ರಾಜ್ಯದಲ್ಲಿ ಅಭಿವೃದ್ಧಿ ಮತ್ತು ಅಪಪ್ರಚಾರದ ಚುನಾವಣೆ : ಹರೀಶ್ ಕುಮಾರ್

Spread the love

ರಾಜ್ಯದಲ್ಲಿ ಅಭಿವೃದ್ಧಿ ಮತ್ತು ಅಪಪ್ರಚಾರದ ಚುನಾವಣೆ : ಹರೀಶ್ ಕುಮಾರ್

ಮಂಗಳೂರು: ರಾಜ್ಯದಲ್ಲಿ ಈ ಬಾರಿ ಸಿದ್ದರಾಮಯ್ಯ ಸರಕಾರದ ಅಭಿವೃದ್ಧಿ ಮತ್ತು ಬಿಜೆಪಿಯ ಅಪಪ್ರಚಾರದ ನಡುವೆ ಚುನಾವಣಾ ಸಮರ ನಡೆಯಲಿದ್ದು ಮತದಾರರೇ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.

ಚೊಕ್ಕಬೆಟ್ಟುವಿನಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

ಅನ್ನ ಭಾಗ್ಯದಿಂದ ಹಿಡಿದು ಅನಿಲ ಭಾಗ್ಯದವರೆಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಜಾರಿಗೊಳಿಸಿದ್ದಾರೆ. ದೇಶದ ಗಮನ ಸೆಳೆಯುತ್ತಿರುವ ರಾಜ್ಯದ ಚುನಾವಣೆಯನ್ನು ವಾಮ ಮಾರ್ಗದ ಮೂಲಕ ಜಯ ಪಡೆಯಲು ಬಿಜೆಪಿ ಯತ್ನಿಸಿದರೆ ಕಾಂಗ್ರೆಸ್ ಅಭಿವೃದ್ಧಿ ಆಧಾರದಲ್ಲಿ ಮತದಾರರ ಮುಂದೆ ಹೋಗುತ್ತಿದೆ ಎಂದರು.

ಶಾಸಕ ಮೊದಿನ್ ಬಾವಾ ಮಾತನಾಡಿ ಸುರತ್ಕಲ್ ಕ್ಷೇತ್ರ ಪ್ರತಿಷ್ಟಿತ ಪ್ರದೇಶ, ದೇಶದ ಬೃಹತ್ ಕಂಪನಿಗಳಿಂದ ಹಿಡಿದು ಬಂದರಿನವೆರೆಗೆ ಕಾಂಗ್ರೆಸ್ ಸಾಧನೆ ಕಣ್ಣ ಮುಂದಿದೆ. ಇದೀಗ ಮೂಲಸೌಕರ್ಯ ಅಭಿವೃದ್ಧಿ ವೇಗವಾಗಿ ನಡೆಯುತ್ತಿದೆ. ಕಾಂಗ್ರೆಸ್‌ನ ಕೆಲಸ ಅಭಿವೃದ್ಧಿ. ಇದನ್ನು ಮಾಡಿ ತೋರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು ರಾಜ್ಯ ದೇಶದಲ್ಲೇ ಅಭಿವೃದ್ಧಿಯ ರಾಜ್ಯವಾಗಿ ಹೊರಹೊಮ್ಮಲಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಸರಕಾರದ ಸೌಲಭ್ಯವನ್ನು ಮನೆ ಮನೆಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಉಸ್ತುವಾರಿ ಬೆಳಪು ದೇವಿಪ್ರಸಾದ್ ಶೆಟ್ಟಿ, ಹಂಗಾಮಿ ಅಧ್ಯಕ್ಷ ದೀಪಕ್ ಪೂಜಾರಿ, ಪ್ರಚಾರ ಸಮಿತಿಯ ಕೆ.ಸದಾಶಿವ ಶೆಟ್ಟಿ, ಬಶೀರ್ ಬೈಕಂಪಾಡಿ, ಪುರುಷೋತ್ತಮ್ ಚಿತ್ರಾಪುರ, ಶಶಿಧರ ಹೆಗ್ಡೆ,ಮೊಹಮ್ಮದ್,ಗಿರೀಶ್ ಆಳ್ವ,ಶಕುಂತಳಾ ಕಾಮತ್, ಹಿಲ್ಡಾ ಆಳ್ವ,ಬಶೀರ್ ಅಹ್ಮದ್,ಮಲ್ಲಿಕಾರ್ಜುನ್,ಗಂಗಾಧರ್ ಎಚ್.,ಆನಂದ್ ಅಮೀನ್,ಲಕ್ಷ್ಮೀಧರ ಗಿರಿ, ಗೋವರ್ಧನ್ ಶೆಟ್ಟಿಗಾರ್,ರಾಜೇಶ್ ಕುಳಾಯಿ,ಸುಮಂತ್, ಹುಸೈನ್ ಕಾಟಿಪಳ್ಳ,ಮಮತಾ ಶೆಟ್ಟಿ,ಮಂಗಳೂರು ಬಾವಾ, ಕುಮಾರ್ ಮೆಂಡನ್ ,ಹರೀಶ್ ಬಂಗೇರ,ಮತ್ತಿತರರು ಉಪಸ್ಥಿತರಿದ್ದರು. ಮೂರು ಧರ್ಮದ ಧಾರ್ಮಿಕ ಮುಖಂಡರು ದೀಪ ಬೆಳಗಿಸಿ ಚುನಾವಣಾ ಚಟುವಟಿಕೆಗೆ ಚಾಲನೆ ನೀಡಿದರು.


Spread the love