ಬ್ರಹ್ಮಾವರ ಬ್ಲಾಕ್ ಅಧ್ಯಕ್ಷರ ನೇಮಕ- ಜಿಲ್ಲಾ ಕಾಂಗ್ರೆಸ್ ವೀಕ್ಷಕರಿಂದ ಅಭಿಪ್ರಾಯ ಸಂಗ್ರಹ

Spread the love

ಬ್ರಹ್ಮಾವರ ಬ್ಲಾಕ್ ಅಧ್ಯಕ್ಷರ ನೇಮಕ- ಜಿಲ್ಲಾ ಕಾಂಗ್ರೆಸ್ ವೀಕ್ಷಕರಿಂದ ಅಭಿಪ್ರಾಯ ಸಂಗ್ರಹ

ಬ್ರಹ್ಮಾವರ : ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಗಾಗಿಕಾರ್ಯಕರ್ತರ ಹಾಗೂ ಮುಖಂಡರುಗಳ ಅಭಿಪ್ರಾಯ ಸಂಗ್ರಹ ಜಿಲ್ಲಾ ವೀಕ್ಷಕರ ನೇತೃತ್ವದಲ್ಲಿ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಜರುಗಿತು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರ ಆದೇಶದ ಮೇರೆಗೆ ವೀಕ್ಷಕರಾಗಿ ನಿಯುಕ್ತಿಗೊಂಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಬಿ. ಹಿರಿಯಣ್ಣ, ರಾಜು ಪೂಜಾರಿ ಹಾಗೂ ಪ್ರಖ್ಯಾತ್ ಶೆಟ್ಟಿಯವರು ಭಾಗವಹಿಸಿ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಗಾಗಿಕಾರ್ಯಕರ್ತರ ಹಾಗೂ ಮುಖಂಡರುಗಳ ಅಭಿಪ್ರಾಯ ಪಡೆದರು. ಎಲ್ಲರ ಅಭಿಪ್ರಾಯವನ್ನು ಕ್ರೋಡಿಕರಿಸಿ ಜಿಲ್ಲಾ ಕಾಂಗ್ರೆಸ್ ಮೂಲಕ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಕಳುಹಿಸಿಕೊಡಲು ನಿರ್ಧರಿಸಲಾಯಿತು.

ಈ ವೇಳೆ ಬ್ರಹ್ಮಾವರ ಬ್ಲಾಕಿನ ಮಾಜಿ ಅಧ್ಯಕ್ಷರಾದ ಹೆಚ್. ನಿತ್ಯಾನಂದ ಶೆಟ್ಟಿ, ಜಿಪಂ ಸದಸ್ಯರಾದ ಮೈರ್ಮಾಡಿ ಸುಧಾಕರ್ ಶೆಟ್ಟಿ, ಕಾಂಗ್ರೆಸ್ ನಾಯಕರಾದ ವೆರೋನಿಕಾ ಕರ್ನೆಲಿಯೋ, ರೆಹಮತುಲ್ಲಾ, ಭುಜಂಗ ಶೆಟ್ಟಿ, ಗೋಪಿ ನಾಯ್ಕ್, ಅಶೋಕ್ ಶೆಟ್ಟಿ, ಮೈರ್ಮಾಡಿ ಹರೀಶ್ ಶೆಟ್ಟಿ, ಕೀಳಂಜೆ, ದಿವಾಕರ್ ಹೇರೂರ್, ನಿತ್ಯಾನಂದ ಕೆಮ್ಮಣ್ಣು, ರವಿರಾಜ್ ಶೆಟ್ಟಿ, ಉಮೇಶ್ ಶೆಟ್ಟಿ, ರಘುರಾಮ್ ಶೆಟ್ಟಿ, ಬ್ಯಾಪ್ಟಿಸ್ಟ್ ಡಯಾಸ್, ರಾಘವೆಂದ್ರ ಶೆಟ್ಟಿ, ವಿಘ್ನೇಶ್ ಶೆಟ್ಟಿ, ವಿವೇಕ್ ಶೆಟ್ಟಿ, ವೆಂಕಟೇಶ್ ಸುವರ್ಣ, ನರಸಿಂಹ ಪೂಜಾರಿ, ನಿತ್ಯಾನಂದ ಬಿಕೆ ಮಹೇಶ್ ಮೊಯ್ಲಿ, ರಮೇಶ್ ಕರ್ಕೆರಾ,ಮೆಲ್ವಿನ್ ಕಲ್ಯಾಣಪುರ, ರಾಜೇಶ್ ಶೆಟ್ಟಿ, ಅಲ್ತಾಫ್, ಪ್ರಶಾಂತ್ ಸುವರ್ಣ, ಸತೀಶ್ ಉಪ್ಪೂರು, ಕುಮಾರ್ ಹಾರಾಡಿ, ತಾಝುದ್ದೀನ್,ಸೂರ್ಯ ಸಾಲಿಯಾನ್, ಗಿರೀಶ್ ಕಾಮತ್,ಸತೀಶ್ ಕಲ್ಯಾಣಪುರ, ಕೃಷ್ಣಪ್ಪ ಪೂಜಾರಿ, ವೈಶಾಖ್ ಶೆಟ್ಟಿ, ಹಾಗೂ ಇತರರು ಉಪಸ್ಥಿತರಿದ್ದರು.


Spread the love