ಬ್ರಹ್ಮಾವರ: ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ

Spread the love

ಬ್ರಹ್ಮಾವರ: ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷಗಳ ಅವಧಿಗೆ 13 ನಿರ್ದೇಶಕರುಗಳನ್ನು ಆಯ್ಕೆ ಮಾಡುವ ಬಗ್ಗೆ ಮೇ 9 ನೇ ತಾರೀಖಿಗೆ ಚುನಾವಣೆ ನಿಗದಿಪಡಿಸಲಾಗಿತ್ತು, ಆದರೆ 9 ಜನ ಅಭ್ಯರ್ಥಿಗಳು ಮಾತ್ರ ನಾಮ ಪತ್ರ ಸಲ್ಲಿಸುವುದರಿಂದ ಹಾಗೂ ಸದ್ರಿ  ನಾಮ ಪತ್ರಗಳು ಕ್ರಮಬದ್ದವಾಗಿ ಇರುವುದರಿಂದ ಚುನಾವಣಾಧಿಕಾರಿಗಳಾದ ಉಪವಿಭಾಗಾಧಿಕಾರಿಗಳು, ಕುಂದಾಪುರ ಇವರು ಈ ಕೆಳಗಿನ  9 ಜನರನ್ನು ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿರುದಾಗಿ ಘೋಷಿಸಿರುತ್ತಾರೆ. ಆದುದರಿಂದ ಮೇ 9 ನೇ ತಾರೀಖಿನಂದು ಸಕ್ಕರೆ ಕಾರ್ಖಾನೆಯಲ್ಲಿ ಮತದಾನ ಇರುವುದಿಲ್ಲ.

ಎ ತರಗತಿ ಕಬ್ಬುಬೆಳೆಗಾರರ ಕ್ಷೇತ್ರದಿಂದ ಜಯಶೀಲ ಶೆಟ್ಟಿ ಹೆಚ್, ಜಿ ಆಸ್ತಿಕ ಶಾಸ್ತ್ರಿ, ಕೆಂಚನೂರು ಸೋಮಶೇಖರ ಶೆಟ್ಟಿ, ಮೇಘರತ್ನ ಶೆಟ್ಟಿ, ಎಸ್. ದಿನಕರ ಶೆಟ್ಟಿ, ರಮಾನಂದ ಹೆಗ್ಡೆ, ವಸಂತಿ ಆರ್ ಶೆಟ್ಟಿ ಹಾಗೂ ಕುಮಾರಿ ಶ್ಯಾಮಲ ಭಂಡಾರಿ.

ಬಿ ತರಗತಿ ಸಹಕಾರಿ ಸಂಸ್ಥೆ ಕ್ಷೇತ್ರದಿಂದ ತಿಮ್ಮಪ್ಪ ಪೂಜಾರಿ ಇವರುಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.


Spread the love