ಬೆಳ್ತಂಗಡಿಯಲ್ಲಿ ರಬ್ಬರ್ ಕಾರ್ಖಾನೆ ಸ್ಥಾಪಿಸುವಂತೆ ಸಚಿವರಿಗೆ ಸಂಸದ ನಳಿನ್ ಮನವಿ

Spread the love

ಬೆಳ್ತಂಗಡಿಯಲ್ಲಿ ರಬ್ಬರ್ ಕಾರ್ಖಾನೆ ಸ್ಥಾಪಿಸುವಂತೆ ಸಚಿವರಿಗೆ ಸಂಸದ ನಳಿನ್ ಮನವಿ

ದೆಹಲಿ: ಸಂಸದ  ನಳಿನ್ ಕುಮಾರ್ ಕಟೀಲ್ ಇವರು ದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ.ಸುರೇಶ್ ಪ್ರಭು ಇವರನ್ನು ಭೇಟಿಯಾಗಿ ಬೆಳ್ತಂಗಡಿಯಲ್ಲಿ ರಬ್ಬರ್ ಕಾರ್ಖಾನೆ ಸ್ಥಾಪಿಸುವಂತೆ ಮನವಿ ಮಾಡಿದರು.

ಬೆಳ್ತಂಗಡಿಯಲ್ಲಿ ರಬ್ಬರ್ ಕಾರ್ಖಾನೆ ಸ್ಥಾಪಿಸುವುದರಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ರಬ್ಬರ್ ಬೆಳೆಗಾರರಿಗೆ ತುಂಬಾ ಅನುಕೂಲವಾಗಲಿದೆ ಹಾಗೂ ಬೆಳ್ತಂಗಡಿಯನ್ನು ಒಂದು ವಾಣಿಜ್ಯ ಕೇಂದ್ರಾವನ್ನಾಗಿಸಬಹುದು ಅಲ್ಲದೆ ಇದೆಲ್ಲಾದಕ್ಕೂ ಹೆಚ್ಚಾಗಿ ಬೆಳ್ತಂಗಡಿ ಭಾಗದ ಗ್ರಾಮೀಣ ಯುವಕರಿಗೆ ಉದ್ಯೋಗವನ್ನು ಸೃಷ್ಟಿ ಮಾಡಬಹುದು ಎಂದು ಸಂಸದರು ಸಚಿವರಿಗೆ ಮನವರಿಕೆಮಾಡಿದರು.


Spread the love