ಬಹುಮತದಿಂದ ಗೆಲ್ಲಿಸಿದರೆ ಕ್ಷೇತ್ರದ ಅಭಿವೃದ್ಧಿಗಾಗಿ ಸೇವಕನಾಗುವೆ – ಪ್ರಮೋದ್ ಮಧ್ವರಾಜ್

Spread the love

ಬಹುಮತದಿಂದ ಗೆಲ್ಲಿಸಿದರೆ ಕ್ಷೇತ್ರದ ಅಭಿವೃದ್ಧಿಗಾಗಿ ಸೇವಕನಾಗುವೆ – ಪ್ರಮೋದ್ ಮಧ್ವರಾಜ್

ಬಣಕಲ್‌ : ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಬಹುಮತದಿಂದ ಗೆಲ್ಲಿಸಿದರೆ ಕಾಂಗ್ರೆಸ್‌, ಜೆಡಿಎಸ್‌,ಕಮ್ಯೂನಿಸ್ಟ್‌ ಪಕ್ಷದ ಒಳಿತಿಗಾಗಿ, ಕ್ಷೇತ್ರದ ಅಭಿವೃದ್ಧಿಗಾಗಿ ಸೇವಕನಾಗಿ ದುಡಿಯುತ್ತೇನೆ ಎಂದು ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಪಕ್ಷ ದ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಅವರು ಬಣಕಲ್‌ನಲ್ಲಿ ನಡೆದ ಕಾಂಗ್ರೆಸ್‌,ಜೆಡಿಎಸ್‌,ಕಮ್ಯೂನಿಸ್ಟ್‌ ಮೈತ್ರಿ ಪಕ್ಷ ದ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿ, ನೀವು ಗೆಲ್ಲಿಸಿದ ಶೋಭಾ ಕರಂದ್ಲಾಜೆ ಐದು ವರ್ಷದಲ್ಲಿ ಯಾವುದೇ ಕೆಲಸ ಮಾಡಲಿಲ್ಲ. ಮೋದಿ ಹೆಸರು ಬಳಸಿ ಮತ ಕೇಳುತ್ತಿದ್ದಾರೆ.ಅವರು ಮೋದಿ ಹೆಸರು ಹೇಳುವುದಾದರೆ ವಾರಣಾಸಿಗೆ ಹೋಗಲಿ ಎಂದು ಟಾಂಗ್‌ ನೀಡಿದರು.

ಕಾಫಿ ಬೆಳೆಗಾರರು, ರೈತರು, ಕ್ಷೇತ್ರದ ಸಮಸ್ಯೆ ಬಗ್ಗೆ ಶೋಭಾ ಕರಂದ್ಲಾಜೆ ಸ್ಪಂದಿಸಲಿಲ್ಲ. ಅದಕ್ಕಾಗಿ ಸ್ವಪಕ್ಷ ದವರೇ ಶೋೕಭಾ ವಿರುದ್ಧ ‘ಗೋ ಬ್ಯಾಕ್‌ ಶೋಭಾ’ ಚಳವಳಿ ಪ್ರಾರಂಭಿಸಿದರು.ಅದನ್ನು ಸಂಪೂರ್ಣ ಯಶಸ್ವಿಗೊಳಿಸಬೇಕಾದ ಕೆಲಸ ಕಾರ್ಯಕರ್ತರು ಹಾಗೂ ಮತದಾರರಿಂದ ಮಾತ್ರ ಸಾಧ್ಯ. ನಾನು ಈ ಹಿಂದೆ ಕೆಲಸ ಮಾಡಿ ತೋರಿಸಿದ್ದೇನೆ. ಶೋಗಾಗಿ ಸ್ಪರ್ಧಿಸಿಲ್ಲ. ಹಾಗಾಗಿ, ನನ್ನ ಕ್ಷೇತ್ರದ ನಿರ್ವಹಣೆ ನೋಡಿ ನನಗೆ ಇಂದು ಈ ಕ್ಷೇತ್ರದಲ್ಲಿ ಸ್ಪರ್ಧಿಸುವ ಹೊಣೆ ಕೊಟ್ಟಿದ್ದಾರೆ ಎಂದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಯುಪಿಎ ನೇತೃತ್ವದ ಸರಕಾರ ಬಂದರೆ ರಾಹುಲ್‌ ಗಾಂಧಿ ಅವರು ಪ್ರತಿ ಬಿಪಿಎಲ್‌ ಕುಟುಂಬಕ್ಕೆ ಅರ್ಹತೆ ಮೇರೆಗೆ ತಿಂಗಳಿಗೆ 6 ಸಾವಿರ ರೂ. ನಂತೆ ವರ್ಷಕ್ಕೆ 72 ಸಾವಿರ ಹಣ ನೇರವಾಗಿ ಬಡವರ ಖಾತೆಗೆ ಬರಲಿದೆ ಎಂದರು.

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಲ್‌.ಮೂರ್ತಿ ಮಾತನಾಡಿ, ಬಿಜೆಪಿಯ ಶೋಭಾ ಕರಂದ್ಲಾಜೆಗೆ ಪಕ್ಷ ದಲ್ಲೇ ವಿರೋಧವಿದ್ದು,ಪಕ್ಷ ದವರೇ ಅವರು ಸ್ಪಂದಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಡಿ.ಎಲ್‌.ವಿಜಯಕುಮಾರ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಅಭಿಲಕ್ಷ ್ಮಣ್‌,ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುರೇಂದ್ರಗೌಡ,ಎಂ.ಎಸ್‌.ಅನಂತು, ನಯನ ಮೋಟಮ್ಮ, ಜಿ.ಪಂ.ಮಾಜಿ ಉಪಾಧ್ಯಕ್ಷೆ ಕೆ.ರಾಜಮ್ಮ, ಮಾಜಿ ಶಾಸಕ ಬಿ.ಬಿ.ನಿಂಗಯ್ಯ, ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಬೋಜೇಗೌಡ, ಎಚ್‌.ಎಚ್‌.ದೇವರಾಜ್‌, ಹೋಬಳಿ ಕಾಂಗ್ರೆಸ್‌ ಅಧ್ಯಕ್ಷ ಟಿ.ಎಂ.ಸುಬ್ರಮಣ್ಯ,ಅಲ್ಪ ಸಂಖ್ಯಾತರ ಕಾಂಗ್ರೆಸ್‌ ಅಧ್ಯಕ್ಷ ಮೆಲ್ವಿನ್‌ ಲಸ್ರಾದೊ,ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ರಂಜನ್‌ ಅಜಿತ್‌ಕುಮಾರ್‌,ತಾಲೂಕು ಜೆಡಿಎಸ್‌ ಅಧ್ಯಕ್ಷ ಬಿ.ಎಸ್‌.ಲಕ್ಷ ್ಮಣ್‌,ಜೆಡಿಎಸ್‌ ಹೋಬಳಿ ಅಧ್ಯಕ್ಷ ಮಹೇಶ್‌ಗೌಡ, ಕೆಜಿಎಫ್‌ ಅಧ್ಯಕ್ಷ ಬಿ.ಎಸ್‌.ಜಯರಾಮಗೌಡ ಮತ್ತಿತರರು ಹಾಜರಿದ್ದರು.


Spread the love