ಬಾಟ್ಲಿಯಿಂದ ಇರಿದು ಯುವಕನ ಕೊಲೆ

Spread the love

ಬಾಟ್ಲಿಯಿಂದ ಇರಿದು ಯುವಕನ ಕೊಲೆ

ಉಪ್ಪಿನಂಗಡಿ: ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ಜಗಳ ನಡೆದು ಓರ್ವ ಕೊಲೆಯಾದ ಘಟನೆ ಭಾನುವಾರ ಬೆಳಗ್ಗಿನ ಜಾವ ಉಪ್ಪಿನಂಗಡಿ ಕೋಟೆಲು ಬಳಿ ನಡೆದಿದೆ.

 

ಮೃತ ಯುವಕನನ್ನು ಕರಾಯ ಗ್ರಾಮದ ಕಲ್ಲಾಪು ಮನೆ ನಿವಾಸಿ ಮೋನಪ್ಪ ಎಂಬವರ ಪುತ್ರ ಯಶವಂತ (19) ಎಂದು ಗುರುತಿಸಲಾಗಿದೆ.

ಮೂಲಗಳ ಪ್ರಕಾರ ಇತನ ಸಂಬಂಧಿ ವಗ್ಗದ ಆನಂದ ಎಂಬಾತ ಬಾಟ್ಲಿಯೀಂದ ಇರಿದಿದ್ದು, ಗಂಭೀರ ಗಾಯಗೊಂಡು ರಸ್ತೆ ಬದಿಯಲ್ಲಿ ಬಿದ್ದ ಯಶವಂತನನ್ನು ರಿಕ್ಷಾ ಚಾಲಕ ಫಾರೂಕ್ ಮತ್ತು ಉಪ್ಪಿನಂಗಡಿ ಠಾಣಾ ಪೊಲೀಸ್ ಸಿಬಂದಿ ಪ್ರತಾಪ್ ಅವರು ಈತನನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟರುತ್ತಾನೆ.

ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love