ಬಳೆ ವಿವಾದ: ಮಹಿಳೆಯರ ಕ್ಷಮೆ ಯಾಚಿಸುವಂತೆ ಶೋಭಾಗೆ ಉಡುಪಿ ಜಿಲ್ಲಾ ಆರ್.ಜಿಪಿ.ಆರ್.ಎಸ್ ಸಂಘಟನೆ ಆಗ್ರಹ

ಬಳೆ ವಿವಾದ: ಮಹಿಳೆಯರ ಕ್ಷಮೆ ಯಾಚಿಸುವಂತೆ ಶೋಭಾಗೆ ಉಡುಪಿ ಜಿಲ್ಲಾ ಆರ್.ಜಿಪಿ.ಆರ್.ಎಸ್ ಸಂಘಟನೆ ಆಗ್ರಹ

ಉಡುಪಿ: ಸಂಸದೆ ಶೋಭಾ ಕರಂದ್ಲಾಜೆಯವರು ತಮ್ಮ ಬಾಯಿ ಚಪಲಕ್ಕೆ ಬಳೆ ತೊಡುವುದು ಅಸಾಯಕತೆ ಎಂದು ಅರ್ಥೈಸಿಕೊಂಡು ಮಾತನಾಡಿದ್ದು ಕೂಡ ರಾಜ್ಯದ ಮಹಿಳೆಯರ ಕ್ಷಮೆಯಾಚನೆ ಮಾಡುವಂತೆ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಆಗ್ರಹಿಸಿದೆ.

ಶೋಭಾ ಕರ೦ದ್ಲಾಜೆಯವರು ಕಾ೦ಗ್ರೆಸ್ ನಾಯಕರಿಗೆ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಆಗದಿದ್ದಲ್ಲಿ ಬಳೆ ತೊಟ್ಟುಕೊಳ್ಳಲಿ ಎನ್ನುತ್ತಾರೆ . ಶೋಭಾ ಕರಂದ್ಲಾಜೆಯವರೇ , ಬಳೆ ತೊಡುವುದು ಅಸಹಾಯಕತೆಯ ಲಕ್ಷಣವಲ್ಲ . ತಾವೂ ಒಬ್ಬ ಹೆಣ್ಣಾಗಿ ಬಳೆ ತೊಡುವ ಹೆಣ್ಣನ್ನು ಕೈಲಾಗದವರು ಎ೦ದು ಅರ್ಥೈಸುವುದು ಸಮಸ್ತ ಸ್ತ್ರೀ ಕುಲಕ್ಕೆ ತಾವು ಮಾಡುವ ಅಪಮಾನ . ಹಿ೦ದೂ ಧರ್ಮದ ಪ್ರಕಾರ ಮಹಿಳೆ ಬಳೆ ತೊಡುವುದು ಶ್ರೇಷ್ಠತೆಯ ಸಂಕೇತ . ಅದಕ್ಕೆ ಅದರದ್ದೇ ಆದ ಗೌರವವಿದೆ .

ತಮ್ಮ ಬಾಯಿ ಚಪಲಕ್ಕೆ ಬಳೆ ತೊಡುವುದನ್ನು ಅಸಹಾಯಕತೆ ಎ೦ದು ಅರ್ಥೈಸುವ ನೀವು ಸಮಸ್ತ ಮಹಿಳೆಯರ ಕ್ಷಮೆ ಯಾಚನೆಗೆ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಆಗ್ರಹಿಸುತ್ತದೆ .