ಬೆಳ್ತಂಗಡಿ: ಪ್ರಜಾಪ್ರಭುತ್ವ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಕೊಲೆ ಯತ್ನ

Spread the love

ಬೆಳ್ತಂಗಡಿ: ಪ್ರಜಾಪ್ರಭುತ್ವ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಕೊಲೆ ಯತ್ನ ಶುಕ್ರವಾರ ಮೇ 22 ಉಜಿರೆಯಲ್ಲಿ ನಡೆದಿದೆ.
ಮಹೇಶ್ ಶೆಟ್ಟಿ ತಿಮರೋಡಿ ಸಾಮಾಜಿಕ ಕಾರ್ಯಕರ್ತರಾಗಿದ್ದು ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದಲ್ಲಿ ನ್ಯಾಯ ದೊರಕಿಸುವ ಕುರಿತಾದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದರು.

life-attempt-mahesh-shetty-timarody (2)
ಶುಕ್ರವಾರ ತಿಮರೋಡಿ ವಿರೋಧಿಯಾದ ಶ್ರೀನಾಥ್ ಪ್ರಭು ಅವರು ಮಹೇಶ್ ಶೆಟ್ಟಿಯನ್ನು ಅಫಘಾತ ಮಾಡಿ ಕೊಲ್ಲು ಸಂಚು ಹೂಡಿದ್ದು, ಅದೃಷ್ಟವಶಾತ್ ತಿಮರೋಡಿ ಪಾರಾಗಿದ್ದು, ಇದರಿಂದ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸುದ್ದಿ ತಿಳಿದು ತಿಮರೋಡಿ ಬೆಂಬಲಿಗರು ಶ್ರೀನಾಥ್ ಪ್ರಭು ಮೇಲೆ ಹಲ್ಲೆ ನಡೆಸಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಪೋಲಿಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.


Spread the love