ಬಜಾಲ್: ಹೊರೆಕಾಣಿಕೆಗೆ ಸ್ವಾಗತ ಕೋರಿದ ಮುಸ್ಲಿಮರು

Spread the love

ಬಜಾಲ್: ಹೊರೆಕಾಣಿಕೆಗೆ ಸ್ವಾಗತ ಕೋರಿದ ಮುಸ್ಲಿಮರು

ಮಂಗಳೂರು: ನಗರದ ಬಜಾಲ್ ನಂತೂರಿನ ಅಮೇವು ಶ್ರೀ ಆದಿಶಕ್ತಿ ದೇವಿ ದೇವಸ್ಥಾನದ ಪುನರ್‌ಪ್ರತಿಷ್ಠೆ ಕಲಶಾಭಿಷೇಕ ಪ್ರಯುಕ್ತ ಮಂಗಳವಾರ ಸಂಜೆ ನಡೆದ ಹೊರೆ ಕಾಣಿಕೆ ಮೆರವಣಿಗೆಯನ್ನು ಸ್ಥಳೀಯ ಮುಸ್ಲಿಮರು ಸ್ವಾಗತಿಸಿ ಗಮನ ಸೆಳೆದರು.

ಶ್ರೀ ಕ್ಷೇತ್ರಕ್ಕೆ ದೇವಸ್ಥಾನದ ಮುಖ್ಯಸ್ಥ ವಿಠಲ್ ಪೂಜಾರಿ ನೇತೃತ್ವದ ಹೊರೆ ಕಾಣಿಕೆ ಮೆರವಣಿಗೆಯು ಬಜಾಲ್ ನಂತೂರಿನ ಬದ್ರಿಯಾ ಜುಮಾ ಮಸೀದಿಯ ಮುಂದೆ ಸಾಗುತ್ತಿದ್ದ ವೇಳೆ ಜಮಾಅತ್ ಆಡಳಿತ ಕಮಿಟಿ ಮುಖಂಡರು ಭಕ್ತಾದಿಗಳನ್ನು ಸ್ವಾಗತಿಸಿ ಸಿಹಿ ತಿಂಡಿ, ತಂಪು ಪಾನೀಯ, ಐಸ್‌ಕ್ರೀಮ್ ವಿತರಿಸಿದರು.

ಈ ಸಂದರ್ಭ ಶ್ರೀ ಬ್ರಹ್ಮ ಭೈದರ್ಕಳ ಕ್ಷೇತ್ರ ಕಂಕನಾಡಿ ಗರೋಡಿಯ ಅಧ್ಯಕ್ಷ ಕೆ. ಚಿತ್ತರಂಜನ್, ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರವೂಫ್, ಉಪಾಧ್ಯಕ್ಷರಾದ ಅಶ್ರಫ್ ಬಜಾಲ್, ಎಚ್.ಎಸ್. ಹನೀಫ್, ನಝೀರ್ ಬಜಾಲ್, ಆಮೇವು ಕ್ಷೇತ್ರ ಆದಿ ಶಕ್ತಿ ದೇವಿ ದೇವಸ್ಥಾನದ ಮುಖ್ಯಸ್ಥ ವಿಠಲ್ ಪೂಜಾರಿ, ಭರತೇಶ್ ಅಮೀನ್, ಹರಿಪ್ರಸಾದ್, ಹೇಮಂತ್ ಗರೋಡಿ, ಅಬೂಬಕ್ಕರ್, ಅಬ್ದುಲ್ ರಝಾಕ್, ಎಂಆರ್ ರಫೀಕ್, ಶೌಕತ್ ಇಬ್ರಾಹಿಂ, ಯೋಗೀಶ್ ಅತ್ತಾವರ, ಮಾಧವ ಕೃಷ್ಣಾಪುರ ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments