ಬ್ರಹ್ಮಾವರ: ಸಾರ್ವಜನಿಕ ಸ್ಥಳದಲ್ಲಿ ಜುಗಾರಿ, ನಾಲ್ವರ ಬಂಧನ – ರೂ. 79,670 ಮೌಲ್ಯದ ಸೊತ್ತು ವಶ

Spread the love

ಬ್ರಹ್ಮಾವರ: ಸಾರ್ವಜನಿಕ ಸ್ಥಳದಲ್ಲಿ ಜುಗಾರಿ, ನಾಲ್ವರ ಬಂಧನ – ರೂ. 79,670 ಮೌಲ್ಯದ ಸೊತ್ತು ವಶ

ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ನಾಲ್ಕು ಮಂದಿಯನ್ನು ಬ್ರಹ್ಮಾವರ ಪೊಲೀಸರು ಭಾನುವಾರ ಬಂಧಿಸಿ, ರೂ. 79,670 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಹರೀಶ್ಪೂಜಾರಿ, ಅನಿಲ್, ಸದಾಶಿವ ಮರಕಾಲ , ಮಹೇಶ ಎಂದು ಗುರುತಿಸಲಾಗಿದೆ.

ಭಾನುವಾರದಂದು ರಾಘವೇಂದ್ರ ಸಿ ಪೊಲೀಸ್ಉಪ ನಿರೀಕ್ಷಕರು ಬ್ರಹ್ಮಾವರ ಪೊಲೀಸ್ ಠಾಣೆ ಇವರಿಗೆ ಉಡುಪಿ ತಾಲೂಕು ಪೆಜಮಂಗೂರು ಗ್ರಾಮದ ಗಾಂಧೀನಗರ ಎಂಬಲ್ಲಿ ಹಾಡಿ ಜಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿದ್ದಾರೆಂದು ಬೆಳಿಗ್ಗೆ 11:00 ಗಂಟೆಗೆ ಸದ್ರಿ ಗ್ರಾಮದ ಬೀಟ್ ಸಿಬ್ಬಂದಿಯಾದ ಮಹೇಂದ್ರರವರಿಗೆ ಖಚಿತ ಮಾಹಿತಿ ತಿಳಿಸಿದ್ದು, ಈ ಮಾಹಿತಿಯನ್ನು ಇಲಾಖಾ ಮೇಲಾಧಿಕಾರಿಯವರಿಗೆ ತಿಳಿಸಿದ್ದು, ಅವರ ನಿರ್ದೇಶನದಂತೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿ, ಆರೋಪಿ ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ನ್ಯಾಯಾಲಯದಿಂದ ಅನುಮತಿ ಪಡೆದು ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಪೆಜಮಂಗೂರು ಗ್ರಾಮದ ಗಾಂಧೀನಗರ ಎಂಬಲ್ಲಿಗೆ ತೆರಳಿ ಇಲಾಖಾ ವಾಹನವನ್ನು ಹಾಡಿಯ ಬದಿಯಲ್ಲಿ ನಿಲ್ಲಿಸಿ ಮರೆಯಲ್ಲಿ ನಿಂತು ನೋಡಿದಾಗ ಹಾಡಿಯ ಒಳಗೆ ಖಾಲಿ ಜಾಗದಲ್ಲಿ 12 ರಿಂದ 15 ಜನರು ಸುತ್ತುವರಿದು ಕುಳಿತಿದ್ದು, ಅದರಲ್ಲಿ ಒಬ್ಬ ವ್ಯಕ್ತಿಯು ಇಸ್ಪೀಟ್ ಎಲೆಯನ್ನು ನೆಲದ ಮೇಲೆ ಇರುವ ಹಳೇಯ ಬ್ಯಾನರ್ಮೇಲೆ ಹಾಕುತ್ತಿದ್ದು, ಉಳಿದವರು ಒಳಗೆ ಹೊರಗೆ ಎಂದು ಹೇಳಿ ಹಣವನ್ನು ಬ್ಯಾನರ್ನ ಮೇಲೆ ಹಾಕುತ್ತಿದ್ದರು.

ಸದ್ರಿ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಒಮ್ಮಲೆ ದಾಳಿ ಮಾಡಿದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಎಲ್ಲರೂ ಓಡಿ ಹೋಗಲು ಪ್ರಯತ್ನಿಸಿದ್ದು, ಅವರ ಪೈಕಿ 4 ಜನರನ್ನು ಹಿಡಿದು ವಶಕ್ಕೆ ತೆಗೆದುಕೊಂಡಿದ್ದು, 7 ಜನರು ಓಡಿ ತಪ್ಪಿಸಿಕೊಂಡಿರುತ್ತಾರೆ.

ವಶಕ್ಕೆ ತೆಗೆದುಕೊಂಡವರ ಹೆಸರು ವಿಳಾಸ ಕೇಳಲಾಗಿ ಅವರ ಹೆಸರು 1) ಹರೀಶ್ಪೂಜಾರಿ 2) ಅನಿಲ್3) ಸದಾಶಿವ ಮರಕಾಲ 4) ಮಹೇಶ ಎಂಬುದಾಗಿ ತಿಳಿಸಿರುತ್ತಾರೆ. ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ 1) ಗಣೇಶ ಮೊಗವೀರ 2) ಅಜಿತ್ಮೊಗವೀರ 3) ಸಂತೋಷ ಮೊಗವೀರ 4) ರಾಜಣ್ಣ ಮೊಗವೀರ 5) ಪ್ರಸಾದ್ಪೂಜಾರಿ, 6) ಮಹೇಶ್7) ಯಶವಂತ ಮೊಗವೀರ ಎಂಬುದಾಗಿ ತಿಳಿಸಿರುತ್ತಾರೆ.

ವಶಕ್ಕೆ ತೆಗೆದುಕೊಂಡವರನ್ನು ವಿಚಾರಿಸಲಾಗಿ ಸದ್ರಿ ಸ್ಥಳದಲ್ಲಿ ನಾವುಗಳು ಹಣವನ್ನು ಪಣವಾಗಿ ಇಟ್ಟುಕೊಂಡು ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿರುವುದಾಗಿ ಒಪ್ಪಿಕೊಂಡಿದ್ದು, ಅವರವರ ತಪ್ಪಿತವನ್ನು ತಿಳಿಯಪಡಿಸಿ ದಸ್ತಗಿರಿ ಮಾಡಿದ್ದು, ಆರೋಪಿತರು ಇಸ್ಪಿಟ್ಜುಗಾರಿ ಆಟವಾಡಿರುವ ಹಳೇಯ ಬ್ಯಾನರ್ಮೇಲೆ ಮೇಲೆ ಹಾಕಿರುವ ಇಸ್ಪೀಟ್ಆಟಕ್ಕೆ ಬಳಸಿದ ನಗದು ರೂಪಾಯಿ 6,170/- ಮತ್ತು ಇಸ್ಪೀಟ್ ಎಲೆಗಳು 52, ಹಾಗೂ ಅವುಗಳನ್ನು ಹಾಕಿದ್ದ ಹಳೇಯ ಬ್ಯಾನರ್ನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಆರೋಪಿತರ ವಶದಲ್ಲಿ ಇದ್ದ ಮೊಬೈಲ್ಪೋನ್ಹಾಗೂ ಬೈಕ್ಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ ನಗದು ಹಣ ಮತ್ತು ಸ್ವತ್ತುಗಳ ಓಟ್ಟು ಅಂದಾಜು ಮೌಲ್ಯ 79,670 ರೂಪಾಯಿ ಆಗಿರುತ್ತದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


Spread the love