ಬಕ್ರೀದ್ ವೇಳೆ ಜಿಲ್ಲೆಯಲ್ಲಿ ಗೋ ಹತ್ಯೆ, ಅಕ್ರಮ ಗೋಸಾಗಾಟ, ಕಳ್ಳತನ ವಿರುದ್ದ ಕ್ರಮ ಕೈಗೊಳ್ಳಿ – ದಿನೇಶ್ ಮೆಂಡನ್

Spread the love

ಬಕ್ರೀದ್ ವೇಳೆ ಜಿಲ್ಲೆಯಲ್ಲಿ ಗೋ ಹತ್ಯೆ, ಅಕ್ರಮ ಗೋಸಾಗಾಟ, ಕಳ್ಳತನ ವಿರುದ್ದ ಕ್ರಮ ಕೈಗೊಳ್ಳಿ – ದಿನೇಶ್ ಮೆಂಡನ್

ಉಡುಪಿ: ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಟ, ಗೋ ಕಳ್ಳತನ ,ಮತ್ತು ಗೋ ಹತ್ಯೆ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದು ಕರ್ನಾಟಕ ರಾಜ್ಯ ಜಾನುವಾರು ಹತ್ಯೆ ಪ್ರತಿಭಂದಕ ಹಾಗೂ ಸಂರಕ್ಷಣಾ ಕಾಯಿದೆ ಜಾರಿಯಲ್ಲಿದ್ದು ಅದರ ಪ್ರಕಾರ ಕುರ್ಬಾನಿಗೆ, (ಯಾವುದೇ ರೀತಿಯ ಹತ್ಯೆ) ನಿಷೇಧವಿದೆ. ಹಾಗೂ ಕುರ್ಬಾನಿ ಗೆ ಜಾನುವಾರು ಸಾಗಾಟವೂ ಶಿಕ್ಷಾರ್ಹ ಅಪರಾಧವಾಗಿದೆ.

ಈ ನಿಟ್ಟಿನಲ್ಲಿ ಬಕ್ರಿದ್ ಹಬ್ಬದ ಆಚರಣೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ, ಗೋ ಕಳ್ಳತನ ಮತ್ತು ಹತ್ಯೆ ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈಗಾಗಲೇ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟದ ಕೆಲವು ಪ್ರಕರಣಗಳು ಕಂಡು ಬರುತ್ತಿದ್ದು ಇದನ್ನು ಗಮನಿಸಿ ವಿಶ್ವ ಹಿಂದು ಪರಿಷದ್ ಬಜರಂಗದಳ ಈಗಾಗಲೇ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದು ಜಿಲ್ಲೆಯ ಕೆಲವೊಂದು ಸೂಕ್ಷ್ಮ ಪ್ರದೇಶಗಳಲ್ಲಿ ಅಕ್ರಮ ಗೋ ಸಾಗಾಟ ಕಳ್ಳತನ ಮತ್ತು ಗೋ ಹತ್ಯೆ ನಡೆಯುವ ಸಾಧ್ಯತೆ ಇದೆ ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದು ಪರಿಷದ್ ಆಗ್ರಹಿಸುತ್ತದೆ


Spread the love