ಬೆಂಜನಪದವು ಎಸ್ ಡಿಪಿಐ ವಲಯ ಅಧ್ಯಕ್ಷರ ಬರ್ಬರ ಕೊಲೆ

Spread the love

ಬೆಂಜನಪದವು ಎಸ್ ಡಿಪಿಐ ವಲಯ ಅಧ್ಯಕ್ಷರ ಬರ್ಬರ ಕೊಲೆ

ಬಂಟ್ವಾಳ: ಎಸ್ ಡಿಪಿಐ ಅಮ್ಮುಂಜೆ ವಲಯ ಅಧ್ಯಕ್ಷನನ್ನು ದುಷ್ಕರ್ಮಿಗಳು ಬರ್ಬರವಾಗಿ ಕಡಿದು ಕೊಲೆಗೈದ ಘಟನೆ ಬೆಂಜನಪದುವು ಬಳಿ ನಡೆದಿದೆ.

ಮೃತರನ್ನು ಮಲ್ಲೂರು ಅಮ್ಮುಂಜೆ ಕಲಾಯಿ ನಿವಾಸಿ ಅಶ್ರಫ್ (35) ಎಂದು ಗುರುತಿಸಲಾಗಿದೆ.

ಮಾಹಿತಿಗಳ ಪ್ರಕಾರ ಎಸ್ ಡಿಪಿಐ ಸಂಸ್ಥಾಪನ ದಿನಾಚರಣೆಯ ಪ್ರಯುಕ್ತ ಅಶ್ರಫ್ ಕಲಾಯಿ ಧ್ವಜಾರೋಹಣ ನೇರವೇರಿಸಿ ಬಳಿಕ ರಸ್ತೆಯಲ್ಲಿನ ಹೊಂಡಗಳನ್ನು ಮುಚ್ಚುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಸಾರ್ವಜನಿಕರೊಂದಿಗೆ ಸೇರಿ ಶ್ರಮಾದಾನ ಕೂಡ ಮಾಡಿದ್ದರು. ಬಳಿಕ ಅವರ ತಮ್ಮ ರಿಕ್ಷಾದಲ್ಲಿ ಬಾಡಿಗೆಗೆಂದು ತೆರಳೀದ್ದು, ಮೂರು ಬೈಕುಗಳಲ್ಲಿ ಬಂದ ಎಂಟು ಮಂದಿ ದುಷ್ಕರ್ಮಿಗಳ ತಂಡ ಅಶ್ರಫ್ ಅವರನ್ನು ಅಟ್ಟಾಡಿಸಿ ಹಿಡಿದು ಭೀಕರವಾಗಿ ಕೊಲೆಗೈದಿದ್ದಾರೆ ಎಂದು ತಿಳಿದು ಬಂದಿದೆ.

2008 ರಲ್ಲಿ ನಡೆದ ಗಲಭೆಯಲ್ಲೆ ಅಶ್ರಫ್ ವಿರುದ್ದ ಪ್ರಕರಣ ದಾಖಲಿಸಿದ್ದು, ಹಿಂದಿನ ವೈರತ್ವ ಇದಕ್ಕೆ ಕಾರಣ ಎನ್ನಲಾಗಿದೆ. ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಜೆ ಆಸ್ಪತ್ರೆಗೆ ಕಳುಹಿಸಲಾಗಿದೆ.

ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love