ಬೈಂದೂರು : ವರದಿಗಾರನೆಂದು ಹೇಳಿ ಮಾವನಿಗೆ 2 ಲಕ್ಷ ನೀಡುವಂತೆ ಬೆದರಿಕೆ: ಆರೋಪಿ ಬಂಧನ

Spread the love

ಬೈಂದೂರು: ವಾಹಿನಿಯೊಂದರ ವರದಿಗಾರನೆಂದು ತನ್ನ ಸ್ವಂತ ಮಾವನಿಗೆ 2 ಲಕ್ಷ ರೂಪಾಯಿ ಬೇಡಿಕೆ ಇಟ್ಟು ಪೋಲಿಸರ ಅತಿಥಿಯಾದ ಘಟನೆ ಮಂಗಳವಾರ ನಡೆದಿದೆ.

ಬಂಧಿತನನ್ನು ಬೈಂದೂರು ಉಪ್ಪುಂದ ನಿವಾಸಿ ಪ್ರದೀಪ್ ಖಾರ್ವಿ ಎಂದು ಗುರುತಿಸಲಾಗಿದೆ.

ಜುಲೈ 4 ರಂದು ಪ್ರದೀಪ್ ಖಾರ್ವಿ ತನ್ನ ಮಾವ ಅಣ್ಣಪ್ಪ ಖಾರ್ವಿ ಅವರ ಮೊಬೈಲ್ ಫೋನಿಗೆ ಕರೆ ಮಾಡಿ ನಾನು ರಾಜ್ಯದ ಪ್ರತಿಷ್ಠಿತ ಸುದ್ದಿವಾಹಿನಿಯೊಂದ ವರದಿಗಾರ ಮಾತನಾಡುತ್ತಿರುವುದು  ನಾನು ನಿಮ್ಮ  ಮಾನ ಮರ್ಯಾದೆಯನ್ನು ಹರಾಜು ಮಾಡುತ್ತೇನೆ  ನೀನು 2 ಲಕ್ಷ ರೂಪಾಯಿಯನ್ನು ಸೋಮವಾರ “ಮಣಿಪಾಲ ಬೇಕರಿ”  ಕುಂದಾಪುರಕ್ಕೆ ತೆಗೆದುಕೊಂಡು ಬರಬೇಕು ಇಲ್ಲದಿದ್ದರೆ  ನಿನ್ನ ಮಗನನ್ನು ಕೊಲೆ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದು ನಂತರ ಜುಲೈ 5  ರಂದು ಬೆಳಿಗ್ಗೆ 10:00 ಗಂಟೆಯಿಂದ ಪುನಃ  10 ಸಲ ಕರೆ ಮಾಡಿ “ ನೀನು 2 ಲಕ್ಷ ರೂಪಾಯಿಯನ್ನು ಕೊಡದೇ ಇದ್ದಲ್ಲಿ ನಿನ್ನನ್ನು ಹಾಗೂ ನಿನ್ನ ಮಗನನ್ನು ಕೊಂದು ಬಿಸಾಡುತ್ತೇನೆ ”  ಎಂದು ಬೆದರಿಕೆ ಹಾಕಿರುತ್ತಾನೆ. ಅಣ್ಣಪ್ಪ ಖಾರ್ವಿಯವರು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿದ್ದು, ಹೆದರು 1.5 ಲಕ್ಷ ನೀಡಲು ಒಪ್ಪಿದ್ದು, ಇದೇ ವೇಳೆ ಬೈಂದೂರು ಪೋಲಿಸರಿಗೆ ದೂರು ನೀಡಿದ್ದಾರೆ. ಅಣ್ಣಪ್ಪ ಖಾರ್ವಿಯವರ ದೂರಿನ ಪ್ರಕಾರ ಕಾರ್ಯಪ್ರವೃತ್ತರಾದ ಪೋಲಿಸರು ಆರೋಪಿ ಪ್ರದೀಪ್ ಖಾರ್ವಿಯನ್ನು ಬಂದಿಸಿ ವಿಚಾರಣೆ ನಡೆಸಿದ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ.

ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

 


Spread the love