ಬ್ಯಾಟರಿ ಕಳ್ಳತನದ ಆರೋಪಿಯ ಬಂಧನ

Spread the love

ಬ್ಯಾಟರಿ ಕಳ್ಳತನದ ಆರೋಪಿಯ ಬಂಧನ

ಬಂಟ್ವಾಳ: ಬ್ಯಾಟರಿ ಕಳ್ಳತನದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮೂಡಬಿದ್ರೆ ತಾಲೂಕು ಪುಚ್ಚಮುಗೇರು ನಿವಾಸಿ ಹರೀಶ್ ಪೂಜಾರಿ ( 40) ಎಂದು ಗುರುತಿಸಲಾಗಿದೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದಲ್ಲಿ 4 ದಿನಗಳ ಹಿಂದೆ ನಿಲ್ಲಿಸಿದ್ದ ಟಿಪ್ಪರ್ ವಾಹನದಿಂದ ಬ್ಯಾಟರಿ ಕಳ್ಳತನ ಪ್ರಕರಣಕ್ಕೆ ಸಂಬಂದಿಸಿ ಬಂಟ್ವಾಳ ಪಂಜಿಕಲ್ಲು ನಿವಾಸಿ ರಾಮ ಚಂದ್ರ ಕುಲಾಲ್ (54 ವರ್ಷ) ಎಂಬವರು ನೀಡಿದ ದೂರಿನಂತೆ ಕಲಂ 379 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ ಸದರಿ ಕಳವು ಪ್ರಕರಣದಲ್ಲಿ ಮೂಡಬಿದ್ರೆ ತಾಲೂಕು ಪುಚ್ಚಮುಗೇರು ನಿವಾಸಿ ಹರೀಶ್ ಪೂಜಾರಿ (40ವರ್ಷ) ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತನ ಬಳಿ ಕಳುವಾದ ಬ್ಯಾಟರಿಯು ಪತ್ತೆಯಾಗಿರುತ್ತದೆ. ಈ ವೇಳೆಯಲ್ಲಿ ಸದರಿ ಅಸಾಮಿಯ ಬಳಿ ಹೋಂಡಾ ಡಿಯೋ ಬೈಕ್ ಒಂದು ವಶಪಡಿಸಿಕೊಂಡಿದ್ದು, ಅದು ಮಂಗಳೂರು ನಗರದ ವೆನ್ಲಾಕ್ ಆಸ್ಪತ್ರೆಯ ಬಳಿ ಕಳವು ಮಾಡಿರುವುದಾಗಿ ತಿಳಿದುಬಂದಿರುತ್ತದೆ. ಆರೋಪಿತನು ಇನ್ನು ಬೇರೆ ಕಡೆಗಳಲ್ಲಿ ಬ್ಯಾಟರಿ ಕಳ್ಳತನ ಮಾಡಿದ ಬಗ್ಗೆ ಮಾಹಿತಿ ಇದ್ದು ಈ ಬಗ್ಗೆ ತನಿಖೆ ಮುಂದುವರಿದಿರುತ್ತದೆ.


Spread the love