ಬೂತ್ ಮಟ್ಟದಲ್ಲಿ ಕಾರ್ಯಕರ್ತರೇ ಅಭ್ಯರ್ಥಿಯಾಗಿ ಕಾರ್ಯ ನಿರ್ವಹಿಸಿ: ವಿನಯ್ ಕುಮಾರ್ ಸೊರಕೆ

Spread the love

ಬೂತ್ ಮಟ್ಟದಲ್ಲಿ ಕಾರ್ಯಕರ್ತರೇ ಅಭ್ಯರ್ಥಿಯಾಗಿ ಕಾರ್ಯ ನಿರ್ವಹಿಸಿ: ವಿನಯ್ ಕುಮಾರ್ ಸೊರಕೆ

ಕಾಪು: ಚುನಾವಣೆ ಅನ್ನೋದು ಸುಲಭದ ಗುರಿಯಲ್ಲ. ಬೂತ್ ಮಟ್ಟದಲ್ಲಿ ನಿರ್ದಿಷ್ಟ ಗುರಿ ಇರಿಸಿಕೊಂಡು ತಾವೇ ಅಭ್ಯರ್ಥಿಯಾಗಿ ಕೆಲಸ ಮಾಡಿದ್ರೆ ಮಾತ್ರ ಗುರಿ ತಲುಪಲು ಸಾಧ್ಯ ಅಂತಾ ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

ಕಾಪು ರಾಜೀವ ಭವನದಲ್ಲಿ ನಡೆದ ಕಾಪು ಬ್ಲಾಕ್ ವ್ಯಾಪ್ತಿಯ ಬೂತ್ ಮಟ್ಟದ ಚುನಾವಣಾ ಪ್ರಚಾರ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.

ಸಭೆಯಲ್ಲಿ ಹಾಜರಿದ್ದ ಕ್ಷೇತ್ರದ ಎಲ್ಲಾ ಗ್ರಾ.ಪಂ. ವ್ಯಾಪ್ತಿಯ ಬೂತ್ ಮಟ್ಟದ ಕಾರ್ಯಕರ್ತರು ಪ್ರಚಾರದ ಕುರಿತು ಅವಲೋಕನ ನಡೆಸಿ, ಸಲಹೆ ನೀಡಿದರು

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಕಾಪು ದಿವಾಕರ ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು, ದಿನೇಶ್ ಪುತ್ರನ್, ದಿನೇಶ್ ಕೋಟ್ಯಾನ್, ಪ್ರಭಾವತಿ, ಕ್ರಿಸ್ಟನ್ ಅಲ್ಮೇಡಾ, ಗಣೇಶ ಕೋಟ್ಯಾನ್, ಎಚ್. ಅಬ್ದುಲ್ಲಾ, ಮಾಲಿನಿ, ಹರೀಶ್ ಶೆಟ್ಟಿ, ರಾಜೇಶ್ ರಾವ್, ದೀಪಕ್ ಕುಮಾರ್, ಕೇಶವ ಸಾಲ್ಯಾನ್, ಶಿವಾಜಿ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.


Spread the love