ಬಸವ ಸಮಿತಿ ಅಯೋಜಿಸಿರುವ ರಕ್ತದಾನ ಶಿಭಿರ ಯಶಸ್ವಿ

Spread the love

ಬಸವ ಸಮಿತಿ ದುಬೈ ಯು.ಎ.ಇ. ದುಬಾಯಿಯಲ್ಲಿ ಅಯೋಜಿಸಿರುವ ರಕ್ತದಾನ ಶಿಭಿರ ಯಶಸ್ವಿ

ಯು.ಎ.ಇ: ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ಕರ್ನಾಟಕ ಪರ ಸಂಘಟನೆಗಳಲ್ಲಿ ಒಂದಾಗಿರುವ ಬಸವ ಸಮಿತಿ ದುಬೈ, ಯು.ಎ.ಇ. ಸಂಘಟನೆ ಪವಿತ್ರ ರಂಜಾನ್ ಮಾಸಾಚರಣೆಯ ಈ ಸುಸಂದರ್ಭದಲ್ಲಿ ರಕ್ತದಾನ ಶಿಭಿರವನ್ನು ಆಯೋಜಿಸಿ ರಕ್ತದಾನಿಗಳು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ದುಬಾಯಿ ಲತಿಫಾ ಅಸ್ಪತ್ರೆಯಲ್ಲಿ  ಜೂನ್ 12ನೇ ತಾರೀಕು ಭಾನುವಾರ ರಾತ್ರಿ 8.30 ರಿಂದ ರಾತ್ರಿ 10.30 ಗಂಟೆಯವರೆಗೆ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ಆಗಮಿಸಿ ರಕ್ತದಾನ ನೀಡಿ ಶಿಭಿರವನ್ನು ಯಶಸ್ವಿಗೊಳಿಸಿದರು.

image001blood-donation-20160613-001 image002blood-donation-20160613-002 image003blood-donation-20160613-003 image004blood-donation-20160613-004 image005blood-donation-20160613-005 image006blood-donation-20160613-006 image007blood-donation-20160613-007 image008blood-donation-20160613-008

ಬಸವ ಸಮಿತಿ ದುಬಾಯಿ ಯು.ಎ.ಇ. ಯ ಅಧ್ಯಕ್ಷರಾದ ಶ್ರೀ ರುದ್ರಯ್ಯ ನವೇಲಿ ಮತ್ತು ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ರಕ್ತದಾನ ಶಿಬಿರದಲ್ಲಿ ಅತ್ಯಂತ ಲವಲವಿಕೆಯಿಂದ ರಕ್ತದಾನಿಗಳನ್ನು ಬರಮಾಡಿಕೊಂಡು ತಾವು ಸಹ ರಕ್ತದಾನ ನೀಡುವುದರ ಮೂಲಕ ಯು.ಎ.ಇ. ಯಲ್ಲಿ ನಡೆಯುತಿರುವ ರಕ್ತದಾನ ಅಭಿಯಾನದಲ್ಲಿ ಪಾಲ್ಗೊಂಡರು.

ಶ್ರೀ ಬಾಲಕೃಷ್ಣ ಸಾಲಿಯಾನ್ ಮತ್ತು ಸ್ನೇಹಿತರು ರಕ್ತದಾನ ಶಿಬಿರಕ್ಕೆ ತಮ್ಮ ಪೂರ್ಣ ಬೆಂಬಲ ನೀಡಿದ್ದಾರೆ.


Spread the love