ಬಸ್ಸಿನಲ್ಲಿ ಬ್ಯಾಗಿನಿಂದ ಮೊಬೈಲ್ ಕಳ್ಳತನ ಮಾಡಿದ ಆರೋಪಿಯ ಬಂಧನ

Spread the love

ಬಸ್ಸಿನಲ್ಲಿ ಬ್ಯಾಗಿನಿಂದ ಮೊಬೈಲ್ ಕಳ್ಳತನ ಮಾಡಿದ ಆರೋಪಿಯ ಬಂಧನ

ಮಂಗಳೂರು : ಮಂಗಳೂರು ನಗರದ ಕಂಕನಾಡಿ ಬಸ್ಟ್ಯಾಂಡಿನಲ್ಲಿ ಸಾರ್ವಜನಿಕರು ಬಸ್ಸು ಹತ್ತುವಾಗ ಅವರ ಬ್ಯಾಗಿನಿಂದ ಮೊಬೈಲ್ ಫೋನುಗಳನ್ನು ಕಳವು ಮಾಡುತ್ತಿದ್ದ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದಾರೆ.

ಬಂಧಿತನನ್ನು ಮೂಡಬಿದರೆ ಗಂಟಲ್ಕಟ್ಟೆ ನಿವಾಸಿ ರಾಜೇಶ್ ಪೂಜಾರಿ ಎಂದು ಗುರುತಿಸಲಾಗಿದ್ದು ಆತನಿಂದ ಕಳ್ಳತನ ಮಾಡಿದ ಸುಮಾರು ರೂ 20000 ಮೌಲ್ಯದ 2 ಮೊಬೈಲ್ ಫೋನುಗಳನ್ನು ಮತ್ತು ಸುಮಾರು 20ಗ್ರಾಂ ತೂಕದ ಬೆಳ್ಳಿಯ ಬ್ರಾಸ್ ಲೇಟ್ ನ್ನು ವಶಪಡಿಸಿಕೊಂಡಿರುತ್ತಾರೆ.

ಬಂಧಿತನು ಏಪ್ರಿಲ್ 20ರಂದು ಸಂಜೆ ವೇಳೆ ಕಂಕನಾಡಿ ಕರಾವಳಿ ವೃತ್ತ ಎಂಬಲ್ಲಿ ಬಿಸಿ ರೋಡ್ ಕಡೆಗೆ ಹೋಗುವ ಬಸ್ಟ್ಯಾಂಡಿನಲ್ಲಿ ಒಬ್ಬಳು ಯುವತಿ ಬಸ್ಸು ಹತ್ತುವಾಗ ಅವಳ ಬ್ಯಾಗಿನಿಂದ ರೂ 15000 ಮೌಲ್ಯದ ವಿವೋ ಫೋನ್ ಕಳವು ಮಾಡಿದ್ದು, ಅಲ್ಲದೆ ಈತನು ಪೂಜಾಲ್ ಕಟ್ಟೆ ಎಂಬಲ್ಲಿ ಬಸ್ಸಿನಲ್ಲಿ ಮಹಿಳೆಯ ಬ್ಯಾಗಿನಿಂದ ಮೊಬೈಲ್ ಕಳವು ಮಾಡಿದ್ದು, ಈತನು ಈ ಹಿಂದೆ ಹಲವಾರು ಜೇಬು ಕಳ್ಳತನ, ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಈತನ ವಿರುದ್ದ ಮಂಗಳೂರು ದಕ್ಷಿಣ ಠಾಣೆ, ಉತ್ತರ ಠಾಣೆ ಮತ್ತು ಮೂಡಬಿದರೆ ಠಾಣೆಯಲ್ಲಿ ಮನೆ ಕಳವು ಪ್ರಕರಣ ದಾಖಲಾಗಿರುತ್ತದೆ.


Spread the love