‘ಬ್ರದರ್ಸ್’ ಸರ್ಕಾರ ಇರುವುದರಿಂದ ಉಡುಪಿಯಲ್ಲಿ ಗ್ಯಾಂಗ್ ವಾರ್ ನಡೆಸಲು ಧೈರ್ಯ ಬಂದಿದೆ – ರಘುಪತಿ ಭಟ್

Spread the love

‘ಬ್ರದರ್ಸ್’ ಸರ್ಕಾರ ಇರುವುದರಿಂದ ಉಡುಪಿಯಲ್ಲಿ ಗ್ಯಾಂಗ್ ವಾರ್ ನಡೆಸಲು ಧೈರ್ಯ ಬಂದಿದೆ – ರಘುಪತಿ ಭಟ್

ಉಡುಪಿ: ರಾಜ್ಯದಲ್ಲಿ ಬ್ರದರ್ಸ್ ಸರ್ಕಾರ ಇರುವುದರಿಂದ ಗ್ಯಾಂಗ್ ವಾರ್ ಮಾಡಲು ಈ ಸಂಘಟನೆ ಗೆ ಧೈರ್ಯ ಬಂದಿದೆ ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಉಡುಪಿಯಲ್ಲಿ ಇಂತಹ ಘಟನೆ ನಡೆದಿರುವುದು ನಂಬಲು ಅಸಾಧ್ಯವಾಗಿದ್ದು ಜನರಲ್ಲಿ ಭಯಾನಕ ವಾತಾವರಣ ಸೃಷ್ಟಿಯಾಗಿದೆ. ಸಿನಿಮಾದಲ್ಲಿ ನಡೆದಂತೆ ಉಡುಪಿಯಲ್ಲಿ ಗ್ಯಾಂಗ್ ವಾರ್ ನಡೆದಿದೆ ಇದು ಊಹಿಸಲು ಸಾಧ್ಯವಿಲ್ಲದ ಘಟನೆಯಾಗಿದ್ದು ರಾಜ್ಯದಲ್ಲಿ ಬ್ರದರ್ಸ್ ಸರ್ಕಾರ ಇರುವ ಕಾರಣ ಏನು ಬೇಕಾದ್ರೂ ಮಾಡ್ಬೋದು ಅನ್ನೋ ಧೈರ್ಯ ಇದೆ. ಯೋಗಿಯಂತಹ ಸರ್ಕಾರ ಇದ್ರೆ ಇಂತಹ ಕೃತ್ಯ ನಡೆಯುತ್ತಿರಲಿಲ್ಲ. ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ ಗಳನ್ನ ಮಟ್ಟ ಹಾಕಲಾಗುತ್ತಿದೆಅಲ್ಲಿ ಹಿಂದೂ ಮುಸ್ಲೀಂ ಎಲ್ಲರೂ ಸಂತೋಷದಲ್ಲಿದ್ದಾರೆ ಇಲ್ಲಿ ಬ್ರದರ್ಸ್ ಸರ್ಕಾರ ಇರುವ ಕಾರಣ ಕ್ರಿಮಿನಲ್ ಗಳು ಹಾರಾಟ ನಡೆಸುತ್ತಿದ್ದಾರೆ ಎಂದರು.

ಕರಾವಳಿ ಭಾಗದ ಮೂಲಭೂತವಾದಿ ಮುಸ್ಲೀಂ ಸಂಘಟನೆ ಯಾವ ಮಟ್ಟಿಗೆ ಬೆಳೆದಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ಹಿಂದೂ ಸಂಘಟನೆ, ಹಿಂದೂ ನಾಯಕರ ಮೇಲೆ ಈ ರೀತಿ ನಡೆದರೆ ಎನ್ನುವ ಭಯ ಇದೆ. ಸರ್ಕಾರ ಗರುಡ ಸಂಘಟನೆಯಲ್ಲಿರುವ ಎಲ್ಲರನ್ನ ತನಿಖೆಗೆ ಒಳಪಡಿಸಬೇಕು. ರಾಜ್ಯದಲ್ಲಿ ಹಿಂದೂ ನಾಯಕರಿಗೆಲ್ಲ ಬೆದರಿಕೆ ಇದೆ. ಹಿಜಾಬ್ ವಿವಾದದ ವೇಳೆ ನನ್ನ ಹಾಗೂ ಕುಟುಂಬದ ಮೇಲೂ ಬೆದರಿಕೆ ಇತ್ತು. ಗರುಡ ಎಂಬ ಮೂಲಭೂತ ಸಂಘಟನೆ ಗೋ ಸಾಗಾಟಕ್ಕೆ ಬೆಂಬಲ ಕೊಡುವ ಸಂಘಟನೆ ಇದರ ವಿರುದ್ದ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಕರಾವಳಿಗೆ ಆತಂಕದ ದಿನ ಬರಲಿದೆ ಎಂದರು.

ಡ್ರಗ್ಸ್ ಸೇವಿಸಿದವರೇ ಇಂತಹ ಗ್ಯಾಂಗ್ ವಾರ್ ನಡೆಸಲು ಸಾಧ್ಯವಿದ್ದು ಡ್ರಗ್ಸ್ ಜಾಲವನ್ನ ವಿಸ್ತರಿಸಿರುವುದು ಇದೇ ಸಂಘಟನೆ ಯಾವ ಮೂಲದಿಂದ ಡ್ರಗ್ಸ್ ಬರುವ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ದಾವಣಗೆರೆ ಲಾಕಪ್ ಡೆತ್ ಪ್ರಕರಣದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಕಾನೂನು ಕೈಗೆತ್ತಿಕೊಳ್ಳುವ ವ್ಯವಸ್ಥೆ ಕಾಂಗ್ರೆಸ್ ನೇತೃತ್ವದಲ್ಲಿ ಆಗುತ್ತಿದೆ. ಮಂತ್ರಿಗಳಿಂದ, ಸರ್ಕಾರದಿಂದ ರಕ್ಷಣೆ ಸಿಗುತ್ತೆ ಎನ್ನುವ ಭಾವನೆ ಸಾರ್ವಜನಿಕರಲ್ಲಿ ಬರುತ್ತಿದೆ. ಕಾನೂನು ಸುವ್ಯವಸ್ಥೆ ಗಟ್ಟಿಗೊಳಿಸುವ, ಚುರುಕುಗೊಳಿಸುವ ಕೆಲಸ ಆಗಬೇಕು. ಇಲ್ಲವಾದರೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಲಿದ್ದು, ಗೃಹ ಇಲಾಖೆ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದರು.


Spread the love