ಬೈಂದೂರು ದನಗಳ್ಳತನ ಪ್ರಕರಣ – ಓರ್ವ ಆರೋಪಿಯ ಬಂಧನ

Spread the love

ಬೈಂದೂರು ದನಗಳ್ಳತನ ಪ್ರಕರಣ – ಓರ್ವ ಆರೋಪಿಯ ಬಂಧನ

ಬೈಂದೂರು: ಬೈಂದೂರಿನ ಎಳಜಿತ್ ಎಂಬಲ್ಲಿ ಎರಡು ಹಟ್ಟಿಯಿಂದ ದನಗಳನ್ನು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಒರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧೀತನನ್ನು ಗೋಳಿಯಂಗಡಿ ಹೈಕಾಡಿ ನಿವಾಸಿ ಮೊಹಮ್ಮದ್ ಅಝೀಮ್ ಎಂದು ಗುರುತಿಸಲಾಗಿದೆ.

ಬೈಂದೂರು ಠಾಣಾ ವ್ಯಾಪ್ತಿಯ ಎಳಜಿತ್ನಲ್ಲಿ ನ ಸದೆಯಮ್ಮ ಗೌಡ್ತಿ ಅವರ ಮನೆಯಿಂದ 2 ದನ ಹಾಗೂ ಪಕ್ಕದ ಮನೆಯ ಕೊಟ್ಟಿಗೆಯಲ್ಲಿದ್ದ 3 ದನಕರುಗಳನ್ನು ಕದ್ದೊಯ್ಯಲಾಗಿತ್ತು. ಜಾನುವಾರು ಕಳವು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಹಿಂದೂ ಸಂಘಟನೆಗಳು ಜಿಲ್ಲೆಯಾದ್ಯಂತ ಪ್ರತಿಭಟನೆಗಳನ್ನು ನಡೆಸಲಾಗಿತ್ತು.

ಈ ನಡುವೆ ಕದ್ದೊಯ್ದ ದನಗಳನ್ನು ಬೈಂದೂರು ಪೊಲೀಸರು ಕಂಡ್ಲೂರು ಬಳಿಯ ನದೀಮ್ ಎನ್ನುವವರ ಜಾಗದಿಂದ ಪತ್ತೆ ಹಚ್ಚಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಆರೋಪಿ ಮೊಹಮ್ಮದ್ಅ ಝೀಮ್ ಎನ್ನುವವನನ್ನು ಬಂಧಿಸಿದ್ದು ಇನ್ನಷ್ಟು ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


Spread the love