ಬಿಜೆಪಿ ಹಿರಿಯ ನಾಯಕ ಅರುಣ್‌ ಜೇಟ್ಲಿ ನಿಧನಕ್ಕೆ ಶಾಸಕ ಕಾಮತ್ ಸಂತಾಪ  

ಬಿಜೆಪಿ ಹಿರಿಯ ನಾಯಕ ಅರುಣ್‌ ಜೇಟ್ಲಿ ನಿಧನಕ್ಕೆ ಶಾಸಕ ಕಾಮತ್ ಸಂತಾಪ  

ಮಂಗಳೂರು : ಬಿಜೆಪಿ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಅರುಣ್‌ ಮಹಾರಾಜ್‌ ಕಿಶನ್‌ ಜೇಟ್ಲಿ ನಿಧನಕ್ಕೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಸಂತಾಪ ಸೂಚಿಸಿದ್ದಾರೆ.

ಬಿಜೆಪಿಯ ಅತ್ಯಂತ ಪ್ರಭಾವಿ ಹಾಗೂ ಚಾಣಾಕ್ಷ ರಾಜಕಾರಣಿ ಅರುಣ್‌ ಜೇಟ್ಲಿ. ಅವರು ದೇಶಕಂಡ ಅಪರೂಪದ ರಾಜಕಾರಣಿಯಾಗಿದ್ದರು. ಅರುಣ್ ಜೇಟ್ಲಿಯವರ ಸಾವು ನಮಗೆಲ್ಲಾ ಆಘಾತ ಉಂಟು ಮಾಡಿದೆ. ಪ್ರಭಾವಿ ರಾಜಕಾರಣಿಯನ್ನು ಕಳೆದುಕೊಂಡು ರಾಷ್ಟ್ರ ಸೇರಿದಂತೆ ಪಕ್ಷಕ್ಕೂ ನಷ್ಟ ಆಗಿದೆ.

ಅರುಣ್ ಜೇಟ್ಲಿ ಪಕ್ಷಾತೀತವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ವ್ಯಕ್ತಿ. ಭಾರತದ ರಾಜಕಾರಣಕ್ಕೆ ಜೇಟ್ಲಿಯವರ ಕೊಡುಗೆ ಅಪಾರ. ಜೇಟ್ಲಿ ಅವರು ಬಿಜೆಪಿಗೆ ನೀಡಿರುವ ಸೇವೆಯನ್ನು ಯಾರೂ ಮರೆಯಲಾಗದು. ಇಂದಿನ ರಾಜಕಾರಣಿಗಳಿಗೆ ಅವರು ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದ್ದಾರೆ. ದೇಶದ ಬಜೆಟ್ ರೂಪಿಸುವಾಗ ಸರ್ವ ಜನರ ಕಲ್ಯಾಣವನ್ನು ಮನದಲ್ಲಿಟ್ಟು ದೇಶದ ಅಭಿವೃದ್ಧಿಗೆ ಕಾರಣೀಕತೃರಾಗಿದ್ದ, ಸಂಸತ್ತಿನಲ್ಲಿ ಮಾತನಾಡುವಾಗ ಘನತೆ, ಗಾಂಭೀರ್ಯದ ನುಡಿಗಳಿಗೆ ಹೆಸರಾಗಿದ್ದ, ಭಾರತ ರತ್ನ ಅಟಲ್ ಜೀಯವರ ಮಂತ್ರಿಮಂಡಲದಲ್ಲಿ ಸೇವೆ ಸಲ್ಲಿಸಿದ, ಪ್ರಧಾನಿ ಮೋದಿಜಿಯವರ ವಿಶ್ವಾಸಾರ್ಹ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ  ಅರುಣ್ ಜೇಟ್ಲಿಯವರ ಅಗಲಿಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ನೀಡಲಿ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಪ್ರಾರ್ಥಿಸಿದ್ದಾರೆ.