ಬಶೀರ್ ಕುಟುಂಬಕ್ಕೂ ಸರ್ಕಾರ 50 ಲಕ್ಷ ಪರಿಹಾರ ನೀಡಲು ಸಂಸದ ನಳಿನ್ ಒತ್ತಾಯ

Spread the love

ಬಶೀರ್ ಕುಟುಂಬಕ್ಕೂ ಸರ್ಕಾರ 50 ಲಕ್ಷ ಪರಿಹಾರ ನೀಡಲು ಸಂಸದ ನಳಿನ್ ಒತ್ತಾಯ

ಉಡುಪಿ: ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ನಡೆದಿದೆ ಎನ್ನಲಾದ ಬಶೀರ್ ಕೊಲೆ ಕೃತ್ಯವನ್ನು ಬಿಜೆಪಿ ಸಂಸದ ನಳೀನ್ ಕುಮಾರ್ ಕಟೀಲ್ ಖಂಡಿಸಿದ್ದು, ಬಶೀರ್ ಕುಟುಂಬಕ್ಕೂ ಸರ್ಕಾರ 50 ಲಕ್ಷ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲಿ ಈ ಬಗ್ಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಪರಿಣಾಮವೇ ಕರಾವಳಿ ಜಿಲ್ಲೆಯಲ್ಲಿನ ಭಯಾನಕ ವಾತಾವರಣಕ್ಕೆ ಕಾರಣ ಎಂದು ವಿಶ್ಲೇಷಿಸಿದ್ದಾರೆ.

“ರಾಜ್ಯದಲ್ಲಿ ಗೂಂಡಾಗಿರಿ ಮತ್ತೊಮ್ಮೆ ತಾಂಡವವಾಡುತ್ತಿದೆ. ದರೋಡೆಕೋರರು ಸಕ್ರಿಯರಾಗಿದ್ದಾರೆ. ಮತಾಂಧ ಶಕ್ತಿಗಳು ಎಚ್ಚೆತ್ತುಕೊಂಡಿವೆ. ಮುಖ್ಯಮಂತ್ರಿಗಳ ದುರಹಂಕಾರ, ಆಡಳಿತದಲ್ಲಿ ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲದೇ ಇರೋದು ರಾಜ್ಯದ ಪರಿಸ್ಥಿತಿ ಹದಗೆಡಲು ಕಾರಣವಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾನ ಮರ್ಯಾದೆ ಇದ್ದಿದ್ರೆ ಅವರು ರಾಜಿನಾಮೆ ಕೊಡುತ್ತಿದ್ದರು. ಆದ್ರಿಂದ ನಮಗೆ ಸಿಎಂ ಮೇಲೆ ಯಾವುದೇ ನಿರೀಕ್ಷೆಯಿಲ್ಲ,” ಎಂದು ಬಿಜೆಪಿ ಸಂಸದರು ಹತಾಶೆ ವ್ಯಕ್ತಪಡಿಸಿದ್ದಾರೆ.

 


Spread the love