ಬೈಂದೂರು:  ಶಿರೂರು ಕಾಲೇಜು ಆವರಣದಲ್ಲಿ ಗುಂಡಿನ ಪಾರ್ಟಿ – ಐವರು ವಶಕ್ಕೆ

ಬೈಂದೂರು:  ಶಿರೂರು ಕಾಲೇಜು ಆವರಣದಲ್ಲಿ ಗುಂಡಿನ ಪಾರ್ಟಿ – ಐವರು ವಶಕ್ಕೆ

ಬೈಂದೂರು: ಶಿರೂರು ಜ್ಯೂನಿಯರ್ ಕಾಲೇಜು ಬಳಿ ಸಾರ್ವಜನಿಕ ಮೈದಾನದಲ್ಲಿ ಕುಳಿತು ಮದ್ಯಪಾನ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಐವರನ್ನು ಬೈಂದೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮೇ 13 ರಂದು ತಿಮ್ಮೇಶ ಬಿ ಎನ್, ಪೊಲೀಸ್ ಉಪನಿರೀಕ್ಷಕರು, ಬೈಂದೂರು ಪೊಲೀಸ್ ಠಾಣೆ ಇವರಿಗೆ ಶಿರೂರು ಗ್ರಾಮದ ಶಿರೂರು ಜ್ಯೂನಿಯರ್ ಕಾಲೇಜು ಬಳಿ ಸಾರ್ವಜನಿಕ ಮೈದಾನದಲ್ಲಿ ಕೆಲವು ವ್ಯಕ್ತಿಗಳು ಕುಳಿತು ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ ಎಂಬುದಾಗಿ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ನೋಡಿದಾಗ ಶಿರೂರು ಜ್ಯೂನಿಯರ್ಕಾಲೇಜು ಬಳಿ ಸಾರ್ವಜನಿಕ ಮೈದಾನದಲ್ಲಿ 5 ಜನರು ಕುಳಿತುಕೊಂಡು ಗ್ಲಾಸಿನಲ್ಲಿ ಮದ್ಯಪಾನವನ್ನು ಹಾಕಿಕೊಂಡು ಕುಡಿಯುತ್ತಿರುವುದು ಕಂಡು ಬಂದಿದ್ದು ಸಾರ್ವಜನಿಕ ಮೈದಾನದಲ್ಲಿ ಮದ್ಯಪಾನ ಮಾಡುತ್ತಿದ್ದ ಶಿರೂರು ಕೆಸರಕೋಡಿ ನಿವಾಸಿ ಮುಕ್ರಿ ರಫೀಕ್ (38), ಹಡವಿನ ಕೋಣೆ ನಿವಾಸಿ ಮಾಮ್ದು ಶಬ್ಬೀರ್ (61), ಬಾವು ಉಮ್ಮರ್ (50), ನೀರ್ಗದ್ದೆ ನಿವಾಸಿ ವೆಂಕಟೇಶ ಪೂಜಾರಿ (29), ಕೆ. ಎಂ. ಅಶ್ರಫ್ (42) ಎಂಬವರನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.

ಅಲ್ಲದೆ ಅವರ ಬಳಿ ಇದ್ದ 3 ಪ್ಲಾಸ್ಟಿಕ್ ಗ್ಲಾಸ್, 180 ML ನ MYSORE LANCER ಎಂಬ ಹೆಸರಿನ ಅರ್ಧದಷ್ಟು ಮದ್ಯ ಇರುವ 2 ಬಾಟಲಿ, ಖಾಲಿಯಾಗಿರುವ BLACK FORT ಎಂಬ ಹೆಸರಿನ 650 MLನ ಬಿಯರ್ ಬಾಟಲಿ 1ನ್ನು ಮತ್ತು ಖಾಲಿಯಾಗಿರುವ BLACK FORT ಎಂಬ ಹೆಸರಿನ 500 MLನ ಬಿಯರ್ ಟಿನ್ 1ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.