Spread the love
ಬಜೆ ಅಣೆಕಟ್ಟಿಗೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ; ನೀರಿನ ಮಟ್ಟ ಪರಿಶೀಲನೆ
ಉಡುಪಿ: ನಗರಸಭೆಯ ಕುಡಿಯುವ ನೀರಿನ ಬಜೆ ಅಣೆಕಟ್ಟು ಪ್ರದೇಶಕ್ಕೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹಾಗೂ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಭೇಟಿ ನೀಡಿ ನೀರಿನ ಸಂಗ್ರಹ ಮಟ್ಟವನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು.
ಬಜೆ ಅಣೆಕಟ್ಟು ನೀರಿನ ಸಂಗ್ರಹ ಸಾಮರ್ಥ್ಯ, ಒಳಹರಿವು ಬಗ್ಗೆ ಚರ್ಚೆ ನಡೆಸಿ ನಗರದ ನೀರು ಸರಬರಾಜಿಗೆ ಈ ಬಾರಿ ಯಾವುದೇ ಸಮಸ್ಯೆ ಯಾಗುವುದಿಲ್ಲ, ವಾರಾಹಿ ಯೋಜನೆಯ ಮೂಲಕವೂ ನಗರಕ್ಕೆ 25 ಎಂ. ಎಲ್. ಡಿ. ನೀರು ಸರಬರಾಜಾಗುತ್ತಿರುವುದರಿಂದ ರೇಶನಿಂಗ್ ಮಾಡುವ ಅನಿವಾರ್ಯತೆ ಇಲ್ಲ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಮಹೇಶ್, ನಗರಸಭಾ ಸದಸ್ಯರಾದ ಟಿ. ಜಿ. ಹೆಗ್ಡೆ, ಹರೀಶ್ ಶೆಟ್ಟಿ, ಗಿರಿಧರ ಆಚಾರ್ಯ, ಸಹಾಯಕ ಅಭಿಯಂತರರಾದ ಚೇತನ್, ವಾರಾಹಿ ಯೋಜನೆಯ ಆರ್ಕೇಶ್ ಮೊದಲಾದವರು ಉಪಸ್ಥಿತರಿದ್ದರು.
Spread the love