ಮಂಗಳೂರಿನಲ್ಲಿ ಪ್ರತಿ ರಾತ್ರಿ 250 ಬಾಲಕಿಯರ ಅತ್ಯಾಚಾರ; ರೆಸ್ಕ್ಯೂ ಎನ್ ಜಿ ಒ ಸಂಸ್ಥೆ

ಮಂಗಳೂರು: ಹದಿಹರೆಯದ ಮಕ್ಕಳು ಅಂತ ರ್ಜಾಲದ ಮೂಲಕ ಅಶ್ಲೀಲ ವೀಡಿಯೊಗಳನ್ನು ವೀಕ್ಷಿಸುತ್ತಿ ರುವುದು ಸಾಮೂಹಿಕ ಅತ್ಯಾಚಾರ, ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಪ್ರಮುಖ ಕಾರಣವಾಗುತ್ತಿರುವ ಹಿನ್ನೆಲೆ ಯಲ್ಲಿ ಅಂತಹ ವೀಡಿಯೊಗಳನ್ನು ತಡೆಗಟ್ಟಲು ಒತ್ತಾಯಿಸಿ ರೆಸ್ಕೂ ಸಂಸ್ಥೆಯು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಲು ನಿರ್ಧರಿಸಿದೆ.

image002rescue-ngo-20160323-002ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸರಕಾರೇತರ ಸಂಸ್ಥೆಯಾಗಿರುವ (ಎನ್‌ಜಿಒ) ರೆಸ್ಕೂನ ಸಂಸ್ಥಾಪಕ ಹಾಗೂ ಲಂಡನ್‌ನ ನೀತಿಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ಬೋಧಕ ಅಭಿಷೇಕ್‌ ಕ್ಲಿಫ‌ರ್ಡ್‌, ಅಶ್ಲೀಲ ವೀಡಿಯೊಗಳ ವೀಕ್ಷಣೆಯು ಹೆಣ್ಣುಮಕ್ಕಳ ಅಕ್ರಮ ಸಾಗಾಟಕ್ಕೆ ಕಾರಣವಾಗುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿನಿಯರ ಸಾಮೂಹಿಕ ಅತ್ಯಾಚಾರಕ್ಕೂ ಪ್ರಮುಖ ಕಾರಣವಾಗುತ್ತಿದೆ ಎಂಬುದು ತಮ್ಮ ಸಮೀಕ್ಷೆಯಿಂದ ದೃಢಪಟ್ಟಿದೆ ಎಂದರು. ಸಂಸ್ಥೆಯು ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಹಾಗೂ ಜಿಲ್ಲೆಗಳಲ್ಲಿ ಅಶ್ಲೀಲ ವೀಡಿಯೊ ವೀಕ್ಷಣೆಯ ದುಷ್ಪರಿ ಣಾಮಗಳ ಕುರಿತಂತೆ ಸಮೀಕ್ಷೆ ನಡೆಸಿದೆ. ಪ್ರತಿ ವರ್ಷ 200 ಕಾಲೇಜುಗಳಲ್ಲಿ 50,000 ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯದ ಬಗ್ಗೆ ಬೋಧನೆ ಮಾಡುತ್ತಿದೆ. ಕರ್ನಾಟಕದಲ್ಲಿ ಈಗಾಗಲೇ ಮೈಸೂರು, ಚಾಮರಾಜನಗರ, ಧಾರವಾಡ, ಬೆಂಗಳೂರು, ಮಂಡ್ಯ, ಗದಗ, ಬೀದರ್‌ಗಳಲ್ಲಿ ಸಮೀಕ್ಷೆ ನಡೆಸಿರುವ ಸಂಸ್ಥೆ, ಮಂಗಳೂರಿನಲ್ಲಿಯೂ ಈ ಬಗ್ಗೆ ಸಮೀಕ್ಷೆ ಕೈಗೊಂಡಿದೆ. ಮಂಗಳೂರಿನ 25 ಕಾಲೇಜುಗಳಲ್ಲಿ 470 ವಿದ್ಯಾರ್ಥಿಗಳ ಸಮೀಕ್ಷೆಯಲ್ಲಿ ಶೇ.68ರಷ್ಟು ಪದವಿ ಹುಡುಗರು ಅಶ್ಲೀಲ ವೀಡಿಯೊ ವೀಕ್ಷಿಸುತ್ತಾರೆ. ಹುಡುಗರು ಸರಾಸರಿ 10ನೆ ತರಗತಿಯಲ್ಲಿ ಅಶ್ಲೀಲ ವೀಡಿಯೊ ವೀಕ್ಷಣೆ ಆರಂಭಿಸುತ್ತಾರೆ. ಶೇ.38ರಷ್ಟು ಪದವಿ ಹುಡುಗಿಯರು ವಾರಕ್ಕೆ ಸರಾಸರಿ 3 ಗಂಟೆಗಳ ಕಾಲ ಇಂತಹ ವೀಡಿಯೊ ವೀಕ್ಷಿಸುತ್ತಾರೆ. ಶೇ. 38ರಷ್ಟು ಪದವಿ ಹುಡುಗರು ಕ್ರೂರವಾದ ಅಶ್ಲೀಲ ವೀಡಿಯೊ ವೀಕ್ಷಣೆ ಮಾಡುತ್ತಾರೆ. ಇಂತಹ ವೀಡಿಯೊಗಳು ಯುವ ಮನಸ್ಸಿನ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತಿದೆ ಎಂದರು. ಟಿವಿ ಹಾಗೂ ಚಲನಚಿತ್ರಗಳಲ್ಲಿ ಸಿಗರೇಟ್‌ ಜಾಹೀರಾತನ್ನು ತೋರಿಸುವುದಕ್ಕೆ ಅನುಮತಿಯಿಲ್ಲ. ಹಾಗಿರುವಾಗ ಇಂತಹ ಅಶ್ಲೀಲ ವೀಡಿಯೊಗಳಿಗೆ ಅವಕಾಶ ಯಾಕೆ ಕಲ್ಪಿಸಬೇಕು ಎಂದವರು ಪ್ರಶ್ನಿಸಿದರು.
ಮಾನವ ಸಾಗಾಟದಿಂದ ಹದಿಹರೆಯದ ಲೈಂಗಿಕ ದುರುಪಯೋಗದ ಬಗ್ಗೆ ನಾಲ್ಕು ರಾಷ್ಟ್ರೀಯ ಸಮೀಕ್ಷೆಯಿಂದ ನಡೆಸಲಾದ ಲೆಕ್ಕಾಚಾರದ ಪ್ರಕಾರ ಮಂಗಳೂರಿನಲ್ಲಿ ಪ್ರತಿ ರಾತ್ರಿ 250 ಬಾಲಕಿಯರು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ನ್ಯಾಷನಲ್‌ ಕ್ರೈಮ್‌ ರೆಕಾರ್ಡ್ಸ್‌ ಬ್ಯೂರೋ, ಎನ್‌ಎಚ್‌ ಆರ್‌ಸಿ, ಬಚ್‌ಪನ್‌ ಬಚಾವೊ ಆಂದೋಲನ, ಹಾಗೂ ಸಿಬಿಐ ಸಂಸ್ಥೆಗಳ ಸಮೀಕ್ಷೆಯ ಮಾಹಿತಿಯಡಿ ಈ ಲೆಕ್ಕಾಚಾರ ಮಾಡಲಾಗಿದ್ದು, ಪಿಯುಸಿ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ಅಶ್ಲೀಲ ಚಿತ್ರ ವೀಕ್ಷಣೆಯು ಅಪಾಯಕಾರಿ ಎಂಬುದನ್ನು ತಿಳಿಸಲು ಪಠ್ಯದಲ್ಲಿ ಸೈಬರ್‌ ನೈತಿಕ ಮೌಲ್ಯಗಳನ್ನು ಅಳವಡಿಸಬೇಕು ಎಂದು ಅಭಿಷೇಕ್‌ ಕ್ಲಿಫ‌ರ್ಡ್‌ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪತ್ರಿಕಾ ಕಾರ್ಯದರ್ಶಿ ವಿಜಿತ್ರ ಸಿ. ಉಪಸ್ಥಿತರಿದ್ದರು.