ಬೆಳ್ಳಾರೆ : ಮನೆಗಳ್ಳತನದ ಆರೋಪಿಯ ಬಂಧನ

Spread the love

ಬೆಳ್ಳಾರೆ : ಮನೆಗಳ್ಳತನದ ಆರೋಪಿಯ ಬಂಧನ

ಮಂಗಳೂರು: ಮನೆಗಳ್ಳತನದ ಆರೋಪಿಯನ್ನು ಬಂಧಿಸುವಲ್ಲಿ ಬೆಳ್ಳಾರೆ ಪೋಲಿಸರು ಬುಧವಾರ ಯಶಸ್ವಿಯಾಗಿದ್ದಾರೆ.

ಬಂಧಿತನ್ನು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ನಿವಾಸಿ ಶಿವಮೂರ್ತಿ ಅಲಿಯಾಸ್ ಶಿವಪ್ಪ (34) ಎಂದು ಗುರುತಿಸಲಾಗಿದೆ.

ಏಪ್ರಿಲ್ 6 ರಂದು ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ರಾಧಾ ಎಂಬವರ ಮನೆಯಿಂದ ಬಾಡಿಗೆ ಕೊಠಡಿಯ ಒಳಗೆ ಕಬ್ಬಿಣದ ಪೆಟ್ಟಿಗೆಯಲ್ಲಿ ಇಟ್ಟಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣ ಸುಮಾರು 11ಗ್ರಾಂ ತೂಕ ಮತ್ತು 750 ರೂಪಾಯಿ ನಗದು ಸೇರಿ ಒಟ್ಟು 24,750 ರೂಪಾಯಿ ಮೌಲ್ಶದ ಸ್ವತ್ತನ್ನುಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿರುತ್ತದೆ.

ತನಿಖಾ ಕಾಲದಲ್ಲಿ ಏಪ್ರೀಲ್ 10ರಂದ ಶಿವಮೂರ್ತಿ ಯನ್ನು ಸುಳ್ಶ ತಾಲೂಕಿನ ಬೆಳ್ಳಾರೆ ಗ್ರಾಮದ ಕೊಳಂಬಳ ಎಂಬಲ್ಲಿ ದಸ್ತಗಿರಿ ಮಾಡಿ ಆತನಿಂದ ಕಳುವಾದ ಚಿನ್ನದ ಹಾಗೂ ಬೆಳ್ಳಿಯ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ

ಈ ಕಾರ್ಯಾಚರಣೆಯಲ್ಲಿ ಪ್ರೋಬೇಷನರಿ ಪಿಎಸ್ಐ ಆಂಜನೇಯರೆಡ್ಡಿ,ಎಎಸ್ಐ ಸುಧಾಕರ ˌ ಹೆಡ್ ಕಾನ್ಸಟೇಬಲ್ ಗಳಾದ ನವೀನ, ˌಸತೀಶˌಬಾಲಕೃಷ್ಣ, ಕಾನ್ಸಟೇಬಲ್ ಆದ ಮಂಜುನಾಥ ಎಸ್ ಎಚ್ ಹಾಗು ಪಿಎಸ್ಐ ಡಿ.ಎನ್. ಈರಯ್ಶ ಮತ್ತು ಸಿಬ್ಬಂದಿ ಗಳು ಪಾಲ್ಗೊಂಡಿರುತ್ತಾರೆ.


Spread the love