರು. ಬಂಟ್ವಾಳದಲ್ಲಿ ಸೀಲ್ ಡೌನ್ ತೆರವುಗೊಳಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ ಎಂದು ಅವರು ಹೇಳಿದರು.


Spread the love