ಬೈಕಿಗೆ ಟಿಪ್ಪರ್ ಢಿಕ್ಕಿ: ಯುವ ಫೋಟೊಗ್ರಾಫರ್ ದುರ್ಮರಣ

Spread the love

ಬೈಕಿಗೆ ಟಿಪ್ಪರ್ ಢಿಕ್ಕಿ: ಯುವ ಫೋಟೊಗ್ರಾಫರ್ ದುರ್ಮರಣ

ಕುಂದಾಪುರ: ಟಿಪ್ಪರ್ ವಾಹನವೊಂದು ಢಿಕ್ಕಿಯಾದ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಯುವಕನ ತಲೆಗೆ ಗಂಭೀರ ಗಾಯಗಳಾಗಿ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ತ್ರಾಸಿ ಪೆಟ್ರೋಲ್ ಬಂಕ್ ಬಳಿ ಮಂಗಳವಾರ ವರದಿಯಾಗಿದೆ.

ಮೃತರನ್ನು ಬೈಕ್ ಸವಾರ ಕುಂದಾಪುರದ ಕುಂದೇಶ್ವರ ದೇವಸ್ಥಾನ ಬಳಿಯ ನಿವಾಸಿ ನಾರಾಯಣ ಪೂಜಾರಿ ಅವರ ಏಕೈಕ ಪುತ್ರ ರಾಜೇಶ ಪೂಜಾರಿ (26) ಮೃತಪಟ್ಟವರು.

rajesh-poojary-accident-kundapur rajesh-poojary-accident-kundapur-00 rajesh-poojary-accident-kundapur-01

 ರಾಜೇಶ್ ಅರೆಕಾಲಿಕ ಫೋಟೊಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದರು. ಇಂದು ಬೆಳಿಗ್ಗೆ ತ್ರಾಸಿಯಿಂದ ಬಂದ ಕರೆಯ ಮೇರೆಗೆ ತ್ರಾಸಿಗೆ ಹೋಗಿದ್ದ ರಾಜೇಶ್ ಬೈಕ್ಗೆ ತ್ರಾಸಿ ಪೆಟ್ರೋಲ್ ಬಂಕ್ ಎದುರು ಟಿಪ್ಪರ್ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ರಾಜೇಶ್ ತಲೆಗೆ ಗಂಭೀರ ಏಟಾಗಿ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ.

ಮೃತ ರಾಜೇಶ್ ಸ್ಥಳೀಯಾವಾಗಿ ಜನಾನುರಾಗಿ ಯುವಕರಾಗಿದ್ದು ಅಪಾರ ಸ್ನೇಹಿತರನ್ನು ಹೊಂದಿದ್ದರು. ಮನೆಯಲ್ಲಿ ಏಕೈಕ ಮಗನಾಗಿದ್ದ ರಾಜೇಶ್ ಇಬ್ಬರು ಸಹೋದರಿಯರನ್ನು ಅಗಲಿದ್ದು ಅವರ ಆಕ್ರಂದನ ಆಸ್ಪತ್ರೆಯಲ್ಲಿ ನೆರೆದವರ ಮನ ಕಲಕಿತು. ರಾಜೇಶ್ ಸಾವಿನಿಂದ ಅವರ ಕುಟುಂಬ ಮತ್ತು ಸ್ನೇಹಿತರು ತೀವ್ರ ಆಘಾತಕ್ಕೆ ಒಳಗಾಗಿದ್ದು ಛಾಯಾಗ್ರಾಹಕರ ದೊಡ್ಡ ತಂಡವೇ ಆಸ್ಪತ್ರೆ ಸಮೀಪ ಬಂದು ಕಂಬನಿಗೆರೆಯುತ್ತಿದ್ದ ದೃಶ್ಯ ಕಂಡುಬಂತು.


Spread the love