ಮಂಗಳೂರಿನಲ್ಲಿ ಮೊದಲ ಕೊರೊನಾ ವೈರಸ್ ಸೋಂಕು ದೃಢ

ಮಂಗಳೂರಿನಲ್ಲಿ ಮೊದಲ ಕೊರೊನಾ ವೈರಸ್ ಸೋಂಕು ದೃಢ

ಮಂಗಳೂರು: ಇತ್ತೀಚೇಗೆ ದುಬೈ ನಿಂದ ಮಂಗಳೂರಿಗೆ ಆಗಮಿಸಿ ಭಟ್ಕಳ ಮೂಲದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.

ದುಬಾಯಿಯಿಂದ ಮಾರ್ಚ್ 19ರಂದು ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ 22 ವರ್ಷದ ಭಟ್ಕಳ ಮೂಲದ ಯುವಕನನ್ನು ಅಂದು ತಪಾಸಣೆ ನಡೆಸಿ ಆತನ ಗಂಟಲ ಸ್ರಾವದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಮತ್ತು ಆ ದಿನವೇ ಈತನನ್ನು ನಗರದ ವೆನ್ಲಾಕ್ ಆಸ್ಪತ್ರೆಯ ಐಸೊಲೇಷನ್ ವಾರ್ಡ್ ನಲ್ಲಿ ದಾಖಲಿಸಲಾಗಿತ್ತು.

ಆ ಪರೀಕ್ಷೆಯ ವರದಿ ಇಂದು ಲಭ್ಯವಾಗಿದ್ದು ಪಾಸಿಟಿವ್ ಎಂದು ವರದಿ ಬಂದಿದೆ ಮತ್ತು ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಕೋವಿಡ್ 19 ಪ್ರಕರಣ ಪತ್ತೆಯಾದಂತಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Leave a Reply

  Subscribe  
Notify of