ಬಂಟ್ವಾಳ: ಮುಸ್ಲಿಂ ಮಹಿಳೆಯ ಶವ ನದಿಯಲ್ಲಿ ಪತ್ತೆ ; ಆತ್ಮಹತ್ಯೆ ಶಂಕೆ

Spread the love

ಬಂಟ್ವಾಳ: ಮುಸ್ಲಿಮ್ ಮಹಿಳೆಯೊಬ್ಬಳ ಶವವು ದರ್ಗಾ ಸಮೀಪದ ನೇತ್ರಾವತಿ ಹೊಳೆಯಲ್ಲಿ ಶುಕ್ರವಾರ ಸಂಜೆ ಪತ್ತೆಯಾಗಿದೆ.

ಮೃತ ಮಹಿಳೆಯನ್ನು ಕಲ್ಲಡ್ಕ ನಿವಾಸಿ, ದಿವಂಗತ ಬೇಕರಿ ಅಂಗಡಿ ಇಸುಬು ಎಂಬವರ ಪತ್ನಿ ಬೀಪಾತುಮ್ಮ(45) ಎಂದು ಗುರುತಿಸಲಾಗಿದೆ.

ಮಹಿಳೆಯು ಅಜಿಲಮೊಗರು ದರ್ಗಾ ಝಿಯಾರತ್ ಗೆ ಬಂದಿದ್ದು, ಬಳಿಕ ನದಿಗೆ ಹಾರಿ ಆತ್ಮ ಹತೈಗೈದಿದ್ದಾರೆಎಂದು ಶಂಕಿಸಲಾಗಿದೆ.

ಮೃತ ಮಹಿಳೆಯು ದರ್ಗಾ ಸಂದರ್ಶನದ ಬಳಿಕ  ಒಂದೆರೆಡು ಬಾರಿ ಸೇತುವೆಯ ಬಳಿಅಲೆದಾಡಿದ್ದು, ಬಳಿಗೆ ನದಿಗೆ ಹಾರಿದ್ದಾರೆ.  ಅದೇ ದಾರಿಯಾಗಿ ಬಂದ ಪಿಕಪ್ ಚಾಲಕರು ಮಹಿಳೆಯ ಶವ ನದಿಯಲ್ಲಿ ತೇಲುತ್ತಿರುವುದನ್ನು ಕಂಡು  ಶವವನ್ನುಮೇಲಕ್ಕೆ ಎತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕೂಡಲೆ ಸ್ಥಳಕ್ಕಾಗಮಿಸಿದ ಪೋಲೀಸರು ಶವವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಗೆ ಸಾಗಿಸಿದ್ದಾರೆ. ಆತ್ಮಹತೈಗೆ ಮಾನಸಿಕ  ಅಸಮತೋಲನ ಕಾರಣವಾಗಿರಬಹುದೆಂದು ಶಂಕಿಸಿ ಪೋಲೀಸರು ಪ್ರಕರಣವನ್ನುಕೈಗೆತ್ತಿ ತನಿಖೆ ಕೈಗೊಂಡಿದ್ದಾರೆ.


Spread the love