ಬ್ರಹ್ಮಾವರ: ಕತ್ತಿಯಿಂದ ಕಡಿದು ಅಸ್ಸಾಂ ಯುವಕನ ಕೊಲೆ

Spread the love

ಬ್ರಹ್ಮಾವರ: ಶಿರೂರು ಮೂರ್ಕೈ ಬಳಿಯ ಮದುಮನೆ ಎಸ್ಟೇಟಿನಲ್ಲಿ ಅಸ್ಸಾಂನ ಯುವಕನೋರ್ವನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ಇಂದು ನಡೆದಿದೆ.
ಕೊಲೆಗೀಡಾದವನನ್ನು ಅಸ್ಸಾಂನ ಮಹೇಂದ್ರರಾಜ ಬೋನ್ಸಿ(22) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿಗಳನ್ನು ಅಸ್ಸಾಂನ ನಯನ ದಾಸ್, ಸುಕ್ಲೇಶ್ವರ ಸರೋನಿಯ, ಜಯಂತ ದಾಸ್ ಎಂದು ಗುರುತಿಸಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮಂದಾರ್ತಿಯ ಗೇರುಬೀಜ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಬೋನ್ಸಿಗೆ ಜು.5ರಂದು ರಾತ್ರಿ ವೇಳೆ ಆರೋಪಿಗಳು ದೂರವಾಣಿ ಕರೆ ಮಾಡಿ ಬೈದಿದ್ದು, ಈ ಕುರಿತು ವಿಚಾರಿಸಲು ಬೋನ್ಸಿ, ತನ್ನ ಗೆಳೆಯರಾದ ಮ್ರದುಲ್ ಸರೋನಿಯ, ಪೂಲನ್ ಬರ್ಮನ್, ಮಿಲನ್ ಬರ್ಮನ್ ಎಂಬವರ ಜೊತೆ ಯಲ್ಲಿ ಜು.6ರಂದು ಮಧ್ಯಾಹ್ನ ವೇಳೆ ಮದುಮನೆ ಎಸ್ಟೇಟ್ ಬಳಿ ಹೋಗಿದ್ದರು. ಆಗ ಮೂವರು ಆರೋಪಿಗಳು ಬೋನ್ಸಿಯನ್ನು ಹಿಡಿದು ಕತ್ತಿಯಿಂದ ಬೆನ್ನಿಗೆ ಕಡಿದು, ಹಣೆಗೆ ಹೊಡೆದು ಹಲ್ಲೆ ನಡೆಸಿದರು. ಇದರಿಂದ ಗಂಭೀರವಾಗಿ ಗಾಯಗೊಂಡ ಬೋನ್ಸಿ ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೆ ಮಧ್ಯಾಹ್ನ 2ಗಂಟೆಗೆ ಮೃತಪಟ್ಟರು. ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಬ್ರಹ್ಮಾವರ ಪೊಲೀಸರು ತನಿಖೆ ನಡೆಸುತ್ತಿ ದ್ದಾರೆ.


Spread the love