ಭಟ್ಕಳ ಪೋಲೀಸರ ಭರ್ಜರಿ ಕಾರ್ಯಾಚರಣೆ: 60 ಲಕ್ಷ ರೂ. ಮೌಲ್ಯದ ಚಿನ್ನ, 61 ಲಕ್ಷ ರೂ. ನಗದು ವಶ, ಇಬ್ಬರ ಬಂಧನ

Spread the love

ಭಟ್ಕಳ ಪೋಲೀಸರ ಭರ್ಜರಿ ಕಾರ್ಯಾಚರಣೆ: 60 ಲಕ್ಷ ರೂ. ಮೌಲ್ಯದ ಚಿನ್ನ, 61 ಲಕ್ಷ ರೂ. ನಗದು ವಶ, ಇಬ್ಬರ ಬಂಧನ

ಭಟ್ಕಳ: ಉತ್ತರ ಕನ್ನಡ ಜಿಲ್ಲೆ ಹೆಬ್ಬಾಗಿಲು ಎನಿಸಿರುವ ಭಟ್ಕಳ ಪೋಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಕುಖ್ಯಾತ ಕಳ್ಲರನ್ನು ಬಂಧಿಸಿದ್ದು 60 ಲಕ್ಷ ರೂ.ಮೌಲ್ಯದ ಚಿನ್ನಾಭರಣ, 61 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.

ಹೂವಿನ ಚೌಕ ಕ್ರಾಸ್ ಬಳಿ ಕಾರ್ಯಾಚರಣೆ ನಡೆಸಿದ್ದ ಪೋಲೀಸರು ಮಹಾದೇವ ಪಾಟೀಲ (33) ಹಾಗೂ ಸಂಜಯ ದೇಶಮುಖ್ ಎಂಬುವ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರೂ ಆರೋಪಿಗಳು ಹುಬ್ಬಳ್ಳಿ ಮೂಲದವರಾಗಿದ್ದಾರೆಂದು ತಿಳಿದುಬಂದಿದೆ.

ಆರೋಪಿಗಳಿಂದ ಒಂದು 1 ಕೆ.ಜಿ 500 ಗ್ರಾಂ ಚಿನ್ನದ ಬಿಸ್ಕೆಟ್, 8 ಚಿನ್ನದ ಗಟ್ಟಿಗಳು, 61 ಲಕ್ಷ ನಗದು, 10 ಲಕ್ಷ ಮೌಲ್ಯದ ಕಾರ್ ಹಾಗೂ ಎರಡು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬುಧವಾರ ತಡರಾತ್ರಿ ಆರೋಪಿಗಳು ಹುಬ್ಬಳ್ಳಿಯಿಂದ ಭಟ್ಕಳಕ್ಕೆ ತೆರಳುತ್ತಿದ್ದ ವೇಳೆ ಪೋಲೀಸರ ಕೈಗೆ ಸಿಕ್ಕಿದ್ದಾರೆ.


Spread the love