ಬ್ರಹ್ಮಾವರ: ಬಸ್ಸು- ಬೈಕ್ ನಡುವೆ ಅಪಘಾತ – ಸವಾರ ಮೃತ್ಯು

Spread the love

ಬ್ರಹ್ಮಾವರ: ಬಸ್ಸು- ಬೈಕ್ ನಡುವೆ ಅಪಘಾತ – ಸವಾರ ಮೃತ್ಯು

ಬ್ರಹ್ಮಾವರ: ಬೈಕ್ ಮತ್ತು ಬಸ್ಸಿನ ನಡುವೆ ನಡೆದ ಅಫಘಾತದಲ್ಲಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರ ಧರ್ಮಾವರ ಅಡಿಟೋರಿಯಂ ಬಳಿ ಬುಧವಾರ ಸಂಭವಿಸಿದೆ.

ಮೃತ ಯುವಕನನ್ನು ಬೈಕ್ ಸವಾರ ಉಪ್ಪಿನಕೋಟೆ ನಿವಾಸಿ ಪ್ರೀತಮ್ ಡಿಸಿಲ್ವಾ (30) ಎಂದು ಗುರುತಿಸಲಾಗಿದೆ.

ಥಮಿಕ ಮಾಹಿತಿಗಳ ಪ್ರಕಾರ ಖಾಸಗಿ ಎಕ್ಸ್ ಪ್ರೆಸ್ ಬಸ್ಸು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಸವಾರ ಪ್ರೀತಮ್ ಡಿಸಿಲ್ವಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love