ಬಸ್ಸಿನಲ್ಲಿ ಕಳೆದು ಹೋದ ಒಂದು ಲಕ್ಷ ಮೌಲ್ಯದ ಚಿನ್ನ ಮರಳಿಸಿದ ನಿರ್ವಾಹಕ ಅನ್ಸರ್ ಅಜೆಕಾರು : ಮಾನವೀಯತೆಗೆ ಮೆಚ್ಚುಗೆ

Spread the love

ಹೆಬಿ : ಫೆ.20: ಇಲ್ಲಿನ ಮುನಿಯಾಲು ಎಳ್ಳಾರೆ ಗರ್ಧರಬೆಟ್ಟು ಲಕ್ಷ್ಮಿ ಜಿ.ಶೀನಾ ಆಚಾರ್ಯ ಶನಿವಾರ ಮುನಿಯಾಲುನಲ್ಲಿ ಕಾರ್ಕಳಕ್ಕೆ ಪದ್ಮಾಂಬಿಕ ಬಸ್ಸ್‍ನಲ್ಲಿ ತೆರಳುವಾಗ ಪರ್ಸ್ ಕಳೆದು ಹೊಗಿದ್ದು ಲಕ್ಷ್ಮಿ ಆಚಾರ್ಯ ಕಾರ್ಕಳಕ್ಕೆ ತಲುಪುವಾಗ ಪರ್ಸ್ ಕಳೆದ ವಿಷಯ ತಿಳಿದು ಗಾಬರಿಗೊಂಡಿದ್ದಾರೆ.

gold-bag-return-ajekar

ಪರ್ಸ್ ಬಸ್ಸಿನಲ್ಲಿದ್ದ ಮಹಿಳೆಗೆ ಸಿಕ್ಕಿದ್ದು ಮಹಿಳೆ ಆ ಪರ್ಸನ್ನು ಬಸ್ಸಿನ ನಿರ್ವಾಹಕ ಅಜೆಕಾರು ಮೂರೂರಿನ ಅನ್ಸರ್ ಅವರಲ್ಲಿ ಕೊಟ್ಟು ಹೋಗಿದ್ದರು. ಲಕ್ಷ್ಮೀಯವರ ಮಕ್ಕಳು ಬಸ್ ನಿರ್ವಾಹಕರಲ್ಲಿ ಪರ್ಸ್ ಬಗ್ಗೆ ಕೇಳಿದಾಗ ಬಸ್ಸಿನ ನಿರ್ವಾಹಕ ಅಜೆಕಾರು ಮೂರೂರಿನ ಅನ್ಸರ್ ಮತ್ತು ಚಾಲಕ ಅಬ್ದುಲ್ ಶುಕುರ್ ಶನಿವಾರ ಸಂಜೆ ಹೆಬ್ರಿ ಬಸ್ ನಿಲ್ದಾಣದಲ್ಲಿ ಪರ್ಸ್‍ನಲ್ಲಿದ್ದ ಒಂದು ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ನಗದನ್ನು ವಾರಸುದಾರ ಮುನಿಯಾಲು ಎಳ್ಳಾರೆಯ ಜಿ.ಎಸ್.ಪುರಂದರ ಪುರೋಹಿತ್ ಮೂಡಬಿದಿರೆ ಮತ್ತು ಜಿ.ಎಸ್.ಗಂಗಾಧರ ಆಚಾರ್ಯರಿಗೆ ನೀಡಿ ಮೆಚ್ಚುಗೆಗೆ ಪಾತ್ರರಾದರು. ಪತ್ರಕರ್ತ ಸುಕುಮಾರ್ ಮುನಿಯಾಲ್ ಜತೆಗಿದ್ದರು.


Spread the love