ಬಸ್ ಚಲಾಯಿಸುತ್ತಿರುವಾಗಲೇ ಚಾಲಕನಿಗೆ ಲಘು ಹೃದಯಾಘಾತ – ವಿದ್ಯಾರ್ಥಿಗಳು ಪಾರು

Spread the love

ಬಸ್ ಚಲಾಯಿಸುತ್ತಿರುವಾಗಲೇ ಚಾಲಕನಿಗೆ ಲಘು ಹೃದಯಾಘಾತ – ವಿದ್ಯಾರ್ಥಿಗಳು ಪಾರು

ಉಡುಪಿ: ಬಸ್ ಚಲಾಯಿಸುತ್ತಿರುವಾಗಲೇ ಶಾಲಾ ಚಾಲಕರೋರ್ವರಿಗೆ ಲಘು ಹೃದಯಾಘಾತವಾಗಿದ್ದು ಆತನ ಸಮಯಪ್ರಜ್ಞೆಯಿಂದ ವಿದ್ಯಾರ್ಥಿಗಳು ಪಾರಾದ ಘಟನೆ ಪೆರಂಪಳ್ಳಿ ಸಮೀಪ ಬುಧವಾರ ನಡೆದಿದೆ.

ಬ್ರಹ್ಮಾವರದ ಖಾಸಗಿ ಶಾಲೆಯ ಬಸ್ಸಿನ ಚಾಲಕ ಕರ್ಜೆ ನಿವಾಸಿ ಮೆಲ್ವಿನ್  ಡಿ’ಸೋಜಾ (52) ವಿದ್ಯಾರ್ಥಿಗಳನ್ನು ಕೊಂಡೊಯ್ಯುತ್ತಿದ್ದ ವೇಳೆ ಧೀಡಿರ್ ಹೃದಯಾಘಾತವಾಗಿದ್ದು ಸಮಯಪ್ರಜ್ಞೆಯಿಂದ ಕೂಡಲೇ ಬಸ್ ನ್ನು ಎಡ ಮಗ್ಗುಲಿಗೆ ಕೊಂಡೊಯ್ದು, ಎದುರಿಗಿದ್ದ ಮರವನ್ನು ತಪ್ಪಿಸಿಕೊಂಡ ಪರಿಣಾಮ ಬಸ್ಸಿನಲ್ಲಿದ್ದ ಹತ್ತಾರು ವಿದ್ಯಾರ್ಥಿಗಳು ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕೂಡಲೇ ಚಾಲಕನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನಡೆಯುತ್ತಿದೆ. ಘಟನೆಯಿಂದ ನಾಲ್ಕೈದು ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.


Spread the love

Leave a Reply