ಬೈಲೂರು ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾಗಿ ರಮೇಶ್ ಕಾಂಚನ್ ನಾಮಪತ್ರ ಸಲ್ಲಿಕೆ

Spread the love

ಬೈಲೂರು ವಾರ್ಡಿನ ಅಭ್ಯರ್ಥಿಯಾಗಿ ರಮೇಶ್ ಕಾಂಚನ್ ನಾಮಪತ್ರ ಸಲ್ಲಿಕೆ

ಉಡುಪಿ: ಉಡುಪಿ ನಗರಸಭಾ ಚುನಾವಣೆಗೆ ಬೈಲೂರು ವಾರ್ಡಿನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರಮೇಶ್ ಕಾಂಚನ್ ಅವರು ಶನಿವಾರ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವ ಮುನ್ನ ದೇವರಿಗೆ ಪೂಜೆ ಸಲ್ಲಿಸಿ, ಇಂದು ರಮಾನಂದ ಭಟ್ ಅವರ ಮನೆಯಿಂದ ಹೊರಟು ಪತ್ನಿ ಶೋಭಾ ಕಾಂಚನ್ ಅವರ ಜೊತೆ ನಗರಸಭೆಗೆ ಆಗಮಿಸಿ ಚುನಾವಣಾ ಉಸ್ತುವಾರಿ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ಈ ವೇಳೆ ಕಾಂಗ್ರೆಸ್ ನಾಯಕರಾದ ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಡಿ’ಆಲ್ಮೇಡಾ, ಮ್ಯಾಕ್ಷಿಮ್ ಡಿಸೋಜಾ, ಪ್ರಶಾಂತ್ ಜತ್ತನ್ನ, ಚಂದ್ರಿಕಾ ಶೆಟ್ಟಿ, ಯುವ ಕಾಂಗ್ರೆಸ್ ನಾಯಕರಾದ ನೀರಜ್ ಪಾಟೀಲ್, ಸಂಜಯ್ ಆಚಾರ್ಯ, ಹರ್ಶಿತ್ ಆಚಾರ್ಯ, ನಬೀಲ್ ಉದ್ಯಾವರ ಹಾಗೂ ಅಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love