ಬ್ರಹ್ಮಾವರದಲ್ಲಿ ಲಾಕ್ ಡೌನ್ ವೇಳೆ ಲಿಫ್ಟ್ ನೀಡುವುದಾಗಿ ನಂಬಿಸಿ ಮಹಿಳೆಯ ಮೇಲೆ ಅತ್ಯಾಚಾರ ಯತ್ನ

Spread the love

ಬ್ರಹ್ಮಾವರದಲ್ಲಿ ಲಾಕ್ ಡೌನ್ ವೇಳೆ ಲಿಫ್ಟ್ ನೀಡುವುದಾಗಿ ನಂಬಿಸಿ ಮಹಿಳೆಯ ಮೇಲೆ ಅತ್ಯಾಚಾರ ಯತ್ನ

ಉಡುಪಿ: ಲಾಕ್ ಡೌನ್ ವೇಳೆ ಉಡುಪಿ ಜಿಲ್ಲೆಯಲ್ಲಿ ನಡೆಯಿತು ನಾಗರೀಕ ಸಮಾಜ ತಲೆತಗ್ಗಿಸಬೇಕಾದ ಕೃತ್ಯ ನಡೆದಿದ್ದು ವ್ಯಕ್ತಿಯೋರ್ವ ಲಿಫ್ಟ್ ಕೊಡುವುದಾಗಿ ನಂಬಿಸಿ ಮಹಿಳೆಯ ಮೇಲೆ ಅತ್ಯಾಚಾರ ಯತ್ನ ನಡೆಸಿದ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೇ 1 ರಂದು ಮಹಿಳೆಯೋರ್ವರು ಬ್ರಹ್ಮಾವರ ಆಪಾರ್ಟ್ ಮೆಂಟ್ ವೊಂದರಲ್ಲಿ ಕೆಲಸ ನಿರ್ವಹಿಸಿ ವಾಪಾಸು ಮನೆಗೆ ಹೋಗುವುದಕ್ಕಾಗಿ ಬ್ರಹ್ಮಾವರ ಶ್ಯಾಮಿಲಿ ಶನಾಯ ಹಾಲ್ ಬಳಿ ಉಡುಪಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ವ್ಯಕ್ತಿಯೋರ್ವ ಬೈಕ್ ನಲ್ಲಿ ಬಂದು ಡ್ರಾಪ್ ನೀಡುವುದಾಗಿ ತಿಳಿಸಿದ್ದು, ಮಹಿಳೆ ತನ್ನನ್ನು ಸಂತೆಕಟ್ಟೆಗೆ ಬಿಡಿ ಎಂದು ಹೇಳಿ ತನ್ನಲ್ಲಿರುವ ಅಕ್ಕಿ ಸಾಮಾಗ್ರಿ ಕಿಟ್ನ್ನು ಹಿಡಿದುಕೊಂಡು ಆರೋಪಿಯ ಮೋಟಾರ್ ಸೈಕಲ್ ನ ಹಿಂಬದಿ ಕುಳಿತು ಸಂತೆಕಟ್ಟೆ ಕಡೆಗೆ ಹೋಗುತ್ತಿರುವಾಗ, ಆರೋಪಿಯು ತನ್ನ ಮೋಟಾರ್ ಸೈಕಲ್ನ್ನು ರುಡ್ಸೆಟ್ ಕ್ರಾಸ್ನಲ್ಲಿ ಎಡಕ್ಕೆ ಸ್ಪೀಡ್ ಆಗಿ ಚಲಾಯಿಸಿದ್ದು, ಹತ್ತಿರದ ಹಾಡಿಯೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಹಿಳೆಯು ಪೊಲೀಸರಿಗೆ ತಿಳಿಸುವುದಾಗಿ ಹೇಳಿದ್ದಕ್ಕೆ ಕೊಂದು ಹಾಕುವುದಾಗಿ ಬೆದರಿಕೆ ಹಾಕಿ ಸ್ವಲ್ಪ ದೂರ ಹೋಗಿ ಕಲ್ಲು ಹೆಕ್ಕಲು ಹೋಗಿದ್ದು ಮಹಿಳೆ ಆತನಿಂದ ತಪ್ಪಿಸಿಕೊಂಡು ಬಂದು ಬ್ರಹ್ಮಾವರ ಪೊಲೀಸರಿಗೆ ದೂರು ನೀಡಿದ್ದಾಳೆ.

ಮಹಿಳೆಯ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿರುವ ಬ್ರಹ್ಮಾವರ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.


Spread the love