ಮಂಗಳೂರಿನಲ್ಲಿ ಬಸ್ ಗಳಿಗೆ ಕಲ್ಲೆಸೆತ ಪ್ರಕರಣ: ಇಬ್ಬರ ಬಂಧನ

ಮಂಗಳೂರಿನಲ್ಲಿ ಬಸ್ ಗಳಿಗೆ ಕಲ್ಲೆಸೆತ ಪ್ರಕರಣ: ಇಬ್ಬರ ಬಂಧನ

ಮಂಗಳೂರು: ನಗರದ ವಿವಿಧೆಡೆ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಜೆಪ್ಪು ನಿವಾಸಿ ಮಹಿನ್ ಅಬ್ದುಲ್ ರಹಿಮಾನ್(18) ಹಾಗೂ ಕುದ್ರೋಳಿ ನಿವಾಸಿ ಅಬ್ದುಲ್ ಮನ್ನಾನ್ (21) ಬಂಧಿತ ಆರೋಪಿಗಳು.

ಸೆ.4ರಂದು ಮಂಗಳೂರು ನಗರದ ಬಿಜೈ ಕೆಎಸ್ಸಾರ್ಟಿಸಿ, ಬಲ್ಮಠ, ಫಳ್ನೀರ್, ನಂದಿಗುಡ್ಡೆಯಲ್ಲಿ ಕೆಲವು ಸರಕಾರಿ ಹಾಗೂ ಖಾಸಗಿ ಬಸ್ ಗಳಿಗೆ ಕಲ್ಲು ತೂರಾಟ ನಡೆದಿದ್ದವು. ಇದರಿಂದ ಹಲವು ಬಸ್ ಗಳ ಗಾಜುಗಳಿಗೆ ಹಾನಿಯಾಗಿತ್ತು.

ಈ ಬಗ್ಗೆ ಆಯಾ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿದ್ದವು.